BHATKAL ಶಾಲಾ ಟೆಂಪೋಗೆ ಆಕಸ್ಮಿಕ ಬೆಂಕಿ: ತಪ್ಪಿದ ಬಾರಿ ಅನಾಹುತ
ಕಾರವಾರ :-ಚಲಿಸುತ್ತಿದ್ದ ಶಾಲಾ ಟೆಂಪೋಗೆ ಆಕಸ್ಮಿಕವಾಗಿ ಬೆಂಕಿ (fire )ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದು ಟೆಂಪೋ ದಲ್ಲಿದ್ದ 12 ವಿದ್ಯಾರ್ಥಿಗಳನ್ನು ಚಾಲಕ ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66 ರ ವೆಂಕಟಪುರದಲ್ಲಿ ಬಳಿ ನಡೆದಿದೆ.
ಇದನ್ನೂ ಓದಿ:-Bhatkal :ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಆತ ಪಡೆದಿದ್ದ ಹಣವೆಷ್ಟು ಗೊತ್ತಾ?
ಶಮ್ಸ್ ಶಾಲೆಯ ವಾಹನದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಹೋಗಿತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಶಮ್ಸ್ ಶಾಲೆಯಿಂದ ಶಿರಾಲಿ ಕಡೆಗೆ ವಿದ್ಯಾರ್ಥಿಗಳನ್ನು ಬಿಡಲು ತೆರಳುತ್ತಿದ್ದ ವೇಳೆ ಇಲ್ಲಿನ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ 66 ಬಳಿ ವಾಹನದಲ್ಲಿ ಹೋಗಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮೊದಲು ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿದ್ದಾರೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ವಾಹನಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸ್ಥಳಕೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿನಂದಿಸಿದ್ದಾರೆ.
ವಾಹನ ಚಾಲಕ ನೀಡಿರುವ ಮಾಹಿತಿ ಪ್ರಕಾರ 12 ವಿದ್ಯಾರ್ಥಿಗಳು ವಾಹನದಲ್ಲಿದ್ದರು ಎಂದು ತಿಳಿದು ಬಂದಿದೆ.
ಶಾಲಾ ವಾಹನಕ್ಕೆ ಬೆಂಕಿ ತಗಲಿದ ವಿಡಿಯೋ ಇಲ್ಲಿದೆ:-
ಗ್ರಾಮೀಣ ಠಾಣೆ ಪಿ.ಐ ಚಂದನ ಗೋಪಾಲ,ಪಿ.ಎಸ್.ಐ ಭರಮಪ್ಪ ಬೆಳಗಲಿ,ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು , ಭಟ್ಕಳ (Bhatkal) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.