For the best experience, open
https://m.kannadavani.news
on your mobile browser.
Advertisement

Shirur| ಕಾರ್ಯಾಚರಣೆ ಪ್ರಾರಂಭ -ಶಾಸಕ ಸತೀಶ್ ಸೈಲ್.

ಕಾರವಾರ :- ಶಿರೂರು ಭೂ(Shirur landslide) ಕುಸಿತದಲ್ಲಿ ಕಾಣೆಯಾದ ಮೂವರ ಶೋಧಕ್ಕಾಗಿ ನಾಳೆಯಿಂದ ಪುನಹಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಕಾರವಾರ-ಅಂಕೋಲ
10:14 AM Sep 17, 2024 IST | ಶುಭಸಾಗರ್
shirur  ಕಾರ್ಯಾಚರಣೆ ಪ್ರಾರಂಭ  ಶಾಸಕ ಸತೀಶ್ ಸೈಲ್

ಕಾರವಾರ :- ಶಿರೂರು ಭೂ(Shirur landslide) ಕುಸಿತದಲ್ಲಿ ಕಾಣೆಯಾದ ಮೂವರ ಶೋಧಕ್ಕಾಗಿ ನಾಳೆಯಿಂದ ಪುನಹಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಕಾರವಾರ-ಅಂಕೋಲ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

Advertisement

ಇಂದು ಸ್ವಚ್ಛತಾ ಹಿ ಸೇವಾ ಸ್ವಚ್ಛತೆಯೇ ಸೇವೆ' -2024 ರ ಆಂದೋಲನದ ಅಂಗವಾಗಿ ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ನಡೆದ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂಕೋಲದ ಶಿರೂರಿನಲ್ಲಿ ಕೇರಳ ಮೂಲದ ಅರ್ಜುನ್ ,ಶಿರೂರಿನ ಜಗನ್ನಾಥ್ ,ಗಂಗೆಕೊಳ್ಳದ ಲೋಕೇಶ್ ರವರ ಶವ ಶೋಧ ನಡೆಯಬೇಕಿದೆ. ಗೋವಾದಿಂದ ಇಂದು ಸಮುದ್ರಮಾರ್ಗವಾಗಿ ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್ ನನ್ನು ತರಿಸಲಾಗುತ್ತಿದೆ.

ಇದನ್ನೂ ಓದಿ:-Shirur|ಜಗನ್ನಾಥ್ ಪುತ್ರಿಗೆ ಕೈಗಾದಲ್ಲಿ ಉದ್ಯೋಗ ಕೊಡಿಸಿದ ಕೇಂದ್ರ ಸಚಿವ ಹೆ‌ಚ್.ಡಿ.ಕೆ

ಇಂದು ಕಾರವಾರಕ್ಕೆ ಡ್ರಜ್ಜಿಂಗ್ ಬೋಟ್ ಬರಲಿದ್ದು ನಾಳೆಯಿಂದ ಶೋಧ ಕಾರ್ಯ ಪುನಹಾ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಇನ್ನು ಕಾಳಿ ನದಿ ಭಾಗದಲ್ಲಿ ಕುಸಿದು ಬಿದ್ದಿರುವ ಸೇತುವೆ ಅವಶೇಷಗಳನ್ನು ತೆಗೆಯಲಾಗುತಿದ್ದು ಜಿಲ್ಲಾಡಳಿತದಿಂದ ಅವಶೇಷಗಳನ್ನು ಹಾಕಲು ಸ್ಥಳ ಕೇಳಲಾಗಿದೆ, ಇದರ ಅವಶೇಷಗಳನ್ನು ಪಕ್ಕದಲ್ಲೇ ಇರುವ ಸಮುದ್ರ ತೀರ ಭಾಗದ ಆಯಾ ಕಟ್ಟು ಭಾಗಕ್ಕೆ ಹಾಕಿದಲ್ಲಿ ಮೀನುಗಾರರಿಗೂ ಅನುಕೂಲ ಆಗಲಿದೆ ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ