ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada: ಉತ್ತರ ಕನ್ನಡ ಭಾರೀ ಮಳೆ ಎಷ್ಚರಿಕೆ ಎರಡು ದಿನ ರೆಡ್ ಅಲರ್ಟ

ಕಾರವಾರ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಜುಲೈ 22 ರ ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂವನೆ ನೀಡಿದೆ.
10:13 PM Jul 19, 2025 IST | ಶುಭಸಾಗರ್
ಕಾರವಾರ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಜುಲೈ 22 ರ ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂವನೆ ನೀಡಿದೆ.

ಉತ್ತರ ಕನ್ನಡ ಭಾರೀ ಮಳೆ ಎಚ್ಚರಿಕೆ ಎರಡು ದಿನ ರೆಡ್ ಅಲರ್ಟ

Advertisement

ಕಾರವಾರ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಜುಲೈ 22 ರ ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂವನೆ ನೀಡಿದೆ.

ಜುಲೈ 22 ರ ವರೆಗೆ ಹೆಚ್ಚಿನ ಮಳೆ ಬೀಳಲಿದ್ದು ಇಂದು ಮತ್ತು ನಾಳೆ ರೆಡ್ ಅಲರ್ಟ ನೀಡಲಾಗಿದೆ. 22 ರ ವರೆಗೆ ಆರೆಂಜ್ ಅಲರ್ಟ ಹಾಗೂ 23 ರಿಂದ 25 ರ ವರೆಗೆ ಯಲ್ಲೋ ಅಲರ್ಟ ನೀಡಲಾಗಿದೆ.

Advertisement

ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಏನಿದೆ?

 ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಜು.20 ರ ಬೆಳಗ್ಗೆ 5.30 ವರೆಗೆ 24 ಗಂಟೆಗಳ ಹಠಾತ್ ಪ್ರವಾಹ ಅಪಾಯವಿದ್ದು , ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಸಂಪೂರ್ಣವಾಗಿ ನ್ಯಾಚುರೇಟೆಡ್ ಮಣ್ಣು ಮತ್ತು ಕಳವಳಕಾರಿ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಮೇಲ್ಮೆ ಹರಿವು /ಮುಳುಗಡೆ ಸಂಭವಿಸಬಹುದೆಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ:-Uttara kannada: ಉತ್ತರ ಕನ್ನಡ ಜಿಲ್ಲೆಯ 53 ದ್ವೀಪಗಳಲ್ಲಿ ಭದ್ರತೆ ಹೆಚ್ಚಳಕ್ಕೆ ಸಿಸಿ ಕ್ಯಾಮರ ಅಳವಡಿಕೆ- ಎಸ್.ಪಿ ಮಿಥುನ್ ಹೆಚ್.ಎನ್

ಈ ಹಿನ್ನಲೆಯಲ್ಲಿ  ಸಾರ್ವಜನಿಕರು ಸಮುದ್ರ ಪ್ರದೇಶಗಳಿಗೆ ತೆರಳಬಾರದು, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ, ನೀರಿನ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸಬೇಕು .

ನದಿ ತೀರದಲ್ಲಿ ವಾಸಿಸುವವರು ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮನವಿ ಮಾಡಿದ್ದಾರೆ.

ಕುಮಟಾ ಭಾಗದಲ್ಲಿ ಅಘನಾಶಿನಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬಗ್ಗೆ ಕೇಂದ್ರಿಯ ಜಲ ಆಯೋಗ ಮುನ್ಸೂಚನೆಯನ್ನು ನೀಡಿದೆ.

ಗುಡ್ಡದ ಇಳಿಜಾರಿನ ಪ್ರದೇಶದಲ್ಲಿ ವಾಸಿಸುವರು ಕೂಡಾ ಮಳೆಯ ತೀವ್ರತೆಯನುಸಾರ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು, ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸಬೇಕು ಮತ್ತು ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳದಂತೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಮಳೆ ವಿವರ:-

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 29.7, ಮಿಮೀ, ಭಟ್ಕಳದಲ್ಲಿ 119 , ಹಳಿಯಾಳ 4.5, ಹೊನ್ನಾವರ 84.1 ಕಾರವಾರ 33.1, ಕುಮಟಾ 97.5 ಮುಂಡಗೋಡ 8.1 ಸಿದ್ದಾಪುರ 59.4, ಶಿರಸಿ 34.6, ಸೂಪಾ 9.8 ಯಲ್ಲಾಪುರ 11.1, ದಾಂಡೇಲಿಯಲ್ಲಿ 8.1 ಮಿಲಿ ಮೀಟರ್ ಮಳೆ ಸುರಿದಿದೆ. 6 ಮನೆಗಳಿಗೆ ಭಾಗಶಃ ಹಾನಿ ಮತ್ತು 3 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.

Advertisement
Tags :
AnkolaBhatkalCostal karnatakaHavy rainHonnavarKarwarKumtaRain alertಕರಾವಳಿಮಳೆ ಎಚ್ಚರಿಕೆ
Advertisement
Next Article
Advertisement