Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !
Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !

ಕಾರವಾರ:- ಕೊಲೆ ಮಾಡಿದ್ದ ಆರೋಪಿಗಳನ್ನು ಮೆರವಣಿಗೆ ಮಾಡಿದ ವಿಡಿಯೋ ಶೇರ್ ಮಾಡಿ ಮಾಫಿಯಾ ಎಂದು ಬರೆದುಕೊಂಡು ಬೆದರಿಸಲು ಹೊರಟ ಮೀಟರ್ ಬಡ್ಡಿ ದಂಧೆಕೋರನೊಬ್ಬನಿಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು(police) ಸ್ವಯಂ ಪ್ರೇರಿತ ದೂರು ದಾಖಲಿಸುವ ಮೂಲಕ ಶಾಕ್ ನೀಡಿದ್ದಾರೆ.
ಕಳೆದ ತಿಂಗಳು ಸಾಲಕೊಟ್ಟವನಿಂದಲೇ ಕಿಡ್ನಾಪ್ ಆಗಿ ನಂತರ ಪೊಲೀಸರ ಕಾರ್ಯಾಚರಣೆಯಿಂದ ಬದುಕಿ ಬಂದಿದ್ದ ಮುಂಡಗೋಡ ನಿವಾಸಿ ಜಮೀರ್ ಅಹ್ಮದ್ ದರ್ಗಾವಾಲೆ (37) ವಿರುದ್ಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Mundgod: ಮೀಟರ್ ಬಡ್ಡಿ -ಸಾಲ ಹೆಚ್ಚು ಕೊಡದಿದ್ದಕ್ಕೆ ಫೈನಾನ್ಸರ್ ಕಿಡ್ನಾಪ್
ಇನ್ಸ್‌ಸ್ಟಾಗ್ರಾಮ್‌ನಲ್ಲಿ ( Instagram) ಮಾಫಿಯಾ ಅಂತಾ ಹೆಸರಿನ ವಿಡಿಯೋ ಹರಿಯಬಿಟ್ಟಿದ್ದ ಜಮೀರ್ ಅಹ್ಮದ್ ಈ ಹಿಂದೆ ಹೊರ ಜಿಲ್ಲೆಯಲ್ಲಿ ನಡೆದಿದ್ದ ಕೊಲೆಯ ಆರೋಪಿಗಳನ್ನು ವೈಭವೀಕರಿಸಿದ್ದಾನೆ.

ಬೇಲ್ ಮೇಲೆ ಬಿಡುಗಡೆಗೊಂಡಿದ್ದ ಆರೋಪಿಗಳನ್ನು ಸ್ವಾಗತಿಸಿ, ಭರ್ಜರಿ ಮೆರವಣಿಗೆ ಮಾಡಿಸಿದ್ದ ಜಮೀರ್ ಅಹ್ಮದ್ ಹಳೇ ವಿಡಿಯೋವನ್ನು ಮತ್ತೆ ಇನ್ಸ್‌ಸ್ಟಾಗ್ರಾಂನಲ್ಲಿ ಹಾಕಿ ತಾನು ಸಾಲಕೊಟ್ಟ ಜನರನ್ನು ಬೆದರಿಸಲು ಯತ್ನಿಸಿದ್ದ.
ಒಂದು ಲಕ್ಷಕ್ಕೆ 30 ಸಾವಿರ ತಿಂಗಳಿಗೆ ಬಡ್ಡಿ ಪಡೆಯುವ ಈತ ಹಲವರಿಗೆ ಕೋಟಿಗಟ್ಟಲೇ ಸಾಲ ನೀಡಿದ್ದಾನೆ. ಕೆಲವು ದಿನಗಳ ಹಿಂದೆ ಈತನ ಸ್ನೇಹಿತನ ಮನೆಯಮೇಲೆ ರೈಡ್ ಮಾಡಿದ್ದ ಪೊಲೀಸರು 250 ವಿವಿಧ ಖಾತೆಯ ಕಾಲಿ ಚಕ್ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:-Mundgod ನಲ್ಲಿದೆ ಬಾಳಂತಿ ದೇವರು ಈ ದೇವರ ಜಾತ್ರೆ ವಿಷೇಶವೇನು ಗೊತ್ತಾ?
ಆದರೂ ಬುದ್ದಿ ಕಲಿಯದ ಈತ ಹಲವು ಪುಡಿರೌಡಿಗಳನ್ನು ,ಕೊಲೆ ಆರೋಪಿಗಳನ್ನು ತನ್ನೊಂದಿಗಿಟ್ಟುಕೊಂಡು ಮೀಟರ್ ಬಡ್ಡಿದಂಧೆ ನಡೆಸುತಿದ್ದು ಇದೀಗ ಈತನ ವಿರುದ್ಧವೂ ಪ್ರಕರಣ ದಾಖಲಾಗಿದೆ.