ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda ಪೊಲೀಸರ ಕರ್ತವ್ಯಕ್ಕೆ ಪೊಲೀಸರೇ ಅಡ್ಡಿ -ನಾಲ್ವರಿಗೆ ನ್ಯಾಯಾಂಗ ಬಂಧನ

ಕಾರವಾರ :- ಕರ್ತವ್ಯ ನಿರತ ಪೊಲೀಸ್ (police) ಅಧಿಕಾರಿಯ ಕರ್ತ್ಯವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನರ ಮೇಲೆ ಕಾರವಾರ (karwar )ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನರಿಗೆ ಕೋರ್ಟ ನ್ಯಾಯಾಂಗ ಬಂಧನ ವಿಧಿಸಿದೆ.
10:34 PM Mar 31, 2025 IST | ಶುಭಸಾಗರ್

Uttara kannda ಪೊಲೀಸರ ಕರ್ತವ್ಯಕ್ಕೆ ಪೊಲೀಸರೇ ಅಡ್ಡಿ -ನಾಲ್ವರಿಗೆ ನ್ಯಾಯಾಂಗ ಬಂಧನ

Advertisement

ಕಾರವಾರ :- ಕರ್ತವ್ಯ ನಿರತ ಪೊಲೀಸ್ (police) ಅಧಿಕಾರಿಯ ಕರ್ತ್ಯವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನರ ಮೇಲೆ ಕಾರವಾರ (karwar )ಶಹರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನರಿಗೆ ಕೋರ್ಟ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಗಳು

ಕಾರವಾರದ ಗುನಿಗಿ ವಾಡದ (gungi wada) ಗಿಂಡಿ ದೇವಸ್ಥಾನದ ಹತ್ತಿರ  ಸೋಮವಾರದ  ಮುಂಜಾನೆವರೆಗೂ ದ್ವನಿವರ್ಧಕ ಬಳಸಿದ್ದು ಈ ಕುರಿತು ಕಾರವಾರದ ಶಹರ ಠಾಣೆಗೆ ದೂರು ಬಂದ ಹಿನ್ನಲ್ಲೆಯಲ್ಲಿ ಶಹರ ಠಾಣೆಯ ಪಿ.ಎಸ್.ಐ ಗಜೇಂದ್ರ ರವರು ಸ್ಥಳಕ್ಕೆ ತೆರಳಿ ಧ್ವನಿವರ್ಧಕವನ್ನು ಬಂದ್ ಮಾಡಿಸಿ ತಮ್ಮ ವಾಹನದಲ್ಲಿ ತೆರಳುತ್ತಿರುವಾಗ ಆರೋಪಿಗಳಾದ ಕರಾವಳಿ ಕಾವಲು ಪಡೆ ಪೊಲೀಸ್ ಕಾನಸ್ಟೇಬಲ್ ಕೃಷ್ಣಾನಂದ ಕೇಶವ ಗುನಗಿ, ಪ್ರದೀಪ್ ಗುನಗಿ, ರಾಜೇಶ್ ಗುನಗಿ ,ಪ್ರದೀಪ್ ಗುನಗಿಯವರು ಪಿ.ಎಸ್.ಐ ಗಜೇಂದ್ರರವರ ವಾಹನ ಅಡ್ಡಗಟ್ಟಿ ಬೈದಾಡಿದ್ದು ದೂರು ಕೊಟ್ಟವರು ಯಾರು ಎಂದು ಹೇಳಬೇಕು ಇಲ್ಲವಾದರೇ ನಿಮ್ಮ ವಾಹನ ಇಲ್ಲಿಂದ ತೆರಳಲು ಬಿಡುವುದಿಲ್ಲ  ಎಂದು ಗಲಾಟೆ ಮಾಡಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇದನ್ನೂ ಓದಿ:-Karwar:ಸೀ ಬರ್ಡ ನಿರಾಶ್ರಿತರಿಗೆ 10.47 ಕೋಟಿ ಪರಿಹಾರ ಮಂಜೂರು-ವಿಶ್ವೇಶ್ವರ ಹೆಗಡೆ ಕಾಗೇರಿ

Advertisement

ಅವಾಚ್ಯ ಶಬ್ದ ದಲ್ಲಿ ನಿಂದಿಸಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದು ಇದರ ಜೊತೆ ಕರಾವಳಿ ಕಾವಲು ಪಡೆ ಪೊಲೀಸ್ ಕಾನಸ್ಟೇಬಲ್ ಕೃಷ್ಣಾನಂದ ಕೇಶವ ಗುನಗಿ ತಾನೂ ಕೂಡ ಪೊಲೀಸ್ ಆಗಿದ್ದು ಕಾನೂನು ಏನು ಅಂತ ಗೊತ್ತಿದೆ. ಬಂದ್ ಮಾಡಿಸಲು ಹೇಳಿದ್ದು ಯಾರು ಎಂದು ಗಲಾಟೆ ಮಾಡಿದ್ದು ಇದರಿಂದ ಉಳಿದವರಿಗೂ ಗಲಾಟೆ ಮಾಡಲು ಪ್ರಚೋಧನೆ ನೀಡಿದ್ದಾಗಿ ಉಲ್ಲೇಕಿಸಲಾಗಿದ್ದು , ಆರೋಪಿಗಳ ವಿರುದ್ಧ ಕಲಂ 189(2), 192 (2) , 126(2),352 ,132,49 ಕಲಂ 190 ಬಿ.ಎನ್.ಎಸ್.ರಂತೆ ಪ್ರಕರಣ ದಾಖಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Advertisement
Tags :
BreakingNewsCrimenewsJudicialCustodyKarnatakaNewsLawAndOrderPoliceInvestigationPoliceObstructionUttaraKannada PoliceMisconduct
Advertisement
Next Article
Advertisement