Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!
Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!
Karwar news (06 November2025) :-ಉತ್ತರ ಕನ್ನಡ ಜಿಲ್ಲೆಯ ಕಾರವಾರ(Karwar) ನಗರದ ಹೃದಯಭಾಗದಲ್ಲಿ ಇರುವ ಸುಭಾಷ್ ಚಂದ್ರಬೋಸ್ ವೃತ್ತದಲ್ಲಿ ಇರುವ ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ ವಾಗಿದ್ದು ಒಂದು ವಾರದ ಹಿಂದೆ ಯೇ ವಿರೂಪವಾಗಿದ್ದರೂ ಸರಿಪಡಿಸದೇ ಕಾರವಾರ ನಗರಸಭೆ ನಿರ್ಲಕ್ಷ ವಿರುದ್ಧ ಜನ ಕಿಡಿ ಕಾರಿದ್ದಾರೆ.
ಕಾರವಾರ(karwar) ನಗರಸಭೆ 1973 ರಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದು, ನಗರದ ಹೃದಯ ಭಾಗದಲ್ಲಿ ಇರುವ ಈ ಪ್ರತಿಮೆ ಇರುವ ಸ್ಥಳವನ್ನು ಸುಭಾಷ್ ಚಂದ್ರಬೋಸ್ ಸರ್ಕಲ್ ಎಂದು ಕರೆಯುತ್ತಾರೆ. ಇದಲ್ಲದೇ ಇದು ನಗರದ ಮುಖ್ಯ ರಸ್ತೆಯೂ ಆಗಿದ್ದು ಒಂದು ವಾರದಿಂದ ಈ ಪ್ರತಿಮೆ ವಿರೂಪವಾದರೂ ನಗರಸಭೆ ಸರಿಪಡಿಸುವ ಕೆಲಸಕ್ಕೆ ಕೈಹಾಕಿಲ್ಲ. ಮೂರ್ತಿಯ ಕನ್ನಡಕ ತುಂಡಾಗುವ ಹಂತ ತಲುಪಿದ್ದು, ಪೂರ್ಣ ಬೆಂಡಾಗಿದೆ.ಹೀಗಿದ್ದರೂ ಒಂದು ವಾರದಿಂದ ವಿರೂಪವಾಗಿ ಹಾಗೆಯೇ ಇದ್ದು,ಹಲವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಕನ್ನಡ ರಾಜ್ಯೂತ್ಸವ ಸಂದರ್ಭದಲ್ಲಿ ಲೈಂಟಿಂಗ್ ಸಹ ಅಳವಡಿಸಿದ್ದ ನಗರಸಭೆ ವಿರೂಪವಾಗಿದ್ರೂ ಸರಿಪಡಿಸದೇ ಹಾಗೆಯೇ ಬಿಟ್ಟಿದೆ .ಇನ್ನು ನಗರಸಭೆ ನಿರ್ಲಕ್ಷಕ್ಕೆ ಜನ ಕಿಡಿಕಾರಿದ್ದು , ಸರಿಪಡಿಸದಿದ್ದರೇ ನಗರಸಭೆ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.