Karwar : ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯಕೀಯ ಅದೀಕ್ಷಕ ಶಿವಾನಂದ ಕುಡ್ತಾಲಕರ್
Karwar : ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯಕೀಯ ಅದೀಕ್ಷಕ ಶಿವಾನಂದ ಕುಡ್ತಾಲಕರ್
ಕಾರವಾರ :- ಗುತ್ತಿಗೆದಾರನಿಂದ ಲಂಚ ಪಡೆಯುತಿದ್ದ ವೇಳೆ ಕಾರವಾರದ ವೈದ್ಯಕೀಯ ಅಧೀಕ್ಷಕ ಶಿವಾನಂದ ಕುಡ್ತಾಲಕರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಾರವಾರದ (karwar) ಕ್ರಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮೂರು ಲಕ್ಷದ ಐವತ್ತು ಸಾವಿರ ಮೌಲ್ಯದ ಹಾಸಿಗೆ ,ಬೆಡ್ ಗಳನ್ನು ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಗೆ ಸರಬರಾಜು ಮಾಡಲು ಎಂಟು ತಿಂಗಳ ಹಿಂದೆ ಟೆಂಡರ್ ಪಡೆದಿದ್ದ ಅಂಕೋಲದ ವಿಶಾಲ್ ಪರ್ನೀಚರ್ ನ ಮೌಸೀನ್ ಅಹ್ಮದ್ ಶೇಕ್ ಬಳಿ ಹಣ ಬಿಡುಗಡೆಗೆ 50 ಸಾವಿರ ವನ್ನು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ಲಂಚ ಕೇಳಿದ್ದರು.

ಇದಲ್ಲದೇ 2014 ರಲ್ಲಿ 16 ಲಕ್ಷದ ಟೆಂಡರ್ ಪಡೆದಿದ್ದು ಇದಕ್ಕೆ ಐದೂವರೆ ಲಕ್ಷ ಲಂಚ ನೀಡಿದ್ದರು. ಆದರೇ ಇದೀಗ ಮತ್ತೆ ಚಿಕ್ಕ ಟೆಂಡರ್ ಗೆ 50 ಸಾವಿರ ಲಂಚ ಕೇಳಿದ್ದು, ಮೊನ್ನೆ ರಾತ್ರಿ 20,000 ಹಣ ಪಡೆದಿದ್ದ ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ಇಂದು ಮತ್ತೆ 30,000 ರೂಪಾಯಿಯನ್ನು ಪಡೆಯುತ್ತಿರುವ ವೇಳೆ ಲೋಕಾಯುಕ್ತ ಎಸ್.ಪಿ ಕುಮಾರ್ ಚಂದ್ರ ನೇತ್ರತ್ವದ ಮಂಗಳೂರು ಮೂಲದ ತಂಡ ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Karwar:ಕೇಣಿ ವಾಣಿಜ್ಯ ಬಂದರಿಗಾಗಿ ಮೀನುಗಾರರಿಗೆ ಹಣದ ಅಮಿಷ ,ಸುಳ್ಳು ಪ್ರಚಾರ ವಿರೋಧಿಸಿದ ಮೀನುಗಾರರು
ಮೌಸೀನ್ ಅಹ್ಮದ್ ಶೇಕ್ ಗೆ ಆಸ್ಪತ್ರೆಗೆ ನೀಡಿದ ಹಾಸಿಗೆ ,ಬೆಡ್ ಗಳ ಬಿಲ್ ನೀಡದೇ ಕಳೆದ ಎಂಟು ತಿಂಗಳಿಂದ ಕಮಿಷನ್ ಗಾಗಿ ಪೀಡಿಸುತಿದ್ದರು. ಹಣ ಹೊಂದಿಸಲಾಗದೇ ಪತ್ನಿಯ ತಾಳಿ ಸರವನ್ನು ಅಡವಿಟ್ಟು ಮೊದಲ ಹಂತದಲ್ಲಿ 20 ಸಾವಿರ ನೀಡಿದ್ದನು. ನಿನ್ನೆ ದಿನ ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಬೆನ್ನಲ್ಲೇ ಇಂದು ಹಣ ಪಡೆಯುತ್ತಿರುವಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.
ಡೈರಿಯಲ್ಲಿದೆ ಕಮಿಷನ್ ಲೆಕ್ಕಾ!
ಇನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಡೈರಿಯೊಂದು ಸಿಕ್ಕಿದ್ದು ಇದರಲ್ಲಿ ಯಾರ ಹಣ ಬರಬೇಕು, ಬಂದಿದ್ದೆಷ್ಟು ಎಂಬ ಲೆಕ್ಕಾ ಬರೆಯಲಾಗಿದ್ದು ಈ ಡೈರಿಯಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿರುವ ಬಗ್ಗೆ ಮೂಲದಿಂದ ಮಾಹಿತಿ ಬಂದಿದೆ. ಇದಲ್ಲದೇ ಮನೆಯಲ್ಲೂ ಹಣ ಇಟ್ಟಿರುವ ಸಾಧ್ಯತೆಗಳಿದ್ದು ಮನೆಯಲ್ಲಿಯೂ ಶೋಧ ಮಾಡಲಾಗಿದ್ದು ತನಿಖೆ ಮುಂದುವರೆದಿದೆ.
ಸುದ್ದಿ ಮಾಡಲು ಬಂದ ಪತ್ರಕರ್ತರಿಗೆ ದಮ್ಕಿ!
ಇನ್ನು ಲೋಕಾಯುಕ್ತ ದಾಳಿ ಸಂಬಂಧ ಸುದ್ದಿ ಮಾಡಲು ಬಂದ ವರದಿಗಾರರ ಮುಖವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ ಕುಡ್ತಾಲಕರ್ ಹಿರಿಯ ಸಹೋದರ ನನ್ನ ಸಹೋದರನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ಆತ ಹಣ ಪಡೆದಿಲ್ಲ , ಹಣ ತಂದಿಟ್ಟು ಮೋಸದಿಂದ ಟ್ರಾಪ್ ಮಾಡಿಸಲಾಗಿದೆ ಎಂದು ಹೇಳಿದ ಅವರು ಟಿ.ವಿ ಮಾಧ್ಯಮಗಳಿಗೆ ಬೆದರಿಸಿ ಇಲ್ಲಿ ಚಿತ್ರೀಕರಣ ಮಾಡದಂತೆ ತಡೆಯೊಡ್ಡುವ ಪ್ರಯತ್ನ ಮಾಡಿದರು.