Karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ.
Karwar news :- ಅರಬ್ಬಿ ಸಮುದ್ರ ದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ (udupi) ಜಿಲ್ಲೆಯ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ನ ತಳಭಾಗದ ಕಬ್ಬಿಣದ ವೆಲ್ಟಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ.
ಮುಳುಗುತಿದ್ದ ಬೋಟ್ ನಲ್ಲಿ ಇದ್ದ ಎಂಟು ಜನ ಮೀನುಗಾರರನ್ನು (fishermen) ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ (karwar) 9 ನಾಟಿಕನ್ ಮೈಲುದೂರದ ಲೈಟ್ ಹೌಸ್ ಬಳಿ ಚಲಿಸುತಿದ್ದ ವೇಳೆ ಬೋಟ್ ನ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ.
ಇದನ್ನೂ ಓದಿ:-Karwar ದಲ್ಲಿ ನೌಕಾದಳದಿಂದ ಅತ್ಯಾಧುನಿಕ COMBAT ಟ್ರೈನಿಂಗ್ ಸೆಂಟರ್
ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ನ ಇಂಜಿನ್ ಭಾಗಕ್ಕೆ ನೀರು ಹೊಕ್ಕಿದೆ. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆಮಾಡಿದ್ದಾರೆ.
ಬೋಟ್ ಮುಳುಗಡೆಯಾಗುತ್ತಿರುವ ವಿಡಿಯೋ ವನ್ನು ನಮ್ಮ ಫೇಸ್ ಬುಕ್ ಪೇಜ್ ನಲ್ಲಿ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-
https://www.facebook.com/share/v/1BT8LyZNuH/
ಆದರೇ ಮುಳುಗುವ ಹಂತದಲ್ಲಿದ್ದ ಬೋಟ್ ನನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ ಆಗದೇ ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ.
ರಕ್ಷಣೆಗೊಳಗಾದ ಎಂಟುಜನ ಮೀನುಗಾರರನ್ನು ಇಂದು ಸಂಜೆ ಕಾರವಾರದ ಬೈತಕೋಲ್ ಬಂದರಿಗೆ ಕರೆತರಲಾಗಿದ್ದು , ಬೋಟ್ ಮುಳುಗಡೆಯಿಂದ ಒಂದು ಕೋಟಿಗೂ ಹೆಚ್ಚು ನಷ್ಟವಾಗಿದ್ದು ,ಮೀನುಗಾರರು ಸುರಕ್ಷಿತವಾಗಿದ್ದಾರೆ.