ಶಿರೂರು ಕಾರ್ಯಾಚರಣೆ ಕರ್ಚಾದ ಹಣ ರಾಜ್ಯದ್ದೋ ,ಕೇಂದ್ರದ್ದೋ? ಸಂಸದ ಕಾಗೇರಿ ಹೇಳಿದ್ದೇನು ನೋಡಿ.
Karwar :- ಜುಲೈ 16 ರಂದು ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಭಾಗದಲ್ಲಿ ಗುಡ್ಡ ಕುಸಿದು 11 ಜನ ಸಾವು ಕಂಡಿದ್ದಾರೆ.
ಇದರಲ್ಲಿ ಮೂರು ಜನರ ಶವ ಶೋಧ ಕಾರ್ಯ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ನಡೆಯುತ್ತಿದೆ.
ಕೇಂದ್ರ ಸರ್ಕಾರ ಸ್ವಾಮ್ಯದ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕ ಕಾಮಗಾರಿಯಿಂದ ಭೂ ಕುಸಿತ ದುರಂತ ವಾಗಿದೆ. ಹೀಗಿರುವಾಗ ಹೆದ್ದಾರಿ ಭಾಗ ಕೇಂದ್ರ ಸರ್ಕಾರದ ಹೆದ್ದಾರಿ ಪ್ರಾಧಿಕಾರಕ್ಕೆ ಬರುತ್ತದೆ. ಇನ್ನು ಜಿಲ್ಲೆಯಾಧ್ಯರಿಂದ ರಾಜ್ಯಸರ್ಕಾರಕ್ಕೂ ಬರುತ್ತದೆ. ಹೀಗಾಗಿ ಶಿರೂರು ಭೂ ಕುಸಿತದಲ್ಲಿ ಕಾರ್ಯಾಚರಣೆ ಹೊಣೆ ಯಾರು ಹೊತ್ತಿದ್ದಾರೆ ಎಂಬುದಾಗಿ ನೋಡಿದರೇ ಕಾಮಗಾರಿ ಹೊತ್ತ ಐ.ಆರ್.ಬಿ ಕಂಪನಿ ಹಾಗೂ ರಾಜ್ಯಸರ್ಕಾರ ಮಾಡುತ್ತಿದೆ.
ಇದನ್ನೂ ಓದಿ:-Shirur ರಾತ್ರಿಯೂ ನಡೆದ ಕಾರ್ಯಾಚರಣೆ ಇಡೀದಿನ ಸಿಕ್ಕ ವಸ್ತುಗಳೇನು ವಿವರ ಇಲ್ಲಿದೆ.
ಈ ಕುರಿತು ಪತ್ರಕರ್ತರು ಕಾರ್ಯಾಚರಣೆ ಕರ್ಚನ್ನು ಯಾರು ಹೊರುತ್ತಾರೆ ಎಂಬ ಪ್ರಶ್ನೆ ಕೇಳಿದಾಗ ಸಂಸದರು ಕಾರ್ಯಾಚರಣೆ ಯಾರೇ ಮಾಡಲಿ ಮೊದಲು ಕಾಣೆಯಾದ ಮೂವರ ಶವ ದೊರೆಯಬೇಕಿದೆ.ಯಾರು ಕಾರ್ಯಾಚರಣೆ ಮಾಡುತಿದ್ದಾರೆ ಎಂಬುದು ಮುಖ್ಯವಲ್ಲ ಶವ ಶೋಧ ಆಗುವುದು ಮುಖ್ಯ ಎಂದಿದ್ದಾರೆ.