ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda :ಇಂದು ಬೆಳಗ್ಗೆ ಜಿಲ್ಲೆಯಲ್ಲಿ ಏನು ಸುದ್ದಿ ವಿವರ ನೋಡಿ.

ಶಿರಸಿ (sirsi) ತಾಲೂಕಿನ ರಸ್ತೆಯ ಹೆಗಡೆಕಟ್ಟಾ ಸಂಪಗೆಮನೆ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಶಿರಸಿ ತಾಲೂಕಿನ ಹೆಗ್ಗಾರ ಗ್ರಾಮದ ಕೃಷ್ಣ ಈಶ್ವರ ಗೌಡ (27) ಮೃತಪಟ್ಟ ಬೈಕ್ ಸವಾರ. ಈತ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗ್ರಾಮೀಣ ಠಾಣೆ ಪಿಎಸ್‌ಐ ಸೀತಾರಾಮ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ
12:08 PM Mar 25, 2025 IST | ಶುಭಸಾಗರ್

Uttara kannda :ಇಂದು ಬೆಳಗ್ಗೆ ಜಿಲ್ಲೆಯಲ್ಲಿ ಏನು ಸುದ್ದಿ ವಿವರ ನೋಡಿ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Sirsi : ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿರಸಿ (sirsi)  ತಾಲೂಕಿನ ರಸ್ತೆಯ ಹೆಗಡೆಕಟ್ಟಾ ಸಂಪಗೆಮನೆ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಶಿರಸಿ ತಾಲೂಕಿನ ಹೆಗ್ಗಾರ ಗ್ರಾಮದ ಕೃಷ್ಣ ಈಶ್ವರ ಗೌಡ (27) ಮೃತಪಟ್ಟ ಬೈಕ್ ಸವಾರ. ಈತ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗ್ರಾಮೀಣ ಠಾಣೆ ಪಿಎಸ್‌ಐ ಸೀತಾರಾಮ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿರಸಿ: ಓಸಿ ಅಡ್ಡೆ ಮೇಲೆ ದಾಳಿ ; ಪ್ರಕರಣ ದಾಖಲು.

Advertisement

ಶಿರಸಿ ತಾಲೂಕಿನ ಗೋಳಿ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓಸಿ ಆಟ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಸೋಮವಾರ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ತಾಲೂಕಿನ ಕೊಳಗಿಬೀಸ್ ನ ಅಯ್ಯಪ್ಪ ನಾರಾಯಣ ಅಲಗೇರಿಕರ (37) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಈತ ಶಿರಸಿ ತಾಲೂಕಿನ ಗೋಳಿ ಕ್ರಾಸ್‌ ಸಾರ್ವಜನಿಕ ಸ್ಥಳದಲ್ಲಿ ಓಸಿ ಆಟ ನಡೆಸುತ್ತಿದ್ದ ವೇಳೆ ಗ್ರಾಮೀಣ ಪೊಲೀಸರು ದಾಳಿ ನಡೆಸಿ, 1050 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

Haliyala : ಶಿಶು ಆಹಾರ ಕಳ್ಳತನ ಪ್ರಕರಣ ; ಕಾಂಗ್ರೆಸ್‌ ಮುಖಂಡನ ಬಂಧನ.

ಶಿಶುಕಲ್ಯಾಣ ಇಲಾಖೆಯ ಆಹಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ವಿಷ್ಣು ಮಿಶಾಳೆಯನ್ನು ಹಳಿಯಾಳದ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಾ. 17ರಂದು ಅಂಗನವಾಡಿ ಆಹಾರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ತಹಸೀಲ್ದಾರ್ ಪ್ರವೀಣ ಹುಚ್ಚಣ್ಣವರ ನೇತೃತ್ವದಲ್ಲಿ ದಾಳಿ ನಡೆಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆಹಾರ ವಸ್ತುಗಳನ್ನು ಹಾಗೂ ಅದಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದರು. ವಿಷ್ಣು ಮಿಶಾಳೆ ಸೇರಿದಂತೆ ಮೂವರ ಮೇಲೆ ಪ್ರಕರಣದ ದಾಖಲಾಗಿತ್ತು.

Dandeli :ಗ್ಯಾಸ್ ತುಂಬಿದ ಲಾರಿ ಪಲ್ಟಿ ಚಾಲಕ ಪಾರು.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ  ಗ್ಯಾಸ್ ಸಿಲಿಂಡರ್ ತುಂಬಿದ  ಟ್ರಕ್ ಮರಕ್ಕೆ ಢಿಕ್ಕಿಯಾಗಿ ಚಾಲಕನಿಗೆ ಗಾಯವಾದ ಘಟನೆ ಹಳಿಯಾಳ - ದಾಂಡೇಲಿ ರಾಜ್ಯ ಹೆದ್ದಾರಿಯ ಆಲೂರು - ಕರ್ಕಾ ಮಧ್ಯೆ ನಡೆದಿದೆ.

ಇದನ್ನೂ ಓದಿ:- Uttara kannda : ಇಂದು ಏನು ಸುದ್ದಿ? ವಿವರ ನೋಡಿ.

ಗಾಯಗೊಂಡ ಚಾಲಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮ್ಮಿನಭಾವಿ ಗ್ರಾಮದ ನಿವಾಸಿ ವಿನಾಯಕ ಚ್ಯಾಟಿ ಎಂದಾಗಿದ್ದು ,ಅಪಘಾತದ ಬಳಿಕ ವಾಹನದ ಬಾಗಿಲು ಮುರಿದು ಚಾಲಕನನ್ನು ರಕ್ಷಣೆಯನ್ನು ಸ್ಥಳೀಯರು ಮಾಡಿದ್ದಾರೆ‌.

ಕೂಡಲೇ ಚಾಲಕನನ್ನು 108 ಆಂಬುಲೆನ್ಸ್ ಮೂಲಕ ದಾಂಡೇಲಿ ಸರಕಾರಿ ಆಸ್ಪತ್ರೆಗೆ ರವಾನೆಮಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿರೂರು ಭೂ ಕುಸಿತ ಪ್ರಕರಣ-ಎಪ್ರಿಲ್ 2 ಕ್ಕೆ ಪ್ರತಿಭಟನೆ.

 

ಶಿರೂರು ಭೂ ಕುಸಿತ ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರುಗಳು  ಹಾಗೂ ಕಂಪನಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಏಪ್ರಿಲ್  2 ನೇ ತಾರೀಕಿನಂದು ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಮೃತ ಕುಟುಂಬದ ಸದಸ್ಯರ ಜೊತೆ ಪ್ರತಿಭಟನೆ ಕೂರುವುದಾಗಿ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಮಂಗಳವಾರ ಕಾರವಾರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ಅವರು ಶಿರೂರಿನ ಭೂ ಕುಸಿತ ಪ್ರಕರಣದಲ್ಲಿ IO ಸಹ ಬದಲಾಗಬೇಕು, ಈ ಬಗ್ಗೆ ಧಾರವಾಡದ ಕೋರ್ಟ ನಲ್ಲಿ ದಾವೆ ಹೂಡುತ್ತೇವೆ ಎಂದರು.

Advertisement
Tags :
Ankolabraking news karnatakaDandeliDistrict newsKarwarShirurUttara kabndaಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್
Advertisement
Next Article
Advertisement