ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಇಂದು ಏನು ಸುದ್ದಿ?

Uttara Kannada district weather is improving after heavy rain. In Siddapur, a house wall collapsed due to rain; in Sirsi, a lost gold chain worth ₹1.8 lakh was returned; in Ankola, building materials were stolen; in Gokarna, three injured in a bee attack; and in Karwar, two men were arrested for gambling.
09:41 AM Oct 01, 2025 IST | ಶುಭಸಾಗರ್
Uttara Kannada district weather is improving after heavy rain. In Siddapur, a house wall collapsed due to rain; in Sirsi, a lost gold chain worth ₹1.8 lakh was returned; in Ankola, building materials were stolen; in Gokarna, three injured in a bee attack; and in Karwar, two men were arrested for gambling.

Uttara kannada| ಇಂದು ಏನು ಸುದ್ದಿ?

Advertisement

ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸುದ್ದಿಗಳ ವಿವರ ಈ ಕೆಳಗಿನಂತಿದೆ.

ಉತ್ತರ ಕನ್ನಡ ಇಂದು ಹೇಗಿದೆ ಹವಾಮಾನ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನದಿಂದ ಮಳೆ ಆರ್ಭಟ ಹೆಚ್ಚಾಗಿದ್ದು ,ಇಂದಿನಿಂದ ಐದು ದಿನಗಳ ಕಾಲ ಮಳೆಯ ಆರ್ಭಟ ತಗ್ಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದಿನಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಇಳಿಕೆ ಕಾಣಲಿದ್ದು ಅಲ್ಪಮಟ್ಟಿನ ಮಳೆಯಾಗಲಿದ್ದು ಉಳಿದಂತೆ ಬಿಸಿಲು ಇರಲಿದೆ.

Advertisement

Siddaur| ಮಳೆಗೆ ಮನೆ ಗೋಡೆ ಕುಸಿತ, ₹20 ಸಾವಿರ

Soddapur -ಮಳೆಯಿಂದ ಮನೆಗೆ ಹಾನಿ.

ಕಳೆದ ಎರಡು ದಿನಗಳಿಂದ ಸಿದ್ದಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಂಜಗೋಡ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ. ಲಕ್ಷ್ಮೀ ಈರಾ ಮಡಿವಾಳ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹಾನಿಯ ಅಂದಾಜು ನೀಡಿದ್ದಾರೆ.

Sirsi| ಕಳೆದುಹೋಗಿದ್ದ ಚಿನ್ನದ ಸರ ವಾಪಸ್: ಪ್ರಾಮಾಣಿಕತೆ ಮೆರೆದ ಸಾರ್ವಜನಿಕರು

ಶಿರಸಿ ಠಾಣೆಯಲ್ಲಿ ಬಂಗಾರದ ಸರ ಹಸ್ತಾಂತರಿಸುತ್ತಿರುವುದು

ನವರಾತ್ರಿ ಪ್ರಯುಕ್ತ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ ಶ್ವೇತಾ ಅಮರನಾಥ್ ಅವರು ಕಳೆದುಕೊಂಡಿದ್ದ ₹1.80 ಲಕ್ಷ ಮೌಲ್ಯದ 10 ಗ್ರಾಂ ಚಿನ್ನದ ಸರವನ್ನು ಮಂಗಳವಾರ ಸಾರ್ವಜನಿಕರೊಬ್ಬರು ಪತ್ತೆಹಚ್ಚಿ ದೇವಸ್ಥಾನ ಆಡಳಿತ ಮಂಡಳಿಗೆ ಒಪ್ಪಿಸಿದ್ದಾರೆ. ಬಳಿಕ ದೇವಸ್ಥಾನ ಆಡಳಿತ ಮಂಡಳಿ ಮತ್ತು ಶಿರಸಿ ನಗರ ಪೊಲೀಸರು ಸೇರಿ ಸರದ ವಾರಸುದಾರರಾದ ಶ್ವೇತಾ ಅವರಿಗೆ ಚಿನ್ನದ ಸರವನ್ನು ಹಸ್ತಾಂತರಿಸಿದ್ದಾರೆ.

Ankola: ನಿರ್ಮಾಣ ಹಂತದ ಮನೆಯಲ್ಲಿ 30 ವಸ್ತುಗಳ ಕಳವು ತಡವಾಗಿ ದೂರು ದಾಖಲು

ಅಂಕೋಲಾ ತಾಲೂಕಿನ ಆಂದ್ರೆ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯೊಂದರಿಂದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ನಿರ್ಮಾಣ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಕಳೆದ ಆಗಸ್ಟ್ 20ರಿಂದ ಸೆಪ್ಟೆಂಬರ್ 21ರ ನಡುವಿನ ಅವಧಿಯಲ್ಲಿ ಈ ಕಳವು ನಡೆದಿದೆ. ಫ್ಲ್ಯಾಬ್ ಹಾಕಲು ಬಳಸುವ 58 ಕಬ್ಬಿಣದ ಸೆಂಟರಿಂಗ್ ಪ್ಲೇಟ್‌ಗಳು, ಎರಡು ರಾಡ್ ಕಟಿಂಗ್ ಮೆಷಿನ್‌ಗಳು, ಮೂರು ಸುತ್ತಿಗೆ ಮತ್ತು ಒಂದು ಕಬ್ಬಿಣದ ಲಿವರ್ ಕಳುವಾಗಿದೆ ಎಂದು ತಡವಾಗಿ ದೂರು ನೀಡಲಾಗಿದೆ. ಕೊನೆಗೂ ಮನೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದ ಕುಮಟಾದ ವಿಶಾಲ್ ನಾಯಕ್‌ ಅವರು  ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅಪರಿಚಿತ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Gokarna|ಹೆಚ್ಚೇನು ದಾಳಿಗೆ ಮೂವರು ಗಾಯ-ಓರ್ವ ಗಂಭೀರ.

ಜೇನು ದಾಳಿಗೆ ಒಳಗಾದ ಯುವಕ

Gokarna :-ಗೋಕರ್ಣ ತಾಲೂಕಿನ ಬಂಕಿಕೊಡ್ಲದ ಅಡಿಗೋಣ ರಸ್ತೆಯ ಮೇಲೆ ನಡೆದು ಹೋಗುತ್ತಿದ್ದ ಮೂವರ ಮೇಲೆ ಹೆಚ್ಚೇನು ದಾಳಿ ನಡೆಸಿದ ಘಟನೆ ನಡೆದಿದೆ. ಶೇಖರ ಆಗೇರ್‌ ಮತ್ತು ಅವರ ಇಬ್ಬರು ಸ್ನೇಹಿತರು ಈ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಜೇನುಗಳ ದಾಳಿಗೆ ತುತ್ತಾಗಿದ್ದಾರೆ. ದಾಳಿಗೆ ಬೆದರಿ ಮೂವರು ದಿಕ್ಕೆಟ್ಟು ಓಡಿದ್ದಾರೆ. ಪರಿಣಾಮ, ಶೇಖರ ಆಗೇರ್ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಶೇಖರ ಆಗೇರ್‌ ಮತ್ತು ಅವರ ಒಬ್ಬ ಸ್ನೇಹಿತರು ಬಂಕಿಕೊಡ್ಲದ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಶೇಖರ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನೊಬ್ಬ ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ.

ಕುಮಟಾ: ನ್ಯಾಯಾಲಯದಲ್ಲಿ ದಾಖಲೆ ಪತ್ರ ಕಳವು; ನಾಲ್ವರ ವಿರುದ್ಧ ದೂರು.

ಕುಮಟಾ ಪೊಲೀಸ್ ಠಾಣೆ

ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ 44 ವರ್ಷ ಹಳೆಯ ಮದುವೆ ಆಮಂತ್ರಣ ಪತ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವಂಶವೃಕ್ಷ ಅರ್ಜಿ ಮೇಲ್ಮನವಿ ವಿಚಾರಣೆ ವೇಳೆ ದಾಖಲೆ ಕಳವು ಮಾಡಲಾಗಿದೆ ಎಂದು ಆರೋಪಿಸಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ದೂರುದಾರರಾದ ಪಾರ್ವತಿ ನಾಯ್ಕ ಅವರು, ವಕೀಲ ಶ್ರೀನಾಥ್ ಜಟ್ಟಿ ನಾಯ್ಕ ಸೇರಿ ನಾಲ್ವರ ವಿರುದ್ಧ ಸೋಮವಾರ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳವಾದ ದಾಖಲೆಯನ್ನು ವಾಪಸ್ ಕೊಡಿಸುವಂತೆ ಕೋರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Karwar| ಜೂಜಾಟದಲ್ಲಿ ತೊಡಗಿದ್ದ ಇಬ್ಬರ ಬಂಧನ

ಕಾರವಾರದ ಚಿತ್ತಾಕುಲ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ವೃದ್ಧರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ತಾಕುಲದ ಸೀಬರ್ಡ್ ಕಾಲೋನಿ ಬಳಿ ನಡೆದ ಈ ಘಟನೆಯಲ್ಲಿ, ದೇವಬಾಗ್ ನಿವಾಸಿಗಳಾದ ಪಾಂಡುರಂಗ ಕುಶಲ ಸಾವಂತ್‌ (65) ಮತ್ತು ಅಶೋಕ್ ಮಹಾಬಲೇಶ್ವರ ಶೆಟ್ಟಿ (68) ಅವರು ಅದೃಷ್ಟದ ಸಂಖ್ಯೆಗಳ ಮೇಲೆ ಪಣಕಟ್ಟಿ ಜೂಜಾಟ ಆಡಿಸುತ್ತಿದ್ದರು. ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದರು.

ಚಿತ್ತಾಕುಲ ಪೊಲೀಸರು ದಾಳಿ ನಡೆಸಿ, ₹2,100 ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ-ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ಅನ್ವಯವಾಗುವಂತೆ 3 ವರ್ಷಗಳ ಸಡಿಲಿಕೆ.

ಕಾರವಾರ:-ರಾಜ್ಯ ಸರ್ಕಾರದ ಎಲ್ಲಾ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಲವಾರು ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅನುಮೋದನೆಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇಂದು ಆದೇಶ ಪ್ರಕಟಿಸಿದೆ.

Uttara kannada| ಉತ್ತರ ಕನ್ನಡ 600 ಕಡೆ ನೆಟ್ವರ್ಕ ಸಮಸ್ಯೆ- ಗೋವಾ ರಾಜ್ಯದ ವರೆಗೂ ವಿಸ್ತರಿಸಿದ ಸರ್ವೆ ಕಾರ್ಯ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು.

ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17 ರಷ್ಟು ಮೀಸಲಾತಿಯನ್ನು ಪ್ರವರ್ಗ- ಎರಲ್ಲಿನ ಸಮುದಾಯಗಳಿಗೆ ಶೇಕಡ 6 ರಷ್ಟು, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ರಷ್ಟು ಮತ್ತು ಪ್ರವರ್ಗ - ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ನಿಗದಿಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ.

ಈ ಹಿಂದೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆ ಬಯಸಿ ಅರ್ಜಿಗಳನ್ನು ಸಲ್ಲಿಸಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಕ್ರಮವಾಗಿ 2 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಲಾಗಿರುತ್ತು.

ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 2 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿತ್ತು.

ಆದರೆ ಹಲವಾರು ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿದ್ದರು.

ಸದರಿ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿ, ದಿನಾಂಕ: 06.09.2025ರ ಆದೇಶದ ಹಿಂಪಡೆದು, ಈ ಆದೇಶ ಹೊರಡಿಸಿದ ದಿನಾಂಕದ ನಂತರ ಮುಂದಿನ ದಿನಾಂಕ 31-12-2027 ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 3 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು) ಆದೇಶ ಹೊರಡಿಸಿದೆ.

Advertisement
Tags :
AnkolaBee attackCrime newsFire AccidentGambling ArrestGokarnaGold Chain FoundKarnataka newsKarwarrain updateSiddapurSirsiUttara KannadaWeather forecastYellapur
Advertisement
Next Article
Advertisement