Karwar :ಬಂದರಿನಲ್ಲಿ ಬೋಟಿನಲ್ಲಿ ಸಿಲೆಂಡರ್ ಗೆ ಬೆಂಕಿ ತಪ್ಪಿದ ಅನಾಹುತ
ಕಾರವಾರ :- ಬೋಟಿನಲ್ಲಿ ಅಡುಗೆ ಮಾಡುವಾಗ ಸಿಲೆಂಡರ್ ನಲ್ಲಿ ಬೆಂಕಿಕಾಣಿಸಿಕೊಂಡು ಸ್ಪಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಸಂಜೆ ನಡೆದಿದೆ.
09:04 PM Aug 01, 2025 IST | ಶುಭಸಾಗರ್
Karwar :ಬಂದರಿನಲ್ಲಿ ಬೋಟಿನಲ್ಲಿ ಸಿಲೆಂಡರ್ ಗೆ ಬೆಂಕಿ ತಪ್ಪಿದ ಅನಾಹುತ
Advertisement

ಕಾರವಾರ :- ಬೋಟಿನಲ್ಲಿ ಅಡುಗೆ ಮಾಡುವಾಗ ಸಿಲೆಂಡರ್ ನಲ್ಲಿ ಬೆಂಕಿಕಾಣಿಸಿಕೊಂಡು ಸ್ಪಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಸಂಜೆ ನಡೆದಿದೆ. ಬೈತಖೋಲ್ ಬಂದರಿನಲ್ಲಿ ಮೀನು ಹಿಡಿದು ನಂತರ ಕಾರ್ಮಿಕರು ಶ್ರೀಲಕ್ಷ್ಮಿ ಹೆಸರಿನ ಬೋಟಿನಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಗೆ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸಿಲೆಂಡರ್ ನನ್ನು ಸಮುದ್ರಕ್ಕೆ ಎಸೆದಿದ್ದಾರೆ.ಆದರೂ ಸಮುದ್ರದಲ್ಲಿ ಸಿಲೆಂಡರ್ ಬೆಂಕಿಹೊತ್ತಿಕೊಂಡು ಸ್ಪೋಟವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು ದೊಡ್ಡ ಅನಾಹುತ ತಪ್ಪಿದೆ.
Advertisement