ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Haliyala Mid-Day Meal Scam|ಹಳಿಯಾಳ ಶಾಲೆಗೆ ಕಳಪೆ ಆಹಾರ ಪೂರೈಕೆ |ಸಿಡಿದೆದ್ದ ಪೋಷಕರು

Haliyala Mid-Day Meal Controversy: ಹಳಿಯಾಳದ ಯಡೋಗಾ ಸರ್ಕಾರಿ ಶಾಲೆಗೆ ಹುಳುಗಳಿದ್ದ ಕಳಪೆ ತೊಗರಿಬೇಳೆ ಪೂರೈಕೆ, ಪೋಷಕರ ಆಕ್ರೋಶ, ಶಾಲೆಗೆ ಮುತ್ತಿಗೆ. ಉತ್ತಮ ಆಹಾರ ಸಿಗುವವರೆಗೂ ಬಿಸಿಯೂಟ ನಿಲ್ಲಿಸುವ ಬೇಡಿಕೆ.
11:54 AM Dec 03, 2025 IST | ಶುಭಸಾಗರ್
Haliyala Mid-Day Meal Controversy: ಹಳಿಯಾಳದ ಯಡೋಗಾ ಸರ್ಕಾರಿ ಶಾಲೆಗೆ ಹುಳುಗಳಿದ್ದ ಕಳಪೆ ತೊಗರಿಬೇಳೆ ಪೂರೈಕೆ, ಪೋಷಕರ ಆಕ್ರೋಶ, ಶಾಲೆಗೆ ಮುತ್ತಿಗೆ. ಉತ್ತಮ ಆಹಾರ ಸಿಗುವವರೆಗೂ ಬಿಸಿಯೂಟ ನಿಲ್ಲಿಸುವ ಬೇಡಿಕೆ.

Haliyala Mid-Day Meal Scam|ಹಳಿಯಾಳ ಶಾಲೆಗೆ ಕಳಪೆ ಆಹಾರ ಪೂರೈಕೆ |ಸಿಡಿದೆದ್ದ ಪೋಷಕರು.

 

Advertisement

ಕಾರವಾರ   :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶಾಲೆಗಳಿಗೆ (school) ಬಿಸಿಯೂಟಕ್ಕೆ ಕಳಪೆ ಮಟ್ಟದ ಆಹಾರ ಪದಾರ್ಥ  ಪೂರೈಕೆಯಾಗುತಿದ್ದು , ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಉತ್ತಮ ಆಹಾರ ಪದಾರ್ಥ ಸರಬರಾಜಾಗುವ ವರೆಗೂ ಬಿಸಿಯೂಟ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ಪೋಷಕರು ಪ್ರತಿಭಟನೆ ಮಾಡುತ್ತಿರುವುದು.

ಹಳಿಯಾಳದ(haliyala) ಯಡೋಗಾ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಳುಗಳಿಂದ ಕೂಡಿದ ಕಪ್ಪಾಗಿ ಮುದ್ದೆಯಾದ ತೊಗರಿ ಬೇಳೆಯನ್ನು ಶಾಲೆಗೆ ಪೂರೈಕೆ ಮಾಡಲಾಗಿದೆ.

Mundgod| ಬಿಸಿಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ತ

Advertisement

ಈ ಬೇಳೆಯಲ್ಲೇ ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ತಯಾರಿಕೆ ಮಾಡಲಾಗುತ್ತಿದೆ.ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಯಾದರೂ ಶಾಲೆಯ ಆಡಳಿತ ನಿರ್ಲಕ್ಷ ಮಾಡಿ ಮಕ್ಕಳಿಗೆ ಹಾಳಾದ ಬೇಳೆಯಲ್ಲಿಯೇ ಬಿಸಿಯೂಟ ತ್ಯಯಾರಿಸಿ ನೀಡುತ್ತಿದೆ.

ಇದರಿಂದ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಉತ್ತಮ ಆಹಾರ ಪದಾರ್ಥವನ್ನು ನೀಡುವ ವರೆಗೆ ಬಿಸಿಯೂಟ ನಿಲ್ಲಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಆಹಾರ ಪದಾರ್ಥ ಕಳಪೆ ಆಗುರುವುದು

ಇದಲ್ಲದೇ ಆಹಾರ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪಟ್ಟು ಹಿಡಿದಿದ್ದು ಶಿಕ್ಷಕರನ್ನು ತರಾಟೆ ತೆಗೆದುಕೊಂಡರು.ಕಳೆದ ಮೂರು ದಿನದ ಹಿಂದೆ ಮುಂಡಗೋಡಿನ ಶಾಸಕರ ಮಾದರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 44 ವಿದ್ಯಾರ್ಥಿಗಳು ಅಸ್ವಸ್ತರಾಗಿದ್ದರು.ಹೀಗಿದ್ದರೂ ಹಲವು ಶಾಲೆಗಳಿಗೆ ಕಳಪೆ ಆಹಾರ ಪದಾರ್ಥ ಸರಬರಾಜಾಗುತ್ತಿದೆ.

ಪೋಷಕರ ಆಗ್ರಹ.

ಹಳಿಯಾಳದ ಶಾಲೆ.

ಶಾಲೆಯಲ್ಲಿ SDMC ಏನೇ ಹೇಳಿದರೂ ಶಿಕ್ಷಕರು ನಿರ್ಲಕ್ಷ ಮಾಡುತಿದ್ದಾರೆ. ಪದೇ ಪದೇ ಬಿಸಿಯೂಟ ಆಹಾರ ಪದಾರ್ಥದಲ್ಲಿ ಹುಳುಗಳು,ಇಲಿ ಹಿಕ್ಕೆಗಳು ಬರುತ್ತಿವೆ.

ಹಿಂದಿನಿಂದಲೂ ಉತ್ತಮ ಬಿಸಿಯೂಟ ನೀಡುವಂತೆ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದೇವೆ .ಆದರೂ ಗುಣಮಟ್ಟವಿಲ್ಲದ ಹಾಗೂ ಹಾಳಾದ ಪದಾರ್ಥ ಬಳಸುತಿದ್ದಾರೆ.

ಹೀಗಾಗಿ ಶಿಕ್ಷಕರ ಹಾಗೂ ಆಹಾರ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ತರಿಗೆ ಕ್ರಮ ಆಗಬೇಕು.

Haliyal:ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್! ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು

ಉತ್ತಮ ಪದಾರ್ಥ ಪೂರೈಕೆ ಆಗುವ ವರೆಗೆ ಬಿಸಿಯೂಟವನ್ನು ಮಕ್ಕಳಿಗೆ ನೀಡುವುದನ್ನು ನಿಲ್ಲಿಸಬೇಕು ಎಂಬುದು ಪೋಷಕರ ಆಗ್ರಹ.

ಇದನ್ನೂ ಓದಿ:-

https://m.kannadavani.news/article/uttara-kannada-midday-meal-food-poisoning-quality-issue-school/29805

 

Advertisement
Tags :
Halial Mid Day Meal IssueHalial School Rotten DalHaliyala newsKarnataka Mid Day Meal ScamMid Day Meal ProtestUK District NewsYadoga School Newsಬಿಸಿಯೂಟ ಕಳಪೆ ಆಹಾರಹಳಿಯಾಳ ಸುದ್ದಿ
Advertisement
Next Article
Advertisement