Gokarna: ಸಮುದ್ರಪಾಲಾದ ವೈದ್ಯಕೀಯ ವಿದ್ಯಾರ್ಥಿನಿಯರು
Gokarna: ಸಮುದ್ರಪಾಲಾದ ವೈದ್ಯಕೀಯ ವಿದ್ಯಾರ್ಥಿನಿಯರು.
ಕಾರವಾರ :- ಪ್ರವಾಸಕ್ಕೆ (tour )ಬಂದಿದ್ದ ವಿದ್ಯಾರ್ಥಿನಿಯರು ಈಜಲು ಹೋಗಿ ಸಮುದ್ರದ ಅಲೆಗೆ ಕೊಚ್ಚಿಹೋಗಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಾ**ವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ (Gokarna)ಜಟಾಯು ತೀರ್ಥ ದಲ್ಲಿ ನಡೆದಿದೆ.
ಇದನ್ನೂ ಓದಿ:-Gokarna: ಮಾಹಾಬಲೇಶ್ವರ ದರ್ಶನ ಪಡೆದ ಗೋಲ್ಡನ್ ಬಾಯ್ಸ್! ಯಾರಿವರು ?
ತಮಿಳುನಾಡು(Thamilnadu) ಮೂಲದ ತಿರುಚಿಯ ಮೆಡಿಕಲ್ ಕಾಲೇಜಿನ( Medical College) ವೈದ್ಯಕೀಯ ವಿದ್ಯಾರ್ಥಿನಿಯರಾದ ಕನಿಮೋಳಿ ,ಹಿಂದುಜ ಸಾ**ವು ಕಂಡ ವಿದ್ಯಾರ್ಥಿನಿಯರಾಗಿದ್ದಾರೆ.
ತಮಿಳುನಾಡಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ 23 ವೈದ್ಯಕೀಯ ವಿದ್ಯಾರ್ಥಿಗಳು ಆಗಮಿಸಿದ್ದರು.ಇಬ್ಬರು ವಿದ್ಯಾರ್ಥಿನಿಯರು ಸಂಜೆ ಜಟಾಯು ತೀರ್ಥದ ಬಳಿ ಸಮುದ್ರದಕ್ಕೆ ಇಳಿದಿದ್ದರು.
ಈ ವೇಳೆ ಸಮುದ್ರದ ಅಲೆಗೆ ಇಬ್ಬರು ವಿದ್ಯಾರ್ಥಿಗಳು ಕೊಚ್ಚಿಹೋಗಿದ್ದರು , ಇವರನ್ನು ರಕ್ಷಣೆ ಮಾಡಲು ಹೋದ ಸ್ಥಳೀಯನೂ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದು ,ಅದರಷ್ಟವಶಾತ್ ಸ್ಥಳೀಯರು ರಕ್ಷಣೆಗೆ ಹೋದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಎರೆಡು ಶವಗಳನ್ನು ಹೊರತೆಗೆಯಲಾಗಿದ್ದು,ಗೋಕರ್ಣ PSI ಖಾದರ್ ರವರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.