ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada :ಫಟಾ ಫಟ್ ಸುದ್ದಿ 

ಉತ್ತರ ಕನ್ನಡ (uttara kannda)ಜಿಲ್ಲೆಯ ಪ್ರಮುಖ ಸುದ್ದಿಗಳು ಏನು? ಇಂದು ಎಲ್ಲಿ ಏನಾಯ್ತು. ಫಟಾ-ಫಟ್ ಸುದ್ದಿ ನೋಡಿ.
10:38 AM May 20, 2025 IST | ಶುಭಸಾಗರ್
ಉತ್ತರ ಕನ್ನಡ (uttara kannda)ಜಿಲ್ಲೆಯ ಪ್ರಮುಖ ಸುದ್ದಿಗಳು ಏನು? ಇಂದು ಎಲ್ಲಿ ಏನಾಯ್ತು. ಫಟಾ-ಫಟ್ ಸುದ್ದಿ ನೋಡಿ.

Uttara kannda :ಫಟಾ ಫಟ್ ಸುದ್ದಿ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಉತ್ತರ ಕನ್ನಡ (uttara kannda)ಜಿಲ್ಲೆಯ ಪ್ರಮುಖ ಸುದ್ದಿಗಳು ಏನು? ಇಂದು ಎಲ್ಲಿ ಏನಾಯ್ತು. ಫಟಾ-ಫಟ್ ಸುದ್ದಿ ನೋಡಿ.

ಕಾರವಾರ ಮೇ.21 ವಿದ್ಯುತ್ ವ್ಯತ್ಯಯ

ಕಾರವಾರ:- ಕದ್ರಾ (kadra) ಜನರೆಟಿಂಗ್ ಸ್ಟೇಶನ್‌ನಲ್ಲಿ ತುರ್ತು ನಿರ್ವಹಣಾ ನಿಮಿತ್ತ ಶಟ್‌ಡೌನ್ ಇರುವುದರಿಂದ ಕಾರವಾರ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜು ಆಗುವ ಪ್ರದೇಶಗಳಲ್ಲಿ ಮೇ.21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸುವಂತೆ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರಸಿ; ಇಂದು ವಿದ್ಯುತ್‌ ವ್ಯತ್ಯಯ.

ನಿರ್ವಹಣಾ ಕಾಮಗಾರಿ ನಿಮಿತ್ತ ಮೇ 20ರಂದು ಬೆಳಿಗ್ಗೆ 10ರಿಂದ ಸಾಯಂಕಾಲ 6 ಘಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಶಿರಸಿ ತಾಲೂಕಿನ ಇಸಳೂರು ಹಾಗೂ ದಾಸನಕೊಪ್ಪ ಫೀಡರ ವ್ಯಾಪ್ತಿ ಹಾಗೂ ಚಿಪಗಿ ಫೀಡರನ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು, ಹೆಸ್ಕಾಂ ಶಿರಸಿ ಇವರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಮುಂಡಗೋಡ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥ.

ಮುಂಡಗೋಡ ಪಟ್ಟಣದಲ್ಲಿ ಸೋಮವಾರ ರಾತ್ರಿಯಿಂದ ಬೆಳಗಿನ ವರೆಗೆ ಸುರಿದ ಧಾರಾಕಾರ ಮಳೆಗೆ ಕೆಲವು ಬಡಾವಣೆಗಳಲ್ಲಿ ಚರಂಡಿಗಳ ಮೂಲಕ ಹರಿಯಬೇಕಾದ ನೀರು ರಸ್ತೆಯ ಮೇಲೆಯೇ ನಿಂತು ಕೊಳಚೆನೀರು ದಾಟಿಕೊಂಡು ಹೋಗ ಬೇಕಾದ ಪರಿಸ್ಥಿತಿ ಪಾದಚಾರಿಗಳಿಗೆ ಮತ್ತು ವಾಹನಗಳ ಚಾಲಕರಿಗೆ ಬಂದೊದಗಿತು. ಬಂಕಾಪುರ ರಸ್ತೆ ಮತ್ತು ಶಿರಸಿ ರಸ್ತೆಗಳ ಮೇಲೆ ಕೊಳಚೆ ನೀರು ನಿಂತು ಪಾದಚಾರಿಗಳು ಹಾಗೂ ವಾಹನ ಸವಾರರು ಕೆಲ ಹೊತ್ತು ಪರದಾಡುವಂತಾಯಿತು. ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳು ಅರ್ಧ ಮುಳುಗುವಂತಾಯಿತು.

ಭಟ್ಕಳ: ಟೋಲ್ ಸಿಬ್ಬಂದಿಗೆ ಅಂಬ್ಯುಲೆನ್ಸ್ ಡಿಕ್ಕಿಯಾಗಿ ಸಾವು

ಮೃತ ಟೋಲ್ ಸಿಬ್ಬಂದಿ

ಶಿರೂರು ಟೋಲ್‌ಗೇಟ್ ಒಂದಕ್ಕೆ ಅಂಬ್ಯುಲೈನ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟೋಲ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮಹಾರಾಷ್ಟ್ರ ಮೂಲದ ಸಂದೀಪ್ ಸೂರ್ಯವಂಶಿ (35) ಎಂಬಾತನೆ ಮೃತಪಟ್ಟ ಟೋಲ್ ಸಿಬ್ಬಂದಿ. ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಅತೀ ವೇಗದಿಂದ ಬಂದ ಅಂಬುಲೈನ್‌ ಟೋಲ್ ಸಿಬ್ಬಂದಿಗೆ ಡಿಕ್ಕಿಯಾಗಿತ್ತು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕೋಲಾ: ಎರಡು ಲಾರಿಗಳ ನಡುವೆ ಡಿಕ್ಕಿ- ಚಾಲಕ ಸ್ಥಳದಲ್ಲೇ ಸಾವು.

ಲಾರಿ ಮತ್ತು ಕಂಟೇನರ್ ವಾಹನಗಳ ಡಿಕ್ಕಿಯಿಂದ ಕಂಟೇನ‌ರ್ ಚಾಲಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಅಂಕೋಲಾ ತಾಲೂಕಿನ ಹೆಬ್ಬುಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಲಾರಿ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಹೆಬ್ಬುಳ ದರ್ಗಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಕಂಟೇನರ್ ಗೆ ಡಿಕ್ಕಿಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರವಾರ,ಸಿದ್ದಾಪುರ -ಮದ್ಯ ಮಾರಾಟ ನಿಷೇಧ.

ಕಾರವಾರ/ಸಿದ್ದಾಪುರ :- ಕಾರವಾರ (karwar)ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತ (ಮಾಹಾದೇವವಾಡ) ಮತ್ತು ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೇ.25 ರಂದು ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮತದಾನ ಮುಕ್ತಾಯಗೊಳ್ಳುವರೆಗೆ ಮೇ.23 ರ ಸಂಜೆ 5 ಗಂಟೆಯಿAದ ಮೇ.25ರ ಸಂಜೆ 5 ಗಂಟೆಯವರೆಗೆ ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತ (ಮಾಹಾದೇವವಾಡ) ಮತ್ತು ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ಹಾಗೂ ಸಾಗಾಟ ವನ್ನು ನಿಷೇದಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

Advertisement
Tags :
Actor Darshan newsKadraKarwarKumtaMundgodSirsiUttara kannda newsYallapura
Advertisement
Next Article
Advertisement