SSLC ಮಕ್ಕಳಿಗೆ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾರ್ಮಿಕರ ಕೆಲಸದ ಪಾಳಿ ನೀಡಿದ ಸಿಬ್ಬಂದಿ!
SSLC ಮಕ್ಕಳೇ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾರ್ಮಿಕರ ಕೆಲಸದ ಪಾಳಿ ನೀಡಿದ ಸಿಬ್ಬಂದಿ!
ಕಾರವಾರ :- ಶಾಲೆಯಲ್ಲಿ ಪರೀಕ್ಷೇ ಬರೆಯಲು ಸಿದ್ದವಾಗಬೇಕಾದ ಮಕ್ಕಳು ಹಾಸ್ಟೆಲ್ ನಲ್ಲಿ ಕಸಗುಡುಸಿ ಪಾತ್ರೆ ತಿಕ್ಕುವ ಕೆಲಸವನ್ನು ನೀಡುವ ಮೂಲಕ ಶಿಕ್ಷಣ ಇಲಾಖೆಯ ನಿಯಮವನ್ನು ಗಾಳಿಗೆ ತೂರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ(Mundgod) ಪಾಳಾದ ಇಂದಿರಾ ವಸತಿ ಶಾಲೆಯಲ್ಲಿ ನಡೆದಿದೆ .
ಈ ಶಾಲೆಯಲ್ಲಿ ಒಟ್ಟು 207 ಜನ ವಿದ್ಯಾರ್ಥಿಗಳಿದ್ದು ,ಆರರಿಂದ ಹತ್ತನೇ ತರಗತಿ ವರೆಗೆ ಇಲ್ಲಿ ವಸತಿ ಜೊತೆ ಶಿಕ್ಷಣ ನೀಡಲಾಗುತ್ತದೆ.ಆದ್ರೆ ಇಲ್ಲಿನ ಸಿಬ್ಬಂದಿಗಳು ಮಕ್ಕಳಿಗೆ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ಹಾಗೂ ಊಟದ ಹಾಲ್ ಗಳನ್ನು ಸ್ವಚ್ಛ ಮಾಡಿಸುತಿದ್ದು , ಕೆಲಸ ಮಾಡಬೇಕಾದ ಸಿಬ್ಬಂದಿಗಳು ಮಾತ್ರ ನಿಯೋಜಿತ ಕೆಲಸ ಮಾಡದೇ ಎಸ್.ಎಸ್.ಎಲ್‌ಸಿ ಮಕ್ಕಳ ಮೂಲಕ ಪಾಳಿಯಲ್ಲಿ ತಾವು ಮಾಡಬೇಕಾದ ಕೆಲಸ ಮಾಡಿಸಿ ಮಕ್ಕಳ ಶೋಷಣೆ ಮಾಡುತಿದ್ದಾರೆ.
ಇದನ್ನೂ ಓದಿ:-Dandeli:ಮೃತ ಹಸುವನ್ನು ಟ್ರಾಕ್ಟರ್ ಗೆ ಕಟ್ಟಿ ಎಳೆದೊಯ್ದು ವಿಕೃತಿ- ಇಬ್ಬರ ವಿರುದ್ಧ ಪ್ರಕರಣ ದಾಖಲು
ಇನ್ನು ಈ ವಿಷಯ ಉನ್ನತ ಅಧಿಕಾರಿಗಳಿಗೆ ತಿಳಿಯಬಾರದು ಎಂದು ವಸತಿ ಶಾಲೆಯ ಸಿಸಿ ಕ್ಯಾಮರಾದ ವೈರುಗಳನ್ನು ತುಂಡರಿಸಿದ್ದಾರೆ. ಇದೀಗ ಪರೀಕ್ಷೆ ಬಂದರೂ ಮಕ್ಕಳು ಓದಿಕೊಳ್ಳುವ ಬದಲು ಪಾಳಿಯಲ್ಲಿ ಕೆಲಸ ಮಾಡುವಂತಾಗಿದ್ದು ದೂರುಗಳು ಕೇಳಿಬಂದಿದೆ.