Uttara kannada| ಬಿಸಿಯೂಟದಲ್ಲಿ ಮಕ್ಕಳಿಗೆ ವಿಷ! ಕಳಪೆ ಗುಣಮಟ್ಟದ ಆಹಾರ ನೀಡುತ್ತಿದೆಯೇ ಆಹಾರ ಇಲಾಖೆ !
Uttara kannada| ಬಿಸಿ ಯೂಟದಲ್ಲಿ ಮಕ್ಕಳಿಗೆ ವಿಷ! ಕಳಪೆ ಗುಣಮಟ್ಟದ ಆಹಾರ ನೀಡುತ್ತಿದೆಯೇ ಆಹಾರ ಇಲಾಖೆ !
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಿಗೆ ಬಿಸಿಯೂಟಕ್ಕಾಗಿ ಕಳಪೆ ಮಟ್ಟದ ಆಹಾರ ಪದಾರ್ಥಗಳು ಸರಬರಾಜಾದರೇ ಶಾಲೆಯ ಬಿಸಿಯೂಟದಲ್ಲಿ ಇಲಿಯ ಹಿಕ್ಕೆಯಿಂದಾಗಿ 48 ವಿದ್ಯಾರ್ಥಿಗಳು ಆಸ್ಪತ್ರೆ ಸೇರುವಂತಾಗಿದೆ.
ಆದ್ರೆ ಇದೀಗ ಜಿಲ್ಲೆಯಲಿ ಅಕ್ಷರ ದಾಸೋಹದಡಿ ನೀಡುವ ಆಹಾರ ಪದಾರ್ಥಗಳು ವಿಷವಾಗುತ್ತಿವೆಯೇ ? ಗುಣಮಟ್ಟದ ಆಹಾರ ಪದಾರ್ಥಗಳ ಮೇಲೆ ಪ್ರಶ್ನೆ ಏಳುವಂತಾಗಿದೆ.
Haliyal| ಟ್ರಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣ: ಆರೋಪಿ ಬಂಧನ
ಹೌದು ಉತ್ತರ ಕನ್ನಡ (uttara kannada)ಜಿಲ್ಲೆಯಲ್ಲಿ ಶಾಲೆಗೆ ಸರಬರಾಜಾಗುವ ಆಹಾರ ಪದಾರ್ಥಗಳು ಕಳಪೆ ಮಟ್ಟದ್ದು ಎಂಬ ದೂರುಗಳು ಇದೀಗ ಕೇಳಿಬರುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಹಾರ ಇಲಾಖೆಯಿಂದ ತಾಲೂಕು ಪಂಚಾಯತ್ ನ ಆಕ್ಷರ ದಾಸೋಹ ವಿಭಾಗದಿಂದ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳು ಸರಬರಾಜಾಗುತಿದ್ದರೇ ,ಇತ್ತ ಬಿಸಿಯೂಟ ತಯಾರಿಸುವವರ ನಿರ್ಲಕ್ಷದಿಂದ ಮುಂಡಗೋಡಿನ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಬಿಸಿಊಟ ಸೇವಿಸಿದ ಒಟ್ಟೂ 48 ಮಕ್ಕಳು ಚಿಕಿತ್ಸೆಗೆ ಒಳಪಟ್ಟಿದ್ದು 44 ಮಕ್ಕಳು ಒಳರೋಗಿಯಾಗಿ ಮತ್ತು 4 ಮಕ್ಕಳು ಹೊರರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ.

ಈ ಶಾಲೆಯಲ್ಲಿ 718 ಮಕ್ಕಳಿದ್ದು, 687 ಮಕ್ಕಳು ಮದ್ಯಾಹ್ನದ ಬಿಸಿಯೂಟ ಸೇವಿಸಿದ್ದರು. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಶಾಲೆಗೆ ತಾಲೂಕಾ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳೊಡನೆ ಸಮಾಲೋಚನೆ ನಡೆಸಿ ಅಡುಗೆ ಕೋಣೆಯ ಸ್ವಚ್ಛತೆಯ ಕುರಿತು ಅರೋಗ್ಯ ಶಿಕ್ಷಣ ನೀಡಿ ಆಹಾರದ ಮಾದರಿಯನ್ನು ಶೀತಲ ಸರಪಳಿಯ ಪೆಟ್ಟಿಗೆಯೊಂದಿಗೆ ಮಾದರಿಯನ್ನು ತಾಲೂಕು ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಹಾಗೂ ಸದರಿ ಮಾದರಿಯನ್ನು ಛೀಫ್ ಫುಡ್ ಅನಾಲಿಸ್ಟ್ ಡಿವಿಜನ್, ಫುಡ್ ಲ್ಯಾಬೋರೇಟರಿ ತಿಲಕವಾಡಿ, ಬೆಳಗಾವಿ ರವರಿಗೆ ಕಳುಹಿಸಲಾಗಿದೆ. ಇನ್ನು ನೀರಿನ ಮಾದರಿಯನ್ನು ಸಂಗ್ರಹಿಸಿ ತಪಾಸಣೆ ಮಾಡಲಾಗಿದೆ.
ಶುಕ್ರವಾರ ಮಧ್ಯಾಹ್ನ ಮುಂಡಗೋಡು(mundgod) ಶಾಸಕರ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ಉಣಬಳಿಸಿದ ಊಟದಲ್ಲಿ ಇಲಿ ಹಿಕ್ಕೆಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಬಹುತೇಕ ಒಂದರಿಂದ ನಾಲ್ಕನೇ ತರಗತಿ ಮಕ್ಕಳೇ ಅಸ್ವಸ್ತರಾಗಿದ್ದು ಹೊಟ್ಟೆನೋವು,ವಾಂತಿಯಿಂದ ಉಂಡ ಊಟ ವಿಷವಾಗಿದೆ. ಮಕ್ಕಳು ಅಸ್ವಸ್ತರಾದರೂ ಶಿಕ್ಷಕರು ಮಾತ್ರ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತಿದ್ದಾರೆ.

ಇನ್ನು ಮುಂಡಗೋಡಿನ ಶಾಲೆಯ ಬಿಸಿಊಟದ ಸ್ಥಿತಿ ಹೀಗಾದರೇ ,ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ,ಗುಡ್ನಾಪುರಕಾಲೋನಿ ,ದೇಶಪಾಂಡೆ ನಗರದ ಸರ್ಕಾರಿ ಶಾಲೆ ಹಾಗೂ ಉರ್ದು ಶಾಲೆಗಳಲ್ಲಿ ಹಾಳಾದ ಧಾನ್ಯ ಹಾಗೂ ಕ್ರಿಮಿ ,ಕೀಟ,ಇಲಿ ಹಿಕ್ಕೆ ಇರುವ ಧಾನ್ಯ ಪೂರೈಕೆ ಮಾಡಲಾಗಿದೆ.ಇನ್ನು ಬಿಸಿಊಟದ ಕೊಠಡಿ ಕೆಟ್ಟಮಟ್ಟದಲ್ಲಿದ್ದು ಅಲ್ಲಿ ಗುಜರಿ ವಸ್ತುಗಳನ್ನ ಸಂಗ್ರಹಣೆಮಾಡಿ ಇಡಲಾಗಿದ್ದು ,ಅತ್ಯಂತ ಕೆಟ್ಟ ಮಟ್ಟದ ಸ್ಥಿತಿಯಲ್ಲಿದ್ದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸಂಬಂಧಪಟ್ಟ ಇಲಾಖೆಗೆ ಹಾಗೂ ಹಳಿಯಾಳದ ಬಿ.ಇ.ಓ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿದೇ ನಿರ್ಲಕ್ಷ ಮಾಡಲಾಗಿದ್ದು ಮಕ್ಕಳಿಗೆ ಬಿಸಿಊಟದ ನೆಪದಲ್ಲಿ ವಿಷ ನೀಡಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.

ಅಹಾರ ಇಲಾಖೆಯ ಮೂಲಕ ಜಿಲ್ಲೆಯ ಪ್ರತಿ ತಾಲೂಕಿನ ಶಾಲೆಗಳಿಗೆ ಅಕ್ಷರ ದಾಸೋಹದಡಿ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರೀಕ್ಷೆಗೆ ಆಹಾರ ಸಮಿತಿ ಇದೆ.ಪೂರೈಕೆಯಾದ ಆಹಾರ ಪದಾರ್ಥ ಕಳಪೆ ಮಟ್ಟದ್ದಾಗಿದ್ದರೇ ಅದನ್ನು ತಿರಸ್ಕರಿಸುವ ಹಕ್ಕು ಶಾಲೆಯ ಮುಖ್ಯ ಶಿಕ್ಷಕರಿಗಿದೆ.ಆದರೇ ಗುಣಮಟ್ಟವಿಲ್ಲದ ಆಹಾರ ಪದಾರ್ಥ,ಶುಚಿತ್ವವಿಲ್ಲದ ಬಿಸಿಊಟ ಕೊಠಡಿಗಳಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವಂತಾಗಿದ್ದು ,ಇನ್ನಾದರೂ ಮಕ್ಕಳ ಜೀವದ ಜೊತೆ ಆಟವಾಡುವ ಇಂತಹ ಬ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವರೇ ಎಂಬುದನ್ನ ಕಾದು ನೋಡಬೇಕಿದೆ.
