Karwar: ಕಡಲ ಕೊರತಕ್ಕೆ ರಸ್ತೆ ಕುಸಿತ| ಹಣವಿಲ್ಲದೇ ಬದಲಿ ವ್ಯವಸ್ಥೆ ಮಾಡದ ಜಿಲ್ಲಾಡಳಿತ
Karwa ಕಡಲ ಕೊರತಕ್ಕೆ ರಸ್ತೆ ಕುಸಿತ| ಹಣವಿಲ್ಲದೇ ಬದಲಿ ವ್ಯವಸ್ಥೆ ಮಾಡದ ಜಿಲ್ಲಾಡಳಿತ
ಕಾರವಾರ :- ಕಾರವಾರ ತಾಲೂಕಿನ ಮಾಜಾಳಿ ವ್ಯಾಪ್ತಿಯ ಬಾವಳದಲ್ಲಿ ಕಡಲ ಕೊರೆತದಿಂದ ಕಾಂಕ್ರೀಟ್ ರಸ್ತೆ ಕುಸಿದು ಎರಡು ತಿಂಗಳು ಕಳೆದರೂ ರಸ್ತೆ ನಿರ್ಮಾಣವಾಗದ ಹಿನ್ನಲೆ ವಿದ್ಯಾರ್ಥಿಗಳು (student) ಮೂರು ಕಿಲೋಮೀಟರ್ ನಡೆದು ಬಸ್ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:- Karwar :ಸಚಿವ ವೈದ್ಯರಿಂದ ಬಾಗಿಲು ಮುಚ್ಚಿದ ಸರಣಿ ಅಧಿಕಾರಿಗಳ ಸಭೆ ಗುಟ್ಟೇನು
ಕಳೆದ ಜುಲೈ (july)ತಿಂಗಳಲ್ಲಿ ಹೆಚ್ಚಿನ ಮಳೆಯಿಂದಾಗಿ (rain ) ಬಾವಳ ವ್ಯಾಪ್ತಿಯಲ್ಲಿ ಕಡಲ ಕೊರೆತ ( sea erosion )ಉಂಟಾಗಿತ್ತು. ಇದರಿಂದ ಸುಮಾರು 200 ಮೀಟರ್ ಉದ್ದದ ರಸ್ತೆ ಕಾಂಕ್ರೀಟ್ ರಸ್ತೆ (road) ಕೂಡ ಕುಸಿದು ಬಿದ್ದಿತ್ತು.
ಹೀಗಾಗಿ ದೇವಬಾಗ್ ,ಬಾವಳ ಹಾಗೂ ಮಾಜಾಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ವ್ಯವಸ್ಥೆಯನ್ನು ನಿಲ್ಲಿಸಲಾಗಿದ್ದು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಕುಸಿದ ರಸ್ತೆಯನ್ನು ಸರಿಪಡಿಸುವ ಕೆಲಸಲಕ್ಕೆ ಬಂದರು ಇಲಾಖೆಯು ಯಾವ ಕ್ರಮ ಕೂಡ ತೆಗದುಕೊಂಡಿಲ್ಲ.
ಇದನ್ನೂ ಓದಿ:-Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.
ಇದರಿಂದಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುತ್ತಮುತ್ತಲಿನ 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿನಿತ್ಯ ಮೂರು ಕಿಲೋಮೀಟರ್ ದೂರ ನಡೆದು ಸಾಗಬೇಕಿದೆ.
ಕಾರವಾರ ಕ್ಕೆ ಬರುವ ವಿದ್ಯಾರ್ಥಿಗಳು, ಗೋವಾ (goa) ಭಾಗಕ್ಕೆ ಹೋಗುವ ಕಾರ್ಮಿಕರು ಸೇರಿದಂತೆ ಆಸ್ಪತ್ರೆಗೆ ಹೋಗುವ ವೃದ್ಧರಿಗೂ ಇದರಿಂದ ತೊಂದರೆಯಾಗುತ್ತಿದೆ. ದೇವಬಾಗ, ಮಾಜಾಳಿ ಮಾರ್ಗದ ಬಾವಳಕ್ಕೆ ಸಾಮಾನ್ಯವಾಗಿ ದಿನಕ್ಕೆ ಆರು ಬಾರಿ ಬಸ್ ಸಂಚರಿಸುತ್ತಿತ್ತು.
ಇದೀಗ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ವೃದ್ಧರು ರಾಷ್ಟ್ರೀಯ ಹೆದ್ದಾರಿ 66 ಕ್ಕೆ ನಡೆದು ಬಂದು ಬಸ್ ಸಂಪರ್ಕ ಪಡೆಯಬೇಕಿದೆ.
ಹೆದ್ದಾರಿಯಲ್ಲಿಯೂ ದಿನಕ್ಕೆ ಮೂರು ಬಾರಿ ಮಾತ್ರ ಬಸ್ ಸೌಲಭ್ಯ ಇದೆ. ಅಲ್ಲಿಯೂ ಒಮ್ಮೊಮ್ಮೆ ಬಸ್ ಬರುವುದಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಬಾವಳ ಗ್ರಾಮದ ಸುತ್ತ ಸುಮಾರು 2500 ಕ್ಕು ಹೆಚ್ಚು ಕುಟುಂಬಗಳಿವೆ. ಅವರಲ್ಲಿ ಮೀನುಗಾರರೇ ಹೆಚ್ಚಿದ್ದು ಹೆಚ್ವಿನ ಮಹಿಳೆಯರು ಮೀನು ಮಾರಾಟ ಮಾಡುತ್ತಾರೆ. ಇದೀಗ ಅವರಿಗೂ ಬಸ್ ಸೌಲಭ್ಯವೇ ಪ್ರಶ್ನೆಯಾಗಿದೆ.
ಸರಕಾರಕ್ಕೆ ಪ್ರಸ್ಥಾವನೆ.
ಬಂದರು ಇಲಾಖೆ (port department) ಸೇರುವ ಈ ರಸ್ತೆಯನ್ನು ಸರಿಪಡಿಸಲು ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಆದರೆ ಕಡೆಯ ಕೊರೆತದಿಂದ ಹಾನಿಯಾಗಿದ್ದ ಕರಾವಳಿಯ ಮೂರು ಜಿಲ್ಲೆಗಳಿಗೆ ತಲಾ ಐದು ಕೋಟಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಈ ಹಿನ್ನಲೆ ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಬಾವಳದ ರಸ್ತೆಯನ್ನು ಪರಿಶಿಲಿಸಿದ್ದೇವೆ. ಬಳಿಕ ಈ ಬಗ್ಗೆ ಸರಕಾರಕ್ಕೂ ಪ್ರಸ್ಥಾವನೆ ಸಲ್ಲಿಸಿದ್ದೇವೆ. ಆದರೆ ಸರಕಾರದಿಂದ ಯಾವುದೇ ಹಣ ಬಂದಿಲ್ಲ.
ಹಣ ಮಂಜೂರಾದ ಬಳಿಕ ರಸ್ತೆಯ ನಿರ್ಮಾಣಕ್ಕೆ ಮುಂದಾಗುತ್ತೇವ ಎಂದು ಬಂದರು ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.