Bhatkal| ದಾನದ ಹೆಸರಲ್ಲಿ ಸುಳ್ಳು ಪ್ರತಿಷ್ಟೆತೋರಿದ ವ್ಯಕ್ತಿಗೆ ಹಣ ಮರಳಿಸಿ ಸ್ವಾಭಿಮಾನ ತೋರಿದ ಮಹಿಳೆಯರು
Bhatkal News:- ಸಾಮಾಜಿಕ ಜಾಲತಾಣದ (social media )ಮೂಲಕ ಫೇಮಸ್ ಆಗಲು ಜನ ಏನುಬೇಕಾದ್ರು ಮಾಡುತ್ತಾರೆ.
ಹೌದು ಉತ್ತರ ಕನ್ನಡ (uttra kannda) ಜಿಲ್ಲೆಯ ಭಟ್ಕಳದ (Bhatkal) ಇರ್ಷಾದ್ ಮೊಹ್ಮದ್ ಖಾದಿ ಎಂಬಾತ ತಾನು ಫೇಮಸ್ ಆಗಲು ಆಗಷ್ಟ್ 15 ರಂದು ಭಟ್ಕಳ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಕ್ಕೆ ಕುಳಿತಿದ್ದ ಮಹಿಳೆಯರಿಗೆ ತನ್ನ ಮಗಳ ಕೈನಿಂದ 50 ರೂ ಕೊಡಿಸಿದ್ದಾನೆ.
50 ರೂ ಕೊಡುವುದನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ತನ್ನ Instagram ನಲ್ಲಿ ಆಗಸ್ಟ್ 15 ರಂದು ಸ್ವತಂತ್ರ ದಿನಕ್ಕಾಗಿ 500 ರೂ ನನ್ನ ಬಡ ವ್ಯಾಪಾರಿ ಮಹಿಳೆಯರಿಗೆ ದಾನ ಮಾಡಿದ್ದೇನೆ ಎಂದು ಫೋಸ್ಟ್ ಹಾಕಿಕೊಂಡಿದ್ದಾನೆ.

ಇನ್ನು ಈ ಪೋಸ್ಟ್ ವೈರಲ್ ಆಗಿದ್ದು ಸ್ವತಂತ್ರ ದಿನಕ್ಕೆ ಐಸ್ ಕ್ರೀಮ್ ತಿನ್ನಲು 50 ರೂ ನೀಡಿದ್ದಾರೆ ಎಂದು ಅಂದುಕೊಂಡಿದ್ದ ಮಹಿಳೆಯರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ:-Bhatkal |ಅಲೆ ಅಬ್ಬರ ಸಮುದ್ರ ಭಾಗದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್
ಈತ ಏನೂ ಹೇಳದೇ ಮಗಳ ಕೈನಿಂದ 50 ರೂ ಕೊಡಿಸಿ 500 ಕೊಟ್ಟಿದ್ದೇನೆ ಎಂದು ತಮ್ಮನ್ನು ಬಿಕ್ಷುಕರ ರೀತಿ ತೋರಿಸಿದ್ದಕ್ಕೆ ಇಲ್ಲಿನ ತರಕಾರಿ ವ್ಯಾಪಾರ ( vegetable Merchant) ಮಾಡುವ ಮಹಿಳೆಯರು ಕೊಟ್ಟ 50 ರೂ ನನ್ನ ಆತನಿಗೆ ಹಿಂತಿರುಗಿಸಿ ತಮ್ಮ ಸ್ವಾಭಿಮಾನ ಮಾರಾಟಕ್ಕಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು ಹೆಸರಿಗಾಗಿ ಸುಳ್ಳಿನ ವಿಡಿಯೋ ಹಾಕಿದ್ದಕ್ಕೆ ಇರ್ಷಾದ್ ಮೊಹ್ಮದ್ ಖಾದಿಗ್ರೆ ಚಳಿ ಬಿಡಿಸಿದ್ದಾರೆ.