Karwar:ಮೀನುಮಾರುಕಟ್ಟೆಗಾಗಿ ಹರಕೆ -ಗಣೇಶನ ಪ್ರತಿಷ್ಟಾಪನೆ ಮಾಡಿ ಚೌತಿ ಆಚರಿಸಿದ ಮೀನುಗಾರ ಮಹಿಳೆಯರು.
Karwar:ಮೀನುಮಾರುಕಟ್ಟೆಗಾಗಿ ಹರಕೆ -ಗಣೇಶನ ಪ್ರತಿಷ್ಟಾಪನೆ ಮಾಡಿ ಚೌತಿ ಆಚರಿಸಿದ ಮೀನುಗಾರ ಮಹಿಳೆಯರು.
ಕಾರವಾರ :-ರಾಜ್ಯದಲ್ಲಿ ಭಾದ್ರಪದ ಮಾಸದಲ್ಲಿ ಗಣೇಶ ಚೌತಿ (Ganesha festival )ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಗೌರಿ ಗಣೇಶನನ್ನು ತಂದರೇ ಸಾರ್ವಜನಿಕವಾಗಿಯೂ ಗೌರಿ ಗಣೇಶನನ್ನು ಇರಿಸುವುದು ಸಂಪ್ರದಾಯ.
ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ಮಾತ್ರ ಈ ಸಂಭ್ರಮ ಸಂಪ್ರದಾಯ ವಿಭಿನ್ನ. ಭಾಧ್ರಪದ ಮಾಸದಲ್ಲಿ ಗೌರಿ ,ಗಣೇಶ ಹಬ್ಬವನ್ನು ಆಚರಿಸುವ ಜೊತೆ ಮಾಘ ಮಾಸದಲ್ಲೂ ಕಾರವಾರದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ.
ಇಂದು ಮಾಘ ಚತುರ್ಥಿ ಅಂಗವಾಗಿ ಹಲವು ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ರಾತ್ರಿ ವಿಸರ್ಜನೆ ಕಾರ್ಯ ನೆರವೇರಿತು.
ಇದನ್ನೂ ಓದಿ:-Karwar ಗೋ ಮಾಂಸ ತಿನ್ನುತ್ತೇವೆ ಕಳ್ಳತನ ಮಾಡಿದ ಮಾಂಸ ತಿನ್ನುವುದಿಲ್ಲ- ಭಟ್ಕಳದ ತಂಜಿಮ್ ಅಧ್ಯಕ್ಷ.
ಹೌದು ಭಾದ್ರಪದ ಮಾಸದಲ್ಲಿ ಆಚರಿಸುವ ಗಣೇಶ ಚತುರ್ಥಿಯಂತೆ ಮಾಘ ಮಾಸದಲ್ಲು ಸಹ ಕಾರವಾರದಲ್ಲಿ ಒಂದು ದಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಈ ವಿಶೇಷ ಸಂಪ್ರದಾಯ ಕಾರವೃದಲ್ಲಿದ್ದು ,ಗೋವಾ ,ಮಹಾರಾಷ್ಟ್ರದಲ್ಲಿ ಆಚರಿಸುವ ಮಾಘ ಚತುರ್ಥಿಯ ಆಚರಣೆ ಇಲ್ಲಿಯೂ ನಡೆದುಕೊಂಡು ಬಂದಿದೆ.
ಹಲವರು ದೇವರಿಗೆ ಹರಕೆ ರೂಪದಲ್ಲಿ ಪೂಜೆ ಸಲ್ಲಿಸಿದರೇ ಹಲವು ಮನೆಗಳಲ್ಲಿ ಗಣೇಶ ಮೂರ್ತಿ ತಂದು ಪೂಜೆ ಸಲ್ಲಿಸಲಾಗುತ್ತದೆ. ಹೀಗೆ ಇಂದು ಕಾರವಾರದಲ್ಲಿ ನೂರಾರು ಮನೆಗಳಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು.
ಇದನ್ನೂ ಓದಿ:-Karwar ದಲ್ಲಿ ನೌಕಾದಳದಿಂದ ಅತ್ಯಾಧುನಿಕ COMBAT ಟ್ರೈನಿಂಗ್ ಸೆಂಟರ್
ಮೀನುಮಾರುಕಟ್ಟೆಗಾಗಿ ಹರಕೆ -ಗಣೇಶನ ಪ್ರತಿಷ್ಟಾಪನೆ ಮಾಡಿ ಚೌತಿ ಆಚರಿಸಿದ ಮೀನುಗಾರ ಮಹಿಳೆಯರು.
ಹಲವು ದಶಕಗಳಿಂದ ಉತ್ತಮ ಮೀನುಮಾರುಕಟ್ಟೆ ನಿರ್ಮಾಣವಾಗಬೇಕು ಎಂದು ಕಾರವಾರದ ಮೀನು ಮಾರಾಟಗಾರ ಮಹಿಳೆಯರು ಹೋರಾಟ ಮಾಡಿಕೊಂಡು ಬಂದಿದ್ದರು. ಈ ಸಂಬಂಧ ಗಣೇಶನಿಗೂ ಹರಕೆ ಹೊತ್ತಿದ್ದರು.
ಹರಕೆ ಹೊತ್ತನಂತರ ಕಾರವಾರದ ಮೀನುಮಾರುವ ಮಹಿಳೆಯರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು. ಇದೀಗ ಈ ಕಟ್ಟಡಕ್ಕೆ ಐದು ವರ್ಷಗಳು ಆಗಿದ್ದು ಈ ಹಿನ್ನಲೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರು ಇದೇ ಮೊದಲಬಾರಿಗೆ ಕಾರವಾರದ ಮೀನುಮಾರುಕಟ್ಟೆಯಲ್ಲಿ ಮೀನುಮಾರಾಟವನ್ನು ಒಂದು ದಿನ ಕೈಬಿಟ್ಟು ಮಾರುಕಟ್ಟೆಯಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ನಂತರ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಕಾರ್ಯ ನೆರವೇರಿಸಿದರು.