Uttara kannda 12 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳ ನಾಶ.ಕಳೆದ ವರ್ಷ ಎಷ್ಟು ನಾಶ ಪಡಿಸಲಾಗಿತ್ತು? ಈಗೆಷ್ಟು?
ಉತ್ತರ ಕನ್ನಡ ಜಿಲ್ಲೆಯ (uttara kannda )ವಿವಿಧ ಪ್ರಕರಣದಲ್ಲಿ ವಶಕ್ಕೆ ಪಡೆದ 12 ಲಕ್ಷಕ್ಕೂ ಅಧಿಕ ಮೌಲ್ಯದ 37 ಕೆ.ಜಿ ತೂಕದ ಮಾದಕ ವಸ್ತುಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ನಾಶಪಡಿಸಿದ್ದಾರೆ.
ಇದನ್ನೂ ಓದಿ:-Uttara kannda :ಐದು ವರ್ಷದಲ್ಲಿ 866 ಗೋವುಗಳ ರಕ್ಷಣೆ -ಈ ವರೆಗೆ ದಾಖಲಾದ ಪ್ರಕರಣ ಎಷ್ಟು ,ಇಲಾಖೆ ವಿವರ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಯಲ್ಲಿ ವಶಪಡಿಸಿಕೊಂಡಿರುವ ಒಟ್ಟು 23 ಪ್ರಕರಣಗಳಲ್ಲಿ ಹಾಗೂ ಪ್ರಕರಣಗಳ FSL ವರದಿ ಹಾಗೂ ವಿಚಾರಣೆಗಾಗಿ ಸ್ಯಾಂಪಲ್ ತೆಗೆದ 14 ಪ್ರಕರಣದಲ್ಲಿನ ಮಾದಕ ವಸ್ತುಗಳನ್ನು ಅಂಕೋಲ ತಾಲೂಕಿನ ಬೋಗ್ರಿಬೈಲ್ ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

12 ಕೆಜಿ 761 ಗ್ರಾಮ್ ಗಾಂಜಾ ಇದರ ಒಟ್ಟು ಮೌಲ್ಯ 4,36,200 , 13 ಕೆಜಿ 710 ಗ್ರಾಮ್ ತೂಕದ 37 ಗಾಂಜಾ ಗಿಡಗಳು ಇದರ ಮೌಲ್ಯ 2,22,00 ರೂ , 925 ಗ್ರಾಮ್ 322 ಮಿಲಿಗ್ರಾಮ್ ಚರಸ್ ಇದರ ಮೌಲ್ಯ 6,00,000 ಆಗಿದ್ದು , ಒಟ್ಟು 37 ಪ್ರಕರಣಗಳ 12,58,200 ಮೌಲ್ಯದ ಮಾದಕ ವಸ್ತುಗಳನ್ನು ನಾಶಮಾಡಲಾಗಿದೆ.
ಕಳೆದಬಾರಿ ನಾಶ ಮಾಡಿದ್ದೆಷ್ಟು?
2024 ಜನವರಿ ತಿಂಗಳಲ್ಲಿ 15 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿತ್ತು.ಜಿಲ್ಲೆಯಲ್ಲಿ 32 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹5.06 ಲಕ್ಷ ಮೌಲ್ಯದ 14.22 ಕೆ.ಜಿ ಗಾಂಜಾ, ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹10 ಲಕ್ಷ ಮೌಲ್ಯದ 1.5 ಕೆ.ಜಿ ಚರಸ್ ಮತ್ತು ಒಂದು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹10 ಸಾವಿರ ಮೌಲ್ಯದ 48 ಗ್ರಾಂ ಗಾಂಜಾ ಗಿಡ ಸೇರಿದಂತೆ ಒಟ್ಟು 34 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹15.16 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಈ ಹಿಂದಿನ ಎಸ್.ಪಿ
ಎನ್.ವಿಷ್ಣುವರ್ಧನ್ ರವರ ನೇತ್ರತ್ವದಲ್ಲಿ ನಾಶ ಮಾಡಲಾಗಿತ್ತು.