Uttara kannda : ಇಂದು ಏನು ಸುದ್ದಿ? ವಿವರ ನೋಡಿ.
Uttara kannda : ಇಂದು ಏನು ಸುದ್ದಿ? ವಿವರ ನೋಡಿ.
ನಿಮ್ಮೂರಿನ ಸುದ್ದಿಗಳನ್ನು ಕಳುಹಿಸಲು -79753 07373 ಗೆ WhatsApp ಮಾಡಿ.
Kumta: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವೃದ್ದೆ.

ಕುಮಟಾ ತಾಲೂಕಿನ ಹೆಗಡೆ ಗ್ರಾ. ಪಂ. ವ್ಯಾಪ್ತಿಯ ದೊಡ್ಡಗೊಪ್ಪದ ವೃದ್ಧೆಯೊಬ್ಬರು ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಹೆಗಡೆ ದೊಡ್ಡಕೊಪ್ಪ ನಿವಾಸಿ ಸೀತಾರಾಮ ನಾಯ್ಕ ಆತ್ಮಹತ್ಯೆಗೆ ಶರಣಾವ ವೃದ್ದೆ. ಈಕೆಗೆ ಮೂರು ತಿಂಗಳ ಹಿಂದೆ ಹೃದಯಾಘಾತವಾಗಿ ಸ್ಟಂಟ್ ಅಳವಡಿಸಲಾಗಿತ್ತು. ಇದನ್ನೇ ಮನಸಿಗೆ ಹಚ್ಚಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಬಚ್ಚಲುಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾವಿಗೀಡಾಗಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.
Sirsi : ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ.

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಸೋಮವಾರ ಬಂಧಿಸಿ, ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಶಿರಸಿಯ ಕಸ್ತೂರಬಾನಗರದ ಅಭಿಷೇಕ ನಾರಾಯಣ ಪವಾರ (19) ಬಂಧಿತ ಯುವಕ. ಈತ ಕಳೆದ ಹಲವು ತಿಂಗಳುಗಳಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿಯ ಪಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ನಗರದ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:-Sirsi : ನಕಲಿ ತುಪ್ಪ ತಯಾರಿಕೆ ಘಟಕದ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
Ankola : ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ: ದಂಡ.

ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಮರಳು ತುಂಬಿದ ಲಾರಿಗಳನ್ನು ಮತ್ತು 5 ಚಿರೇ ಕಲ್ಲು ಲಾರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಧಿಕೃತ ಮಾಹಿತಿಯ ಮೇರೆಗೆ ಹಿರಿಯ ಭೂ ವಿಜ್ಞಾನಿ ಆಶಾ ಮಾಸ್ತಿ ಕಟ್ಟಾ ದಾಳಿ ನಡೆಸಿದ್ದರು. ಈ ವೇಳೆ ಎರಡು ಲಾರಿಗಳು ಮರಳು ತುಂಬಿದ್ದು ಯಾವುದೇ ರೀತಿಯ ಅಧಿಕೃತ ಪರಮಾನಿಗೆಗಳು ಇಲ್ಲದೆ ಇರುವುದರಿಂದ ಇವುಗಳನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಹಾಜರುಪಡಿಸಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ'-Ankola:ಕೇಣಿ ಸಮುದ್ರದಲ್ಲಿ ಮುಂದುವರೆದ ನಿಷೇಧಾಜ್ಞೆ ಹೊಸ ಆದೇಶ ಏನು? ವಿವರ ಇಲ್ಲಿದೆ.
Uttara kannda ಜಿಲ್ಲೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಪ್ರವಾಸ.
ರಾಜ್ಯದ ಗೃಹ ಸಚಿವ ಡಾ .ಜಿ.ಪರಮೇಶ್ವರ ಅವರು ಮಾರ್ಚ್ 26 ಮತ್ತು 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಪ್ರವಾಸದ ವಿವರಗಳು ಇಂತಿವೆ.
ಮಾರ್ಚ್ 26 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಎಸ್.ಪಿ. ಕಚೇರಿಯಲ್ಲಿ ವಿಧಾನಸಭಾ/ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿರುವ ಹೊಸ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮ.
ಶಿರಸಿ ಪಟ್ಟಣದ ಟ್ರಾಫಿಕ್ ಪೊಲೀಸ್ ಠಾಣೆಯ ವಿದ್ಯುಕ್ತ ಚಾಲನೆ (Through WEBCAST), ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಚಿತ್ರಿಸಲಾಗಿರುವ ವಿಡಿಯೋಗಳ ಬಿಡುಗಡೆ, ರೂ.1,15,00,000/- ವೆಚ್ಚದಲ್ಲಿ ನವೀಕರಿಸಲಾದ ಜಿಲ್ಲಾ ಪೊಲೀಸ್ ಕಛೇರಿಯ ವಿವಿಧ ವಿಭಾಗಗಳ ಉದ್ಘಾಟನೆಯಲ್ಲಿ ಭಾಗವಹಿಸುವರು.
1 ಗಂಟೆಯಿoದ 2 ಗಂಟೆಯವರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ನಂತರ ವಾಸ್ತವ್ಯ ಮಾಡುವರು.ಮಾರ್ಚ್ 27 ರಂದು ಸಂಜೆ 5.30 ಕ್ಕೆ ಕಾರವಾರದಿಂದ ಬೆಂಗಳೂರಿಗೆ ತೆರಳುವರು.
ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ -2025 ರಾಲಿಯನ್ನು ಮಾಜಾಳಿ ಚೆಕ್ ಪೋಸ್ಟ್ ಬಳಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸ್ವಾಗತಿಸಲಾಯಿತು.
ಕಾರವಾರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ.

Karwar ನಗರದ ಶಿವಾಜಿ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅಲ್ಲದೇ ಮಾನವ ಸರಪಳಿ ರಚಿಸುವ ಮೂಲಕ ಗಮನ ಸೆಳೆದರು.
ಇದನ್ನೂ ಓದಿ:-Karwar:ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಮಾತನಾಡಿ ಸ್ವಾತಂತ್ರ್ಯ ಬಂದಾಗಿಂದ ಕಾಂಗ್ರೆಸ್ ಸರಕಾರ ತುಷ್ಟಿಕರಣ ಮಾಡುತ್ತಿದೆ ಈ ಬಾರೀ ಮಂಡಿಸಿದ ಬಜೆಟ್ ನಲ್ಲಿ ಒಂದೇ ಸಮುದಾಯದ ಓಲೈಕೆ ಮಾಡಿದೆ ಮುಸ್ಲಿಂ ಸಮುದಾಯ ಗುತ್ತಿಗದಾರರಿಗೆ ಶೇ 4 ಮೀಸಲಾತಿ ನೀಡುತ್ತಿರುವುದು ಖಂಡನಿಯ ಎಂದರು.
ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ್ ಮಾತನಾಡಿ ಸುಳ್ಳು ಆರೋಪದಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತದೆ ರೈತರ ಸಂವಿಧಾನ ವಿರೋಧಿ ಎಂದರೆ ಕಾಂಗ್ರೆಸ್ ಸರಕಾರ ಮಾತ್ರ ಎಂದು ಜರಿದರು
ಮುಖಂಡರಾದ ನಾಗರಾಜ ನಾಯಕ ಮಾತನಾಡುತ್ತ ಹನಿ ಟ್ಯಾಪ್ ವಿಚಾರದಲ್ಲಿ ಆಡಳಿತ ಪಕ್ಷದ ಮಂತ್ರಿ ಸಿಲುಕಿದದ್ದಾರೆ 75 ವರ್ಷದವರನ್ನ ಬಿಡದ ಹನಿ 25 ವರ್ಷದ ಯುವಕರನ್ನು ಬಿಡುತ್ತದೆಯೇ ಎಂದರು
ಮುಖಂಡ ರಾಜೇಂದ್ರ ನಾಯ್ಕ ಮಾತನಾಡುತ್ತ ವಿರೋಧ ಪಕ್ಷದ ನಾಯಕರು ಭಾರತ ಮಾತೆ ಎಂದರೆ ಯಾರು ಎನ್ನುತ್ತಾರೆ ಅವರಿಗೆ ಭಾರತ ಪರ ಘೋಷಣೆ ಕೂಗಿದರೆ ಕೋಪ ಬರುತ್ತೆ ಇದು ಕಾಂಗ್ರೆಸ್ ಆಡಳಿತ ಎಂದು ಲೇವಡಿ ಮಾಡಿದರು
ಶಾಸಕ ದಿನಕರ ಶೆಟ್ಟಿ ಮಾತನಾಡಿ ಈಚೆಗೆ ಮಂಡಿಸಿದ ಬಜೆಟ್ ನಲ್ಲಿ ಜಿಲ್ಲೆಗೆ ಯಾವುದೇ ಅನುದಾನ ನೀಡಿಲ್ಲ ಅನೇಕ ಯೋಜನೆಗಳು ನಿಂತಿವೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಧ್ವನಿ ಇಲ್ಲ ಜಿಲ್ಲೆಯಲ್ಲಿ ಸಂಪದ್ಭರಿತವಾದ ಅರಣ್ಯ ಇದ್ದು ಸಾವಿರಾರು ಕೋಟಿ ರಾಜ್ಯದ ಬೊಕ್ಕಸಕ್ಕೆ ಹೋಗುತ್ತದೆ ಆದರೆ ಕಾಂಗ್ರೇಸ ಶಾಸಕರು ಪಾಲು ಕೇಳಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಡಿಸಿಎಂ ಡಿ ಕೆ ಶಿವಕಮಾರ ಅವರು ದೆಹಲಿಗೆ ಭೇಟಿ ನೀಡಿ ಕಾಯ್ದೆ ತಿದ್ದುಪಡಿ ಮಾಡಿ ಮುಸ್ಲಿಂರಿಗೆ ಮೀಸಲಾತಿ ನೀಡಲು ಪ್ರಯತ್ನಿಸುತ್ತಿದ್ದಾರೆ ಇದಕ್ಕೆ ನಾವು ಖಂಡಿಸುತ್ತೇವೆಂದರು.ಬಳಿಕ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗೋವಿಂದ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಹೆಗಡೆ, ಪ್ರಶಾಂತ್ ನಾಯ್ಕ್, ಶಿವಾಜಿ ನರ್ಸಾನಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಮಿಡಿ, ಮಂಡಲ ಅಧ್ಯಕ್ಷರಾದ ನಾಗೇಶ್ ಕುರುಡೇಕರ್, ಗ್ರಾಮೀಣ ಸುಭಾಷ್ ಗುನಗಿ, ಅಂಕೋಲಾದ ಗೋಪಾಲಕೃಷ್ಣ ವೈದ್ಯ, ಹಾಗೂ ಮಂಡಲದ ವಿವಿಧ ಅಧ್ಯಕ್ಷರು, ಕಾರವಾರ ನಗರ ಸಭೆ ಅಧ್ಯಕ್ಷರಾದ ರವಿರಾಜ ಅಂಕೋಲೇಕರ್, ಹಾಗೂ ಸದಸ್ಯರು, ಸಂಜಯ್ ಸಾಳುಂಕೆ, ದೇವಿದಾಸ್ ನಾಯ್ಕ, ಸುನೀಲ್ ಸೋನಿ ಮಹಿಳಾ ಮೋರ್ಚಾ, ಯುವ ಮೋರ್ಚಾ ಓಬಿಸಿ ಮೋರ್ಚಾ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.