Uttara kannada| ಉತ್ತರ ಕನ್ನಡ 600 ಕಡೆ ನೆಟ್ವರ್ಕ ಸಮಸ್ಯೆ- ಗೋವಾ ರಾಜ್ಯದ ವರೆಗೂ ವಿಸ್ತರಿಸಿದ ಸರ್ವೆ ಕಾರ್ಯ
Uttara kannada| ಉತ್ತರ ಕನ್ನಡ 600 ಕಡೆ ನೆಟ್ವರ್ಕ ಸಮಸ್ಯೆ- ಗೋವಾ ರಾಜ್ಯದ ವರೆಗೂ ವಿಸ್ತರಿಸಿದ ಸರ್ವೆ ಕಾರ್ಯ
ಕಾರವಾರ :- ಪಶ್ಚಿಮ ಘಟ್ಟಗಳನ್ನು ಒಳಗೊಂಡ ಉತ್ತರ ಕನ್ನಡ (uttara Kannada) ಜಿಲ್ಲೆ ಮೂಲಭೂತ ಸೌಕರ್ಯದಿಂದಲೂ ವಂಚಿತವಾಗಿದೆ. ಹೀಗಿರುವಾಗ ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲೆಯಲ್ಲಿ ರಸ್ತೆ ಜೊತೆ ನೆಟ್ವರ್ಕ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ 600 ಪ್ರದೇಶಗಳಲ್ಲಿ ಸರ್ವೆ ಕಾರ್ಯಕ್ಕೆ ಕಚೇರಿಯನ್ನು ತೆರೆಯಲಾಗಿದೆ.
Gokarna|ಗೋಕರ್ಣ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮರಳಿ ತಾಯ್ನಾಡಿಗೆ
ಹೀಗೆ ತೆರೆದ ಕಚೇರಿಯಲ್ಲಿ ಗ್ರಾಮದ ಜನರನ್ನು ಕರೆತಂದು ಸರ್ವೆ ಕಾರ್ಯ ಮಾಡಲಾಗುತ್ತಿದೆ. ಇದಲ್ಲದೇ ಈ ಸರ್ವೆ ಕಾರ್ಯ ನೆರೆಯ ಗೋವಾ ರಾಜ್ಯಕ್ಕೂ ವಿಸ್ತಾರಗೊಂಡಿದೆ.
ಹೌದು ಗೋವಾದಲ್ಲಿ ರಾಜ್ಯದ ಸರ್ವೆ ಕಾರ್ಯ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಏಳೋದು ಸಹಜ .ಆದ್ರೆ ಗಡಿ ಜಿಲ್ಲೆ ಉತ್ತರ ಕನ್ನಡ ಗೋವಾ ಗಡಿಯನ್ನು ಹಂಚಿಕೊಂಡಿದೆ.
Karnataka| ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ |ಎಷ್ಟು ದಿನ ಮಳೆ ಗೊತ್ತಾ?
ಕಾರವಾರ ತಾಲೂಕಿನ ಹಲವು ಗ್ರಾಮಗಳು,ಜೋಯಿಡಾ ತಾಲೂಕಿನ ಗ್ರಾಮಗಳು ಸೇರುತ್ತವೆ. ಆದರೇ ಮೂಲಭೂತ ಸೌಕರ್ಯ ಹಾಗೂ ರಸ್ತೆಯೇ ಇಲ್ಲದೇ ಕರ್ನಾಟಕದಬರಾದರೂ ಗೋವಾ ಕ್ಕೆ ಅವಲಂಬಿತಬಾದ ಗ್ರಾಮ ಎಂದರೇ ಅದು ಕಾರವಾರ ತಾಲೂಕಿನ ಕಮರಗಾಂವ್ .
ಈ ಗ್ರಾಮವು ಕಾರವಾರ ತಾಲೂಕಿನಿಂದ 70 ಕಿಲೋ ಮೀಟರ್ ದೂರದಲ್ಲಿ ಇದ್ದು ,ಗೋವಾಕ್ಕೆ ಸಮೀಪವಿದೆ. ಈ ಗ್ರಾಮಕ್ಕೆ ಇದುವರಿಗೂ ಕಾರವಾರದಿಂದ ತೆರಳಲು ರಸ್ತೆ ಇಲ್ಲ. ಇಲ್ಲಿನ ಮಕ್ಕಳು ಗೋವಾದಲ್ಲಿಯೇ ಶಿಕ್ಷಣ ಮಾಡಬೇಕು ,ಓಟು ಹಾಕೋದು ,ರೇಷನ್ ತರಲು ಕಾರವಾರದ ಕಡೆ ಮುಖಮಾಡಬೇಕು.
32 ಮನೆಗಳಿರುವ ಈ ಗ್ರಾಮದಲ್ಲಿ 130 ಜನ ಮತದಾರರಿದ್ದಾರೆ. ಹೀಗಾಗಿ ಇವರ ಸರ್ವೆ ಕಾರ್ಯಕ್ಕೆ ನೆಟ್ವರ್ಕ ಹಾಗೂ ರಸ್ತೆ ಸಮಸ್ಯೆಯಿಂದ ಜಿಲ್ಲಾಡಳಿತ ಗೋವಾ ರಾಜ್ಯದ ನೇತ್ರಾವಳಿಯಲ್ಲಿ ಸರ್ವೆ ಕಾರ್ಯಕ್ಕೆ ಗೋವಾ ಸರ್ಕಾರದ ಅನುಮತಿ ಪಡೆದು ಕೇಂದ್ರ ಸ್ಥಾಪಿಸಲಾಗಿದ್ದು ಇಲ್ಲಿಗೆ ಅಲ್ಲಿನ ಜನರನ್ನು ಕರೆತಂದು ಸರ್ವೆ ಕಾರ್ಯ ನಡೆಸಲಾಗುತ್ತಿದೆ.
600 ಪ್ರದೇಶದಲ್ಲಿ ಇಲ್ಲ ನೆಟ್ವರ್ಕ

ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ,ಅಂಕೋಲ,ಶಿರಸಿ,ಜೋಯಿಡಾ ಸೇರಿದಂತೆ ಪ್ರಮುಖ ತಾಲೂಕುಗಳಲ್ಲಿ ಹಲವು ಗ್ರಾಮಗಳಿಗೆ ತೆರಳಲು ರಸ್ತೆ ಇಲ್ಲ. ಇದರ ಜೊತೆ ನೆಟ್ವರ್ಕ ಸಹ ಬರುವುದಿಲ್ಲ .ಹೀಗಾಗಿ ಜಿಲ್ಲಾಡಳಿತ ಕಮಿಷನ್ ಅನುಪತಿ ಪಡೆದು ಒಟ್ಟು 598 ಸಮೀಕ್ಷಾ ಕೇಂದ್ರ ತೆರೆಯಲಾಗಿದೆ. ಇಲ್ಲಿಯೇ ಜನರನ್ನು ಕರೆತಂದು ಸರ್ವೆ ಮಾಡಲಾಗುತ್ತಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಲಕ್ಷದ ಇಪ್ಪತ್ತಾರು ಸಾವಿರ ಮನೆಗಳಿವೆ .ಮೂರುಸಾವಿರದ ಎಪ್ಪತ್ತಮೂರು ಜನ ಸಿಬ್ಬಂದಿಗಳನ್ನು ಸರ್ವೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸರ್ವೆ ಕಾರ್ಯ 81% ಮುಕ್ತಾಯ ಕಂಡಿದೆ ಎಲ್ಲಿ ನೆಟ್ವರ್ಕ ಇರುವುದಿಲ್ಲ,ರಸ್ತೆ ಇರುವುದಿಲ್ಲ ಅಂತಹ ಪ್ರದೇಶದಿಂದ ಸರ್ವೆ ಕೇಂದ್ರಕ್ಕೆ ಕರೆತಂದು ಸರ್ವೆ ಕಾರ್ಯ ಮಾಡಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕದ ಸಮೀಕ್ಷೆ ಕಾರ್ಯ ಗೋವಾ ರಾಜ್ಯಕ್ಕೂ ವಿಸ್ತರಿಸಿದ್ದು ಶೀಘ್ರ ಸಮೀಕ್ಷೆ ಮುಗಿಸುವ ನಿಟ್ಟಿನಲ್ಲಿ ಸರ್ವೆ ಸಿಬ್ಬಂದಿಗಳಿದ್ದಾರೆ.