Karwar|ಕಾರವಾರ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66 ರ ಸುರಂಗ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ
Karwar|ಕಾರವಾರ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66 ರ ಸುರಂಗ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ
ಕಾರವಾರ :- ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ(karwar)-ಅಂಕೋಲ ಮಾರ್ಗದ ಸುರಂಗ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66 ಕಾರವಾರದಿಂದ ಅಂಕೋಲಕ್ಕೆ ತೆರಳುವ ಎಡಭಾಗದ ಸುರಂಗದ ಕೊನೆಯಲ್ಲಿ ಒಂದು ಭಾಗ ಕುಸಿದು ಬಂಡೆಕಲ್ಲು ರಸ್ತೆಗೆ ಬಿದ್ದಿತ್ತು ಇದಲ್ಲದೇ ಈ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕ ತಂದೊಡ್ಡಿತ್ತು. ಹೀಗಾಗಿ
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸುರಂಗ ಮಾರ್ಗದಲ್ಲಿ ಏಕ ಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಕಾರವಾರ ದಿಂದ ಅಂಕೋಲಕ್ಕೆ ತೆರಳುವ ಎಡ ಭಾಗದದ ಸುರಂಗ ಮಾರ್ಗದಲ್ಲಿ ಸಂಚಾರ ಬಂದ್ ಮಾಡಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
Karwar| ಕಾರವಾರದಲ್ಲಿ ಮರವೇರಿ ಕುಳಿತ ಚಿರತೆ!
ಇದೀಗ ಈ ಭಾಗದಲ್ಲಿ ಕಲ್ಲುಗಳನ್ನು ತೆರವು ಮಾಡಲಾಗಿದ್ದು ,ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಐಆರ್.ಬಿ ಕಂಪನಿ ದ್ರುಡತೆ ಪ್ರಮಾಣ ಪತ್ರ ನೀಡಿದ ಬೆನ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನ ಕಾರವಾರ -ಅಂಕೋಲ ಭಾಗದ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.