Uttra kannda | ಫಾಟಾ ಫಟ್ ಸುದ್ದಿ 07 October 2024
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸುದ್ದಿಗಳು ಒಂದೇ ಲಿಂಕ್ ನಲ್ಲಿ . ಎಲ್ಲಿ ಏನಾಯ್ತು? ಜಿಲ್ಲೆಯ ವಿದ್ಯಮಾನಗಳ ಸುದ್ದಿಗಳು ಈ ಕೆಳಗಿನಂತಿದೆ.
ಜಿಲ್ಲೆಯ ಸುದ್ದಿಗಳನ್ನು ತಿಳಿಯಲು ನಮ್ಮ WhatsApp ಗ್ರೂಪ್ ಗೆ ಸೇರಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.
ಕಾರವಾರಕ್ಕೆ ಕಂದಾಯ ಸಚಿವರ ಭೇಟಿ
Karwar:- ಮಂಗಳವಾರ ಕಂದಾಯ ಸಚಿವ ಕೃಷ್ಣ ಭೈರೇ ಗೌಡರು ಕಾರವಾರಕ್ಕೆ ಆಗಮಿಸಲಿದ್ದು , ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಹ್ನ 2ಗಂಟೆಯಿಂದ 5-30 ರ ವರೆಗೆ ಕಾರವಾರದಲ್ಲಿ ಸಚಿವರು ಇರಲಿದ್ದಾರೆ.
ಪತ್ರಿಕಾ ಆಹ್ವಾನ.
Karwar| ಸಂದರ ಕಚೇರಿ ಉದ್ಘಾಟನೆ- ಅಹವಾಲು ಸ್ವೀಕಾರ.
ನಾಳೆ ಬೆಳಗ್ಗೆ 9.30 ಕ್ಕೆ ಜಿಲ್ಲಾಧಿಕಾರಿ ಕಚೇರಿಯ 2 ನೇ ಮಹಡಿಯಲ್ಲಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನವೀಕೃತ ಕಚೇರಿಯ ಉದ್ಘಾಟನೆಯನ್ನು ಸಂಸದರು ನೆರವೇರಿಸಲಿದ್ದು, ಇದರ ಜೊತೆ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಲಿದ್ದಾರೆ.
ಸಿದ್ದಾಪುರ: ಕತ್ತಿಯಿಂದ ಹಲ್ಲೆಗೆ ಯತ್ನ, ದೂರು ದಾಖಲು
ಅಪ್ಪ-ಮಗ ತೋಟವೊಂದರ ಮೂಲಕ ಮನೆಗೆ ಬರುತ್ತಿರುವಾಗ ವ್ಯಕ್ತಿಯೋರ್ವ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾದ ಘಟನೆ ಸಿದ್ದಾಪುರ ತಾಲೂಕಿನ ಬಿದ್ರಕಾನ ಚಟ್ನಳ್ಳಿಯಲ್ಲಿ ನಡೆದಿದೆ.
ಸ್ಥಳೀಯ ಉಮಾಪತಿ ಮಾಲ್ಲೇಶ್ವರ ಭಟ್ಟ ಆರೋಪಿತರು. ಇವರ ವಿರುದ್ದ ಅದೇ ಊರಿನ ಚಂದ್ರಶೇಖರ ರಾಮ ಭಟ್ಟ (72) ದೂರು ದಾಖಲಿಸಿದ್ದಾರೆ. ತೋಟದಿಂದ ಬರುವಾರ ಈ ಜಾಗದಲ್ಲಿ ಓಡಾಟ ಮಾಡಬಾರದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಗಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಶಿರಸಿ: ಮಾರುತಿ ಕಾರು ಪಲ್ಟಿ, ಮೂವರಿಗೆ ಗಾಯ
Sirsi :-ಅತಿವೇಗದಿಂದ ಚಲಿಸುತ್ತಿದ್ದ ಮಾರುತಿ 800 ಕಾರು ಪಾದಚಾರಿಯೊಬ್ಬರಿಗೆ ಗುದ್ದಿ, ನಂತರ ಪಲ್ಟಿಯಾದ ಘಟನೆ ಶಿರಸಿ ತಾಲೂಕಿನ ಹುಲೇಕಲ್ ರಸ್ತೆಯ ಹುಲಿಯಪ್ಪನ ಕಟ್ಟೆ ಬಳಿ ಸೋಮವಾರ ನಡೆದಿದೆ.
ಇದನ್ನೂ ಓದಿ:Siddapura| ಫೇಸ್ ಬುಕ್ ನಲ್ಲಿ ಲವ್ ಮಾಡಿ ಬಂದವಳು ಮನೆಗೆ ಕನ್ನ! ಹಿಗ್ಗಾಮುಗ್ಗ ತಳಿಸಿದ ಜನ.
ನರಸಿಂಹ ಎನ್ನುವ ವ್ಯಕ್ತಿ ಅಪಘಾತ ಪಡಿಸಿದ ಕಾರು ಚಾಲಕ. ಈ ಅಪಘಾತದಲ್ಲಿ ಪಾದಚಾರಿ ಮಂಜುನಾಥ ಜೋಗಿ ಮುಕ್ರಿ, ಕಾರಿನ ಒಳಗಿದ್ದ ಪ್ರಶಾಂತ ಸುಬ್ರಾಯ ನಾಯ್ಕ ಅವರ ಮೂಗು ಹಾಗೂ ಚಾಲಕನ ಪಕ್ಕ ಕೂತಿದ್ದ ಸುಬ್ರಹ್ಮಣ್ಯ ಮಂಜುನಾಥ ನಾಯ್ಕ ಅವರಿಗೂ ಗಾಯವಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kumta| ಮಾಸೂರಿನ ಕೋಮಾರ ಜೈನ ಜಟಕ ದೇವಾಲಯದಲ್ಲಿ ಸಪ್ತ ಭಜನೆ ಸಂಪನ್ನ
ಕುಮಟಾ ತಾಲೂಕಿನ ಮಾಸೂರಿನ ಕೋಮಾರ ಜೈನ ಜಟಕ ದೇವಾಲಯದಲ್ಲಿ ಶ್ರೀ ಬೊಬ್ರುಲಿಂಗೇಶ್ವರ ಭಜನಾ ಮಂಡಳಿ ದಿನಾಂಕ 05-10-2024ರಿಂದ 07-10-2024ರವರೆಗೆ 3ದಿನಗಳ ಕಾಲ ಅಹೋರಾತ್ರಿ ಸಪ್ತಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಮೊದಲ ದಿನ ಮಾಸೂರಿನ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಗೂ ಊರಿನ ನಾಗರಿಕರು ಕೋಮಾರ ಗೋಳಿ ಜೈನ ಜಟಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಂದಿಪೆ ನಿನಗೆ ಗಣನಾಥ ಎಂಬ ಮಹಾ ಗಣಪತಿಯ ಪ್ರಥಮ ಭಜನೆ ಮೂಲಕ ಭಜನೆ ಪ್ರಾರಂಭಿಸುತ್ತಾರೆ.
ಇದನ್ನೂ ಓದಿ:-Kumta ನೌಕರಿ ಕೊಡಿಸುವುದಾಗಿ ಲಕ್ಷಾಂತರ ವಂಚನೆ: ಆರೋಪಿ ಜೈಲಿಗೆ
ಸತತವಾಗಿ 3ದಿನಗಳ ಪರ್ಯಂತ ಅಹೋರಾತ್ರಿ ಭಜನೆ ಮಾಡಿ ಮೂರನೇ ದಿನ ಭಜನೆ ಮಾಡುತ್ತಾ ನಂದಾ ದೀಪ ತೆಗೆದುಕೊಂಡು ದೋಣಿಯ ಮೂಲಕ ಅಘನಾಶಿನಿ ನದಿಯನ್ನು ದಾಟಿ, ಮಾಸೂರು ಕೂರ್ವೆಯ ಬೊಬ್ರುಲಿಂಗೇಶ್ವರ ದೇವಾಲಯಕ್ಕೆ ಹೋರಟು ವಿಶಿಷ್ಟ ರೀತಿಯಲ್ಲಿ ಅಹೋ ರಾತ್ರಿ ಭಜನಾ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
Kumta| ಮರಳುಗಾರಿಕೆಗೆ ಅನುಮತಿ ನೀಡುವಂತೆ
ಸಾಂಪ್ರದಾಯಿಕ ನಾಡದೋಣಿಕಾರರಿಂದ
ಕುಮಟಾ ಸಹಾಯಕ ಕಮಿಷನರಗೆ ಮನವಿ.
ಕುಮಟಾ : ನಾವು ಕಳೆದ ಅನೇಕ ವರ್ಷಗಳಿಂದ ನಾಡದೋಣಿಯಲ್ಲಿ ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುತ್ತಿದ್ದು, ಇದೀಗ ಮರಳುಗಾರಿಕೆ ಬಂದ್ ಮಾಡಿದ ಪರಿಣಾಮ ನಮ್ಮ ಜೀವನ ಅತಂತ್ರವಾಗಿದೆ. ಕೂಡಲೇ ಈ ಬಗ್ಗೆ ಯೋಗ್ಯ ಕ್ರಮ ಕೈಗೊಂಡು ನಮಗೆ ಮರಳುಗಾರಿಕೆಗೆ ಅನುಮತಿ ನೀಡಿ ಎಂದು ಸಾಂಪ್ರದಾಯಿಕ ನಾಡದೋಣಿ ಮರಳುಗಾರಿಕೆ ಮಾಡುವವರು ಕುಮಟಾ ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಹತ್ತು ವರ್ಷಗಳಿಂದ ಲೀಸ್ ಆಧಾರದಲ್ಲಿ ಜಿ.ಪಿ.ಎಸ್. ಅಳವಡಿಸಿ ದೊಡ್ಡ ದೋಣಿಯವರಿಗೆ ಮರಳುಗಾರಿಕೆಗೆ ಅವಕಾಶ ನೀಡಿದ್ದರಿಂದ ನಾಡದೋಣಿ (ಕೈದೋಣಿ) ಅವರು ಕೆಲಸವಿಲ್ಲದೆ ಅಕ್ಷರಶಃ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮರಳುಗಾರಿಕೆ ಬಂದ್ ಆದ ಪರಿಣಾಮ ನಾಡದೋಣಿಯವರು ಮಕ್ಕಳ ಮದುವೆಗೆ ಮಾಡಿದ ಸಾಲವನ್ನು ಹಿಂದಿರುಗಿಸಲಾಗದೆ, ಮಕ್ಕಳ ಶಿಕ್ಷಣಕ್ಕೂ ನೆರವಾಗಲಾಗದೆ ಪರಿತಪಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೈದೋಣಿಯಲ್ಲಿ ಮರಳುಗಾರಿಕೆ ನಡೆಸಲು ಕೂಡಲೇ ಸಹಾಯಕ ಕಮಿಷನರ್ ಅವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಡದೋಣಿಗಾರರು ಒತ್ತಾಯಿಸಿದ್ದಾರೆ.
ಕಾರವಾರ: ಕಾಂಗ್ರೆಸ್ ಬೆಂಬಲ, ಅಧ್ಯಕ್ಷೆಯಾದ ಬಿಜೆಪಿ ಸದಸ್ಯೆ!
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣಿಸಿ ಬೇರೊಬ್ಬರನ್ನ ಆಯ್ಕೆ ಮಾಡಲು ಮುಂದಾದ ಬಿಜೆಪಿಗೆ ಕಾಂಗ್ರೆಸ್ಸಿಗರೇ ಪರಿಶಿಷ್ಟ ಜಾತಿಯ ಬಿಜೆಪಿ ಸದಸ್ಯೆಯೊಬ್ಬರನ್ನ ಆಯ್ಕೆ ಮಾಡಿ ಟಾಂಗ್ ನೀಡಿದ ಘಟನೆ ಕಾರವಾರ ನಗರಸಭೆಯಲ್ಲಿ ಇಂದು ನಡೆದಿದೆ.
ನಗರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ವೇಳೆಲ್ಲಿ ವಿಷಯ ಪ್ರಸ್ತಾಪವಾದಾಗ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ಬಿಜೆಪಿಯ ಸದಸ್ಯೆ ಮಾಲಾ ಹುಲಸ್ವಾರ ನಡುವೆ ಸಂಘರ್ಷವಾಗಿ ಆಯ್ಕೆ ನಡೆಯಿತು.