ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ |ಇಡೀ ದಿನ ಹೇಗಿತ್ತು ಪ್ರಚಾರ? ವಿವರ ನೋಡಿ.
ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ
ಕಾಂಗ್ರೆಸ್ ಅಭ್ಯರ್ಥಿ ಅಂಕಲಿ ನಿಂಬಾಳ್ಕರ್ ಇಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಗೋಕರ್ಣ ದಲ್ಲಿ ಬ್ರಾಹ್ಮಣ ಜನಾಂಗದ ಮಠಾಧೀಶರಾದ ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಭೇಟಿಯಾಗಿ ಆಶಿರ್ವಾದ ಪಡೆದರು.
ಆರಿಸಿ ಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು' ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಾದ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಗಳು ಕೆಲ ಹೊತ್ತು ಚುನಾವಣೆ ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಕೊನೆಯಲ್ಲಿ ಡಾ.ಅಂಜಲಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಅವರು, 'ಮನಃಪೂರ್ವಕವಾಗಿ ಆಶೀರ್ವದಿಸುವೆ. ಗೆದ್ದುಬಂದರೆ ತಮ್ಮಿಂದ ಕ್ಷೇತ್ರಕ್ಕೂ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದರು.
ಬಿಜೆಪಿ- ಜೆಡಿಎಸ್ ನಿಂದಲೂ ನಮಗೆ ಬೆಂಬಲವಿದೆ, ಇದು ಸುವರ್ಣಾವಕಾಶ: ಡಾ.ಅಂಜಲಿ.

ಉತ್ತರ ಕನ್ನಡದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯನ್ನ ಅನೇಕರು ಒಪ್ಪುತ್ತಿಲ್ಲ. ಇನ್ನೂ ಹಲವರಿಗೆ ಬಿಜೆಪಿ ಅಭ್ಯರ್ಥಿಯೇ ಇಷ್ಟವಿಲ್ಲ. ಹೀಗಾಗಿ ಎರಡೂ ಪಕ್ಷದವರು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಬಾರಿ ಸುವರ್ಣಾವಕಾಶವಿದೆ. ಈಗಿರುವ ಕಾಂಗ್ರೆಸ್ ಪರ ಅಲೆಯನ್ನ ಮತದಾನದ ದಿನದವರೆಗೂ ಸುನಾಮಿಯಂತೆ ಕೊಂಡೊಯ್ಯಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಕರ್ಣದಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯಕರ್ತರನ್ನ ಹುರಿದುಂಬಿಸಿದರು.

ಗೋಕರ್ಣದ ಜಿ.ಪಂ. ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿಯವರ ನಿವಾಸದಲ್ಲಿ ಕಾರ್ಯಕರ್ತರು, ಮುಖಂಡರೊಂದಿಗೆ ಮಾತನಾಡಿದ ಅವರು, ಸ್ತ್ರೀರೋಗ ತಜ್ಞೆಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ಮಹಿಳೆಯರ ಕಷ್ಟವನ್ನ ಅರಿತಿದ್ದೇನೆ. ಜನ ಸೇವೆಗಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿ ಖಾನಾಪುರದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದೆ. ಉತ್ತರಕನ್ನಡ ಕ್ಷೇತ್ರದಲ್ಲಿ ಹಲವು ಸಮುದಾಯಗಳ ಜನ ಇದ್ದಾರೆ. ಎಲ್ಲಾ ಸಮುದಾಯದ ಕಷ್ಟ- ಸುಖಗಳನ್ನೂ ನಾನು ಅರಿತಿದ್ದೇನೆ. 10 ವರ್ಷಗಳ ಬಿಜೆಪಿಯ ಸುಳ್ಳು ಭರವಸೆ, 10 ತಿಂಗಳ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಬಗ್ಗೆ ಜನರಿಗೆ ತಿಳಿಸುವ ಮೂಲಕ ಈ ಬಾರಿ ಕಾಂಗ್ರೆಸ್ ಗೆ ಹೆಚ್ಚಿನ ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.
ಗೋಕರ್ಣ ದಲ್ಲಿ ಅಂಜಲಿ ನಿಂಬಾಳ್ಕರ್ ನೋಡಲು ಮುಗಿಬಿದ್ದ ಅಭಿಮಾನಿಗಳು.

ಗೋಕರ್ಣ ದ ಕಾಂಗ್ರೆಸ್ ಮುಖಂಡ ಪ್ರದೀಪ್ ನಾಯ್ಕ ರವರ ಮನೆಗೆ ಆಗಮಿಸಿದ್ದ ಅಂಜಲಿ ನಿಂಬಾಳ್ಕರ್ ನೋಡಲು ನೂರಾರು ಜನ ಅಭಿಮಾನಿಗಳು ಪ್ರದೀಪ್ ನಾಯ್ಕ ಮನೆಗೆ ಮುಗಿಬಿದ್ದರು.

ಅಂಜಲಿ ನಿಂಬಾಳ್ಕರ್ ರನ್ನು ಪ್ರೀತಿಯಿಂದ ಬರಮಾಡಿಕೊಂಡ ಜನ ಆದರದ ಪ್ರೀತಿ ತೋರಿಸಿದರು.