Sirsi:20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ
20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ
ಕಾರವಾರ :- ಕಚೇರಿ ಬಾಡಿಗೆಗೆ ಬಿಟ್ಟ ಕಾರಿನ ಹಣವನ್ನು ಮಂಜೂರು ಮಾಡಲು ಲಂಚ ಕೇಳಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು (police)ಹಣದ ಸಮೇತ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ನಡೆದಿದೆ.

ಶಿರಸಿಯ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಲೋಕಾಯುಕ್ತ ದಾಳಿಗೊಳಗಾದ ಬ್ರಷ್ಟ ಅಧಿಕಾರಿಯಾಗಿದ್ದು, ಸಚಿನ್ ಕೊಡ್ಕಣಿ ಎಂಬುವವರ ದೂರಿನನ್ವಯ ಲೋಕಾಯುಕ್ತ ಇಸ್ಪೆಕ್ಟರ್ ವಿನಾಯಕ್ ಬಿಲ್ಲವ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.
ಇದನ್ನೂ ಓದಿ:-Sirsi:ಆಹಾರ ಅರಸಿ ಮನೆಯಲ್ಲಿ ಅಡಗಿ ಕುಳಿತು ಚಿರತೆ
ಕಾರಿನ ಬಾಡಿಗೆ ಹಣ ಮಂಜೂರು ಮಾಡಲು ಸುರೇಶ್ 20 ಸಾವಿರ ಹಣ ಕೇಳಿದ್ದು, ಹಣ ನೀಡದಿದ್ದಾಗ ಬಿಲ್ ಮಂಜೂರು ಮಾಡಲು ವಿಳಂಬ ಮಾಡಿದ್ದರು. ನಂತರ ಸಚಿನ್ ಕೊಡ್ಕಣಿಯವರು ಹಣ ನೀಡುವುದಾಗಿ ಒಪ್ಪಿ ಲೋಕಾಯುಕ್ತಕ್ಕೆ ದೂರು ನೀಡಿ ಬ್ರಷ್ಟ ಆಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.
