For the best experience, open
https://m.kannadavani.news
on your mobile browser.
Advertisement

Karwar : ಕಾಂಗ್ರೆಸ್ ಶಾಸಕರ ಅಸಮಧಾನ ಗುಟ್ಟು ಬಿಚ್ಚಿಟ್ಟ ಆರ್.ವಿ ದೇಶಪಾಂಡೆ ! ಏನಂದ್ರು ಗೊತ್ತಾ? 

ಕಾರವಾರ :- ಕೆಲವು ಶಾಸಕರಿಗೆ(Mla) ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ,ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತಾ ಆಸೆ ಇರುತ್ತದೆ, ಸಿದ್ದರಾಮಯ್ಯ (siddaramaiha) ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
01:22 PM Jun 30, 2025 IST | ಶುಭಸಾಗರ್
ಕಾರವಾರ :- ಕೆಲವು ಶಾಸಕರಿಗೆ(Mla) ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ,ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತಾ ಆಸೆ ಇರುತ್ತದೆ, ಸಿದ್ದರಾಮಯ್ಯ (siddaramaiha) ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
karwar   ಕಾಂಗ್ರೆಸ್ ಶಾಸಕರ ಅಸಮಧಾನ ಗುಟ್ಟು ಬಿಚ್ಚಿಟ್ಟ ಆರ್ ವಿ ದೇಶಪಾಂಡೆ   ಏನಂದ್ರು ಗೊತ್ತಾ  

Karwar : ಕಾಂಗ್ರೆಸ್ ಶಾಸಕರ ಅಸಮಧಾನ ಗುಟ್ಟು ಬಿಚ್ಚಿಟ್ಟ ಆರ್.ವಿ ದೇಶಪಾಂಡೆ ! ಏನಂದ್ರು ಗೊತ್ತಾ? 

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಕೆಲವು ಶಾಸಕರಿಗೆ (mla) ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ,ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತಾ ಆಸೆ ಇರುತ್ತದೆ, ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಇಂದು ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯನವರ  ಸರ್ಕಾರಕ್ಕೆ ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ.ಕೆಲವು ಶಾಸಕರಿಗೆ ಸಮಸ್ಯೆ ಇರಬಹುದು ರಾಜ್ಯ ಉಸ್ತುವಾರಿ ಸುರ್ಜೆವಾಲಾರವರು  ಕರೆದು ಸಮಸ್ಯೆ ಕೇಳುತ್ತಾರೆ.

ಇದನ್ನೂ ಓದಿ:-Uttara kannada :ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವುಕಡೆ ಹಾನಿ

ಶಾಸಕರ ಸಮಸ್ಯೆ ಇದೆ ಅಂದ್ರೆ ಇಂದು ಸುರ್ಜೆವಾಲಾ ರವರು ಕರೆದು ಮಾತಾಡ್ತಾರೆ ,ಎಲ್ಲವೂ ಸರಿ ಹೊಗುತ್ತದೆ.ಹಳೆ ಸಿದ್ಧರಾಮಯ್ಯ ಈಗ ಹೇಗೆ ಇರೊಕೆ ಸಾಧ್ಯ..?,ಮೊದಲು ಸಿದ್ದರಾಮಯ್ಯ ಯಂಗ್ ಇದ್ದ,  ಸ್ವಲ್ಪ ಶಕ್ತಿ ಜಾಸ್ತಿ  ಇತ್ತು,ಈಗ ನಾನೆ ನೋಡಿ ಮೊದಲು ಇದ್ದ ದೇಶಪಾಂಡೆ ಈಗ ಇದಿನಾ.? ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ಸಾಮರ್ಥ್ಯದ ಕುರಿತು ಟಾಂಗ್ ನೀಡಿದ ಅವರು ಆಡಳಿತದಲ್ಲಿ ಎಲ್ಲ ನಿರ್ದಾರ ಶಾಸಕರಿಗೆ  ಹೇಳಿ ಮಾಡೊಕೆ ಆಗುವುದಿಲ್ಲ, ಸಿದ್ಧರಾಮಯ್ಯಗೆ ತಾಳ್ಮೆ ಬಹಳ ಇದೆ ಎಂದರು.

ಇಸನ್ನೂ ಓದಿ:-Karwar:ನಿಷೇಧಿತ ನಾಗರಮುಡಿ ಜಲಪಾತದಲ್ಲಿ ಗಾಂಜಾ ಸೇವಿಸಿ ಅನುಚಿತ ವರ್ತನೆ-ಮೂರು ಜನರ ಬಂಧನ

ಇನ್ನು ದಸರಾ ಉದ್ಘಾಟನೆ ಬೇರೆ ಮುಖ್ಯಮಂತ್ರಿ ಮಾಡ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿಕೆ ಗೆ ತಿರುಗೇಟು ನೀಡಿದ ಅವರು ಪಾಪಾ ಅಶೋಕ ಬಡಪಾಯಿ ತಮ್ಮ ಖುರ್ಚಿ ಉಳಿಸಿಕೊಳ್ಳೊಕೆ ಹೇಳಲೆ ಬೇಕಾಗಿದೆ.

ಅವರು ಹಾಗೆ ಹೇಳದೆ ಇದ್ರೆ ವಿರೋಧ ಪಕ್ಷದ ಸ್ಥಾನದಿಂದ ತೆಗೆದು ಬಿಡ್ತಾರೆ ,ಅಶೋಕ್ ನಿದ್ದೆಯಲ್ಲಿದ್ದಾನೆ ಅನಿಸುತ್ತೆ, ಅದಕ್ಕೆ ಹಾಗೆ ಹೇಳ್ತಾ ಇದ್ದಾನೆ.

ಐದು ವರ್ಷ ಸಿದ್ದರಾಮಯ್ಯ (Siddaramaiah )  ನವರೇ  ಸಿಎಂ (cm karnataka) ಆಗಿ ಇರ್ತಾರೆ,ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ, ಶಾಸಕಾಂಗ ಸಭೆಯಲ್ಲಿ ವಿಷಯ ಬಂದಿಲ್ಲ,ಎಲ್ಲರೂ ಕೂಡಿ ಇದ್ದೇವೆ ಒಕ್ಕಟ್ಟಿನಿಂದ ಇದ್ದೇವೆ , ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ.

ಐದು ಗ್ಯಾರಂಟಿ ಯೋಜನೆಗೆ 58 ಸಾವಿರ ಕೋಟಿ ರೂಪಾಯಿ ಖರ್ಚು ಆಗ್ತಾ ಇದೆ,ಅಭಿವೃದ್ದಿ ಗೂ ಹಣ ಬಿಡುಗಡೆ ಆಗ್ತಾ ಇದೆ, ಪ್ರತಿ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ,ಕೊಟ್ಟಿರುವ ಹಣ ಕೆಲಸ ಪ್ರಾರಂಭದ ಬಳಿಕ ಬೇಗ ಬರುತ್ತಿಲ್ಲ, ಹಣ ಬಿಡುಗಡೆ ಆಗಲು ತಡ ಆಗ್ತಾ ಇರೊದೆ ಸಮಸ್ಯೆ ಆಗಿದೆ.ಈ ಸಮಸ್ಯೆ ಈ ಹಿಂದೆನೂ ಇತ್ತು, ಈಗ ಸ್ವಲ್ಪ ಜಾಸ್ತಿ ಆಗಿದೆ ಅಷ್ಟೆ ಎಂದರು. ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ,ಆದ್ರೆ ಸತೀಶ್ ಜಾರಕಿಹೊಳಿ ಒಬ್ಬ ಒಳ್ಳೆ ಮನುಷ್ಯ,  ಒಳ್ಳೆ ವ್ಯಕ್ತಿ.ಅಧ್ಯಕ್ಷ ಅವರು ಆಗ್ತಾರೋ ಇಲ್ವೋ ನನಗೆ ಗೊತ್ತಿಲ್ಲ ಎಂದರು.

ಉತ್ತರ ಕನ್ನಡ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ.

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ( Congress President) ಸಾಯಿ ಗಾವಂಕರ್ ವಿರುದ್ಧ  ಸಂಘಟನೆಯಲ್ಲಿ ಅಸಮಧಾನ ಇದ್ದು ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂಬ ಕೂಗು ಕೇಳಿಬಂದಿದ್ದು ಈ ಬಗ್ಗೆ ಸ್ಥಳೀಯ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್.ವಿ ದೇಶಪಾಂಡೆ ಯಾವುದೇ ಕಾರಣಕ್ಕೂ ಈಗಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ ,ಈರೀತಿಯ ವಿಷಯವು ಸಹ ಕೆ.ಪಿ.ಸಿ.ಸಿ ಅಧ್ಯಕ್ಷರ ಮುಂದೆ ಇಲ್ಲ ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ