Ankola :ಪದ್ಮಶ್ರೀ ಸುಕ್ರಿಬೊಮ್ಮಗೌಡ ವಿಧಿವಶ

Ankola :-ಜನಪದ ಕೋಗಿಲೆ ಎಂದೇ ಹೆಸರು ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ನಾಡೋಜಾ ಸುಕ್ರಿ ಬೊಮ್ಮಗೌಡ (91) ವಯೋ ಸಹಜ ಕಾಯಿಲೆಯಿಂದಾಗಿ ಇಂದು ಸ್ವಾ ಗೃಹದಲ್ಲಿ ದೈವಾದೀನರಾಗಿದ್ದಾರೆ .
ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಇವರು ವಿದ್ಯಭ್ಯಾಸ ಮಾಡದಿದ್ದರೂ ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡುವ ಮೂಲಕ ಹಳ್ಳಿ ಸೊಗಡನ್ನ ದಿಲ್ಲಿಗೆ ಕೊಂಡೊಯ್ದ ಕೀರ್ತಿ ಅವರದ್ದು. ಇದಲ್ಲದೇ ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾದ ಇವರು ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಿದರು.
ಇದನ್ನೂ ಓದಿ:-Ankola ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಹೋದ ಸಿಬ್ಬಂದಿ ಆತ್ಮಹ*ತ್ಯೆಗೆ ಯತ್ನ!
2017 ರಲ್ಲಿ ಇವರ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ರಾಜ್ಯ ರಾಷ್ಟ್ರದ ಹಲವು ಪ್ರಶಸ್ತಿ ಪಡೆದಿದ್ದ ಇವರು ಇತ್ತೀಚೆಗೆ ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದರೂ. ತೀವ್ರ ಉಸಿರಾಟ ಸಮಸ್ಯೆ ಹೊಂದಿದ್ದ ಇವರು ಕೆಲವು ದಿನದ ಹಿಂದೆ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂಧಿದ್ದರು. ಆದ್ರೆ ಇಂದು ಮುಂಜಾನೆ ಇಹಲೋಕ ತೆಜಿಸಿದ್ದು ಇಬ್ಬರು ಮೊಮ್ಮೊಕ್ಕಳು , ಓರ್ವ ಸೊಸೆಯನ್ನು ಅಗಲಿದ್ದಾರೆ. ಇಂದು ಬಡಿಗೇರಿಯಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಲಿದೆ.
