ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ  33,111- IMV ಪ್ರಕರಣ ಎಸ್.ಪಿ ಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ 

Uttara Kannada records 33,111 IMV cases in a year; 179 deaths reported. SP Deepan launches helmet awareness rally in Karwar to promote road safety.
03:00 PM Oct 06, 2025 IST | ಶುಭಸಾಗರ್
Uttara Kannada records 33,111 IMV cases in a year; 179 deaths reported. SP Deepan launches helmet awareness rally in Karwar to promote road safety.

Uttara kannada| ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ  33,111-IMV ಪ್ರಕರಣ - ಎಸ್.ಪಿ ಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ

Advertisement

ಕಾರವಾರ (ಅಕ್ಟೋಬರ್ 6) :- ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ರಸ್ತೆಗಳು ಹದಗೆಟ್ಟಿವೆ. ರಾಜ್ಯ ಹೆದ್ದಾರಿ ಜೊತೆ ರಾಷ್ಟ್ರೀಯ ಹೆದ್ದಾರಿಗಳು ಸಹ ಅದ್ವಾನ ಸ್ಥಿತಿಯಲ್ಲಿದ್ದು ವಾಹನ ಸವಾರರು ಪರದಾಡಿದರೇ ,ಅಪಘಾತಗಳ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ.

Advertisement

Yallapur: ಭೀಕರ ಬಸ್ ಅಪಘಾತ ಸ್ಥಳದಲ್ಲೇ ಮೂವರು ಸಾವು ಚಿಕ್ಕ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ

ಜಿಲ್ಲೆಯಲ್ಲಿ ಸಂಚಾರ ನಿಯಮ ಪಾಲಿಸದೇ ಅಪಘಾತಗಳು ಹೆಚ್ಚಾಗುತ್ತಿವೆ. ಜೊತೆಗೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಅಪಘಾತವಾಗಿ ಸಾವು ಕಾಣುತಿದ್ದಾರೆ.

ಕಾರವಾರದಲ್ಲಿ ರಸ್ತೆ ಸಂಚಾರ ನಿಯಮ ಸಂಬಂಧ ಮಾರ್ಕ ಮಾಡುತ್ತಿರುವ ಕಾರ್ಮಿಕರು

ಜಿಲ್ಲೆಯಲ್ಲಿ IMV ( Indian motor vehicle case)ಪ್ರಕರಣಗಳು ಈ ವರ್ಷ 33,111 ಆಗಿದ್ದು ,1169 ಜನರಿಗೆ ಗಂಭೀರ ಗಾಯಗಳಾದರೇ 179 ಜನ ಸಾವು ಕಂಡಿದ್ದಾರೆ.ಈವರೆಗೆ 435 ಪ್ರಕರಣಗಳು ದಾಖಲಾಗಿವೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇನ್ನು ಅತೀ ವೇಗ ಚಾಲನೆ ,ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದವರ ಸಂಖ್ಯೆಯೂ ಹೆಚ್ಚಾಗಿದ್ದು , 307 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ,14.90 ಲಕ್ಷ ದಂಡ ವಸೂಲಿ ಮಾಡಲಾಗಿದೆ.ಇನ್ನು 150 ಜನರ ಡಿ.ಎಲ್ ( driving lessons) ಅನ್ನು ಜಿಲ್ಲೆಯಲ್ಲಿ ರದ್ದು ಮಾಡಲಾಗಿದೆ.

Karwar| ಕ್ರಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟಲ್ ನಲ್ಲಿ ಅತ್ಯಾಚಾರ -ಆರೋಪಿ ಬಂಧನ

ಕಳೆದ ಬಾರಿಗಿಂತ ಈ ಭಾರಿ ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೇ ಸಾವು ಕಂಡ ಸಂಖ್ಯೆ ಹೆಚ್ಚಾಗಿದ್ದು 2024 ರಲ್ಲಿ 18 ಜನ ಸಾವುಡಿದ್ದು ,35 ಪ್ರಕರಣ ದಾಖಲಾದರೇ , 2025 ರಲ್ಲಿ ಹೆಲ್ಮೆಟ್ ಧರಿಸದೇ 35 ಜನ ಸಾವು ಕಂಡಿದ್ದು, 64 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಎಸ್.ಪಿ ಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ

SP launches helmet awareness campaign in Karwar

ಇನ್ನು ಹೆಲ್ಮೆಟ್ ಧರಿಸದೇ ಸಾವು ಕಾಣುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ರವರು ಹೆಲ್ಮೆಟ್ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.

Ankola: ಲಾರಿ-ಬಸ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು- ಎಂಟಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಇಂದು  ಕಾರವಾರ ನಗರದಲ್ಲಿ ಬೈಕ್ ಜಾತ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಅವರು ಕಾರವಾರದ ಪೊಲೀಸ್ ಪೆರೇಡೆ ಮೈದಾನದಿಂದ ಪ್ರಾರಂಭವಾದ ಬೈಕ್ ರ್ಯಾಲಿ ನಗರದ ವಿವಿಧ ಭಾಗದಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಕ್ತಾಯ ಮಾಡಲಾಯಿತು.

Kumta| ಮಿರ್ಜಾನ್ ನಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ- ಪ್ರಕರಣ ತನಿಖೆಗೆ ತಡೆಕೋರಿ ಸಲ್ಲಿಸಿದ್ದ ಆರೋಪಿತರ ಅರ್ಜಿ ವಜಾ ಮಾಡಿದ ಹೈಕೋರ್ಟ್

ಜನರು ಹೆಲ್ಮೆಟ್ ಧರಿಸಿ ಬೈಕ್ ಓಡಿಸುವಂತೆ ಮನವಿ ಮಾಡಿದ ಅವರು ಮುಂದಿನ ದಿನದಲ್ಲಿ ಹೆಲ್ಮೆಟ್ ಧರಿಸದೇ ಸಂಚರಿಸುವ ಸವಾರರಿಗೆ ದಂಡ ಹಾಕುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಪ್ರತಿ ಮುಖ್ಯ ರಸ್ತೆಗಳಲ್ಲಿ ಕ್ಯಾಮರಾ ಅಳವಡಿಸಿ ಆ ಮೂಲಕ ಸಂಚಾರ ನಿಯಮ ಪಾಲಿಸದವರಿಗೆ ದಂಡ ಹಾಕುವುದಾಗಿ ತಿಳಿಸಿದ್ದಾರೆ.

Honnavar: ಗೇರುಸೊಪ್ಪ ಜಲಾಶಯದ ಬಳಿಯೇ ಧರೆ ಕುಸಿತ!

Advertisement
Tags :
Helmet AwarenessHelmet Campaign 2025IMV CasesKarnataka newsKarnataka Traffic FinesKarwarKarwar policePolice CampaignRoad AccidentsRoad SafetySP DeepanTraffic rulesUttara Kannada
Advertisement
Next Article
Advertisement