For the best experience, open
https://m.kannadavani.news
on your mobile browser.
Advertisement

Uttara kannda :ಸಚಿವ ಮಂಕಾಳು ವೈದ್ಯ ಸಟ್ಲಮೆಂಟ್ ಆರೋಪ ಬದಲಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ!

Uttara kannda 19 December 2024 :-ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಗುತ್ತಿಗೆ ಕಂಪನಿಯೊಂದಿಗೆ ಸಟ್ಲಮೆಂಟ್ ಮಾಡಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Minister Mankal Vaidya)ನವಂಬರ್ 1 ರಂದು ಆರೋಪ ಮಾಡಿದ್ದರು.
03:52 PM Dec 19, 2024 IST | ಶುಭಸಾಗರ್
uttara kannda  ಸಚಿವ ಮಂಕಾಳು ವೈದ್ಯ ಸಟ್ಲಮೆಂಟ್ ಆರೋಪ ಬದಲಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Uttara kannda 19 December 2024 :-ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಗುತ್ತಿಗೆ ಕಂಪನಿಯೊಂದಿಗೆ ಸಟ್ಲಮೆಂಟ್ ಮಾಡಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Minister Mankal Vaidya)ನವಂಬರ್ 1 ರಂದು ಆರೋಪ ಮಾಡಿದ್ದರು.

Advertisement

ಇದರ ಬೆನ್ನಲ್ಲೇ ಇದೀಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬದಲಾವಣೆ ಮಾಡಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಎಸ್.ಕಲ್ಪನಾ ರವರು ಆದೇಶ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ (Uttara Kannada)ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ರವರ ಸ್ಥಾನಕ್ಕೆ ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷಮಾ ಗೋಡಬೋಲೆ ರವರನ್ನು ನೇಮಿಸಲಾಗಿದೆ.

ಆದೇಶ ಪ್ರತಿ

ಸಚಿವರ ಆರೋಪ ಏನಾಗಿತ್ತು?

ನವಂಬರ್ ಒಂದರಂದು ಕಾರವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ
ರಾಷ್ಟ್ರೀಯ ಹೆದ್ದಾರಿ 766E ಹೆದ್ದಾರಿ ಕಾಮಗಾರಿ ನಿಮಿತ್ತ ಶಿರಸಿ- ಕುಮಟಾ ಹೆದ್ದಾರಿ ಬಂದ್ ಮಾಡುವ ಕುರಿತು ಮಾತನಾಡಿ ,ಇಲ್ಲಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬರಿದ್ದಾರೆ, ರಿತೇಶ್ ಕುಮಾರ್ ಸಿಂಗ್ ಎಂದು ಇಲ್ಲಿ ಉಸ್ತವಾರಿನೋ ಅಥವಾ ಆರ್.ಎನ್ .ಎಸ್ ,IRB ಕಂಪನಿಗಳ ಸಟ್ಲಮೆಂಟ್ ಗೆ ಬರುತ್ತಾರೋ ಗೊತ್ತಿಲ್ಲ, ನಮ್ಮ ಯಾವ ಮೀಟಿಂಗ್ ಗೂ ಬಂದಿಲ್ಲ.

ಅವರು ಬಂದ್ ಮಾಡಿಸುವಂತೆ ಮಾಡಲು ಕೊಟ್ಟು ಹೋಗಿದ್ದಾರೆ.ಕಳೆದ ತಿಂಗಳು ಬಂದ್ ಆಗಬೇಕಿತ್ತು.ನವಂಬರ್ ನಲ್ಲಿ ಬಂದ್ ಮಾಡಿಸುವಂತೆ ಕೊಟ್ಟಿದ್ದಾರೆ.ಉಸ್ತುವಾರಿ ಎಂದು ಇದ್ದಾರೆ ನಮ್ಮಲ್ಲಿ ಯಾವುದು ಉಸ್ತುವಾರಿ ಎಂದು ನೋಡಬೇಕು , ಸಟ್ಲಮಂಟ್ ಉಸ್ತುವಾರಿಯೋ ಏನು ಎಂದು ತಿಳಿದುಕೊಳ್ತೇನೆ.ಯಾವುದೇ ಕಾರಣಕ್ಕೆ ಶಿರಸಿ ಕುಮಟಾ ರಸ್ತೆ ಬಂದ್ ಆಗಬಾರದು
ಕಂಪನಿಗೆ 3 ವರ್ಷ ಅಗ್ರಿಮೆಂಟ್ ಮಾಡಿ ಕೊಟ್ಟಿದ್ರೂ ಕೆಲಸ ಆಗಲಿಲ್ಲ.

ಪುನಹಾ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ
ಯಾವುದೇ ಅಗ್ರಿಮೆಂಟ್ ನಲ್ಲಿ ಬಂದ್ ಮಾಡಿ ಕೊಡಬೇಕು ಎಂದು ಇಲ್ಲ .ಸಂಸದರು ಬಂದ್ ಮಾಡಬೇಕು ಎಂದು ಹೇಳಿತಿದ್ದಾರೆ ಅವರ ಆಸಕ್ತಿ ಏನಿದೆ ಗೊತ್ತಿಲ್ಲ.ನಮ್ಮ ಶಾಸಕರೂ ಬೆಂಬಲ ಕೊಡ್ತಾ ಇದಾರೆ , ಅವರು ಆ ರೀತಿ ಬೆಂಬಲ ಕೊಡುತ್ತಿರುವುದರಿಂದ ನಾನೂ ಸುಮ್ಮನಿದ್ದೇನೆ ಎಂದ ಸಚಿವ ಮಂಕಾಳು ವೈದ್ಯ ಹೇಳಿದರು.

ಇದನ್ನೂ ಓದಿ:-Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ. ಮಂಕಾಳು ವೈದ್ಯ!

ಇದರ ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಚಿವರ ಯಾವುದೇ ಸಭೆಗೆ ಹಾಜುರಾಗದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ಕರ್ತವ್ಯದ ಬಗ್ಗೆ ಉಸ್ತುವಾರಿ ಸಚಿವರೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು.

ಈ ಘಟನೆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಡುವೆ ವೈಮನಸ್ಸು ಉಂಟಾಗಿತ್ತು. ಇದೀಗ ಕಾರ್ಯದರ್ಶಿ ಬದಲಾವಣೆ ಸಹ ಮಾಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ