Sirsi : ನಕಲಿ ತುಪ್ಪ ತಯಾರಿಕೆ ಘಟಕದ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
Sirsi : ನಕಲಿ ತುಪ್ಪ ತಯಾರಿಕೆ ಘಟಕದ ಮೇಲೆ ಆರೋಗ್ಯಾಧಿಕಾರಿಗಳ ದಾಳಿ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ (uttara kannda)ಭಾಗದಲ್ಲಿ ನಕಲಿ ತುಪ್ಪದ(Ghee) ಹಾವಳಿ ಮಿತಿಮೀರಿದ್ದು ಇದೀಗ ಆರೋಗ್ಯ ಇಲಾಖೆಯವರು( health officer )ಇಂತಹ ಘಟಕದಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸುತಿದ್ದಾರೆ.
ಜಿಲ್ಲೆಯ ಶಿರಸಿಯಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತಿದ್ದ ಘಟಕದಮೇಲೆ ಆರೋಗ್ಯ ಇಲಾಖೆ ಅಧಿಕಾರಿ ಕೃಷ್ಣಭಟ್ ತಂಡ ದಾಳಿ ಮಾಡಿದ್ದಾರೆ.

ನಗರದ ಗಾಂಧಿನಗರದಲ್ಲಿನ ಗೋನ್ಸಾಲಿವಿಸ್ ಎಂಬುವವರ ಮನೆಯಲ್ಲಿ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳು ಇಲ್ಲಿ ತಯಾರಾಗುತಿದ್ದ ತುಪ್ಪಗಳನ್ನು ವಶಕ್ಕೆ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:-Ankola:ಕೇಣಿ ಸಮುದ್ರದಲ್ಲಿ ಮುಂದುವರೆದ ನಿಷೇಧಾಜ್ಞೆ ಹೊಸ ಆದೇಶ ಏನು? ವಿವರ ಇಲ್ಲಿದೆ.
ಇನ್ನು ಈ ತುಪ್ಪವನ್ನು ಬಳ್ಳಾರಿಯಿಂದ ಬಂದ ತಂಡ ಹಳ್ಳಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತಿದ್ದು , ಈ ತುಪ್ಪ ನಕಲಿ ಎಂಬುದು ತಿಳಿಯುತಿದ್ದಂತೆ ಮಾರಾಟ ಮಾಡುತಿದ್ದ ಬಳ್ಳಾರಿ ಮೂಲದ ವ್ಯಕ್ತಿಯನ್ನು ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ.
ಇದನ್ನೂ ಓದಿ:-Sirsi | ಶ್ರೀಗಂಧ ಕಳ್ಳತನ ಮಾಲು ಸಮೇತ ಮೂವರ ಬಂಧನ