Uttara kannda- ಕಳ್ಳನ ಹಸ್ತದ ಗುರುತಲ್ಲಿ ಸಿಕ್ತು 128 ಕಡೆ ಕಳ್ಳತನ ಮಾಡಿದ ಸುಳಿವು! ಈ ಕಳ್ಳನ ಕಥೆಯೇ ರೋಚಕ!
Karwar News 25 November 2024 :- ಆತ ರಾತ್ರಿ ವೇಳೆ ಕಳ್ಳತನ ಮಾಡುತ್ತಿರಲಿಲ್ಲ. ಹಗಲಿನಲ್ಲೇ ಎಲ್ಲ ಜನರು ಓಡಾಡುವಾಗಲೇ ಕಳ್ಳತನ ಮಾಡಿ ಎಸ್ಕೇಪ್ ಆಗುತಿದ್ದ. ಹೀಗೆ ರಾಜ್ಯ ಹಾಗೂ ಅಂತರರಾಜ್ಯದಲ್ಲಿ 128 ಪ್ರಕರಣದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಕಾರವಾರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಹೌದು ಕಾರವಾರ ನಗರದ (karwar )ಆಶ್ರಮರೋಡದಲ್ಲಿರುವ ಅಭಿಮಾನಶ್ರೀ ಅಪಾರ್ಟಮೆಂಟನ ಪ್ಲಾಟ್‌ನಲ್ಲಿ ಹಗಲು ಕಳ್ಳತನವಾದ ಬಗ್ಗೆ ಪ್ಲಾಟಿನ ಮಾಲೀಕರಾದ ಪ್ರೀಯಾ ಅಂತೋನಿ ಪರ್ನಾಂಡೀಸ್, ರವರು ದೂರು ನೀಡಿದ್ದರು .
ಇದನ್ನೂ ಓದಿ:-Karwar :ಖಾಸಗಿ ಕ್ಲಿನಿಕ್ ಗೆ ಬೆಂಕಿ ಲಕ್ಷಾಂತರ ರುಪಾಯಿ ವಸ್ತುಗಳು ಬೆಂಕಿಗಾಹುತಿ
ಈ ದೂರಿನ ಆಧಾರದಲ್ಲಿ ಕಾರವಾರ ಶಹರ ಪೊಲೀಸ(police) ಠಾಣೆಯ ಪೊಲೀಸ ನಿರೀಕ್ಷಕರಾದ ರಮೇಶ.ಹೂಗಾರ, ರವೀಂದ್ರ ಬಿರಾದರ ಪೊಲೀಸ್ ಉಪ-ನಿರೀಕ್ಷಕರು, ಹಾಗೂ ಸಿಬ್ಬಂದಿಗಳಾದ ಸುರಜ ಕೊಠಾರಕರ, ಹಸನ ಕುಟ್ಟಿ. ಗಿರೀಶಯ್ಯ ಎಂ.ಎಸ್ ತಂಡವು ಕೊನೆಗೂ ಪಂಜಾಬ್ ರಾಜ್ಯದಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಪಂಜಾಬ್ ಮೂಲದ ಸುಮೀರ್ ಶರ್ಮ (40) ಅಲಿಯಾಸ್ ಗುಲ್ಲು ಅಲಿಯಾಸ್ ಸ್ಯಾಮ್ ಅಲಿಯಾಸ್ ಜ್ಯಾಕ್ ಅಲಿಯಾಸ್ ಜಾನ್ ಎಂದಾಗಿದ್ದು ಈತ ಪಂಜಾಬ್ ನಲ್ಲಿ ಅಲ್ಲದೇ ಬೆಂಗಳೂರಿನ ಬನಶಂಕರಿ ಹಾಗೂ ಹೊನ್ನಾವರದಲ್ಲಿ ಸಹ ಮನೆ ಹೊಂದಿದ್ದಾನೆ.
ಈತನಿಂದ ಕಳವು ಮಾಡಿದ 34.026 ಗ್ರಾಂ. ಬಂಗಾರದ ವಡವೆಗಳನ್ನು ಹಾಗೂ 03 ಲಕ್ಷ ರೂಪಾಯಿ ನಗದು ಹಣವನ್ನು ಹೀಗೆ ಒಟ್ಟು ಸುಮಾರು 5 ಲಕ್ಷದಷ್ಟು ಮಾಲನ್ನು ಜಪ್ತ ಪಡಿಸಿಕೊಳ್ಳಲಾಗಿದೆ.
ಕೈಯಲ್ಲಿತ್ತು ಹಲವು ಕಳ್ಳತನ ಸುಳಿವು!

ಈತನನ್ನು ಬಂಧಿಸಿದ್ದ ಪೊಲೀಸರು ತನಿಖೆ ವೇಳೆ ಈತನ ಫಿಂಗರ್ ಪ್ರಿಂಟ್ ಪ್ರತಿ ಪಡೆದು ಮನೆಕಳ್ಳತನದ ಬಗ್ಗೆ ತನಿಖೆ ಕೈಗೊಂಡಾಗ ಪೊಲೀಸರೇ ಬೆಚ್ಚಿ ಬಿದ್ದಿದ್ದರು.
ಇದನ್ನೂ ಓದಿ:-Ankola : ಪ್ರಾವಾಹ ಸಂತ್ರಸ್ತರ ಪರಿಹಾರ ಹಣಕ್ಕೆ ಕತ್ತರಿ ದಾಖಲೆ ಕೊರತೆ ತಂದೊಡ್ಡಿತು ಸಮಸ್ಯೆ!
ಈತನ ಫಿಂಗರ್ ಪ್ರಿಂಟ್ ರಾಜ್ಯದ ಹಲವು ಭಾಗದಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಪಡೆದಿದ್ದ ಬೆರಳಚ್ಚುಗಳು ಒಂದಕ್ಕೊಂದು ತಾಳೆಯಾಗಿದ್ದವು ಹೀಗೆ ತಾಳೆಯಾದ 128 ಪ್ರಕರಣಗಳು ಪತ್ತೆಯಾಗಿ ಈತ ಕಳ್ಳತನ ಮಾಡಿದ ಒಂದೊಂದೇ ಪ್ರಕರಣ ಹೊರಬಂದರೇ ಹೊರ ರಾಜ್ಯದಲ್ಲೂ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾತ್ರಿ ಮಾಡೋಲ್ಲ ಕಳ್ಳತನ! ಈತನ style ಬೇರೆ.

ಈತ ಎಲ್ಲಾ ಕಳ್ಳರಂತೆ ರಾತ್ರಿ ಕಳ್ಳತನ ಮಾಡುವುದಿಲ್ಲ. ಬೆಳಗ್ಗೆಯಿಂದ ಸಂಜೆ ಒಳಗೆ ಈತನ ಪಾಳೆ. ಎಲ್ಲಿ ಹಗಲಿಡೀ ಮನೆ ಬಾಗಿಲು ಹಾಕಿರುತ್ತೋ ಅಲ್ಲಿ ಈತನ ಟಾರ್ಗೆಟ್.
ಬೆಳಗ್ಗೆ ಕೆಲಸಕ್ಕೋ , ಅಥವಾ ಇನ್ನೆಲಿಗೋ ಹೋದ ಮನೆ ಟಾರ್ಗೆಟ್ ಮಾಡಿ ಒಳನುಗ್ಗಿ ಯಾರಿಗೂ ತಿಳಿಯದಂತೆ ಕಳ್ಳತನ ಮಾಡಿ ಹೊರನಡೆಯುತ್ತಾನೆ. ಹೀಗೆ ಈತ ಕಳ್ಳತನ ಮಾಡಿದ ಮನೆಗಳಲ್ಲಿ ಲಕ್ಷ ಲಕ್ಷ ದೋಚಿ ಪರಾರಿಯಾಗಿದ್ದಾನೆ.