Bhatkal: ಅಣ್ಣನ ಹೆಸರಿನಲ್ಲಿ ಮೂರು ವರ್ಷ ಪದವಿ ಓದಿದ ತಮ್ಮ
Bhatkal: ಅಣ್ಣನ ಹೆಸರಿನಲ್ಲಿ ಮೂರು ವರ್ಷ ಪದವಿ ಓದಿದ ತಮ್ಮ
ಕಾರವಾರ :- ಅಣ್ಣನ ಹೆಸರಿನಲ್ಲಿ 3 ವರ್ಷ ಕಾಲ ಕಾಲೇಜಿನಲ್ಲಿ ಪದವಿ ಓದಿ ಪರೀಕ್ಷೆ ವೇಳೆ ಸಿಕ್ಕಿಬಿದ್ದ ಯುವಕ ಪೊಲೀಸರ ಅಥಿತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (bhatkal) ಬೆಳಕಿಗೆ ಬಂದಿದೆ.
ಭಟ್ಕಳದ ಖಾಸಗಿ ಉದ್ಯೋಗದಲ್ಲಿ ನಿರತರಾಗಿರುವ ರೋಹಿತ್ ಕುಮಾರ್ ಅವರ ಹೆಸರು ಹಾಗೂ ಶೈಕ್ಷಣಿಕ ದಾಖಲೆಗಳನ್ನು ಬಳಸಿ, ಅವರ ತಮ್ಮ ರಂಜಿತ್ ಕುಮಾರ್ ದುರ್ಗಪ್ಪ ನಾಯ್ಕ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022ರಿಂದ ತರಗತಿಗಳಿಗೆ ಹಾಜರಾಗಿದ್ದರು. ಅವರು ತಮ್ಮನ್ನು ರೋಹಿತ್ ಕುಮಾರ್ ಎಂದು ಪರಿಚಯಿಸಿ ಮೂರು ವರ್ಷಗಳ ಕಾಲ ಪದವಿ ಓದಿದ್ದಾರೆ.
ಇದನ್ನೂ ಓದಿ:-Bhatkal:ಮುರುಡೇಶ್ವರ ಸಮುದ್ರದಲ್ಲಿ ದೋಣಿ ಮುಳುಗಡೆ-ಓರ್ವ ಸಾವು ,ಇನ್ನೋರ್ವ ನಾಪತ್ತೆ
ಈ ವಿಷಯವು ಬುಧವಾರ ನಡೆದ ಪರೀಕ್ಷೆಯ ವೇಳೆ ವಿಶ್ವವಿದ್ಯಾಲಯದ ವಿಚಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸುವ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಈ ಪ್ರಕರಣದ ಬಗ್ಗೆ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಗಣಪತಿ ಶೆಟ್ಟಿ ಅವರು ಭಟ್ಕಳ ಶಹರ ಠಾಣೆಗೆ ದೂರು ನೀಡಿದ್ದಾರೆ.ಪ್ರಾಂಶುಪಾಲರ ಪ್ರಕಾರ, ರಂಜಿತ್ ಕುಮಾರ್ ಎಂ.ಬಿ.ಎ ಪದವೀಧರರಾಗಿದ್ದು, ಪದವಿ ತರಗತಿಯಲ್ಲಿ ಹೆಚ್ಚು ಗಮನ ಸೆಳೆಯುವಷ್ಟು ಉತ್ತಮವಾಗಿ ಓದುತ್ತಿದ್ದರು.
ಆದರೆ, ಇಂತಹ ವಿದ್ಯಾರ್ಥಿಯೊಬ್ಬನು ಮತ್ತೊಬ್ಬರ ಹೆಸರಿನಲ್ಲಿ ಮತ್ತೆ ಪದವಿ ಓದಿದ್ದೇಕೆ ಎಂಬುದು ಪ್ರಶ್ನೆಯಾಗಿದೆ.ಭಟ್ಕಳ ಪೊಲೀಸರು ಈಗಾಗಲೇ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:-Bhatkal :ಪುರಾಣ ಪ್ರಸಿದ್ಧ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ