Karwar|ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದ ಶಾಸಕ ಸತೀಶ್ ಸೈಲ್.
Karwar News :- ಕಾರವಾರ ನಗರಸಭಾ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಚುನಾವಣಾ ನಡೆಯುವ ಸ್ಥಳಕ್ಕೆ ತೆರಳಲು ಪ್ರವೇಶ ನೀಡದ ಕುರಿತು ಹೈಡ್ರಾಮ ನಡೆದು ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ವಿರುದ್ಧ ಕಾರವಾರದ ಶಾಸಕ ಸತೀಶ್ ಸೈಲ್ ದೂರು ದಾಖಲಿಸಿದ ಘಟನೆ ನಡೆದಿದೆ.
ಇಂದು ಮಧ್ಯಹ್ನ ಮತದಾನದ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಹನದೊಂದಿಗೆ ನಗರಸಭೆ ಆವರಣಕ್ಕೆ ತೆರಳಲು ಪೊಲೀಸರು ಅವಕಾಶ ನೀಡಿರಲಿಲ್ಲ. ಇದೇ ಸಂದರ್ಭದಲ್ಲಿ ಹಾಲಿ ಕಾರವಾರದ ಕಾಂಗ್ರೆಸ್ (congress)ಶಾಸಕ ಸತೀಶ್ ಸೈಲ್ ರವರಿಗೆ ಹಾಗೂ ಅವರ ಬೆಂಬಲಿಗರಿಗೆ ವಾಹನ ಸಮೇತ ಒಳಗೆ ಪ್ರವೇಶ ನೀಡಿದ್ದಾರೆ ಎಂದು ಬಿಜೆಪಿ (Bjp)ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಪೊಲೀಸರನ್ನು ತರಾಟೆ ತೆಗೆದುಕೊಂಡಿದ್ದರು.
ಇದೇ ವೇಳೆ ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಕಾಂಗ್ರೆಸ್ ನಿಂದ 25 ರಿಂದ 30 ಲಕ್ಷಕ್ಕೆ ಸದಸ್ಯರ ಕರೀದಿ ಆರೋಪ ಮಾಡಿದ್ದಲ್ಲದೇ ರಾಜಕೀಯಕ್ಕೋಸ್ಕರ ಕಾಂಗ್ರೆಸ್ ಕಾರ್ಯಕರ್ತನನ್ನು ಬಲಿ ನೀಡಿದ್ದಾರೆ ಎಂದು ಸತೀಶ್ ಸೈಲ್ ವಿರುದ್ಧ ಆರೋಪ ಮಾಡಿದರು.
ಇನ್ನು ಮತದಾನ ಮಾಡಿ ಹೊರಬಂದ ಶಾಸಕ ಸತೀಶ್ ಸೈಲ್ ಗೆ ಮಾಧ್ಯಮಗಳು ಈ ಆರೋಪದ ಬಗ್ಗೆ ಪ್ರಶ್ನಿಸಿದ್ದು ಮಾಜಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಲ್ಲದೇ ಮಾಜಿ ಶಾಸಕಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಅಂಕೊಲ ,ಕಾರವಾರದಲ್ಲಿ 30-40 ನಡೆಯುತ್ತೆ,ಕೆಲವು ಸದಸ್ಯರು ನಮ್ಮ ಜೊತೆ ಬಂದಿದ್ದರು ನಾವೇ ಬೇಡವೆಂದು ಬಿಟ್ಟಿದ್ದೇವೆ ಎಂದರು. ಇನ್ನು ಇಬ್ಬರ ಜಟಾಪಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಉಪಾಧ್ಯಕ್ಷೆ ಮಾತಿಗೆ ಖಂಡನೆ:-

ಇನ್ನು ಬಿಜೆಪಿಯ ರಾಜ್ಯಾ ಉಪಾಧ್ಯಕ್ಷೆ ರೂಪಾಲಿ ನಾಯ್ಕ ರವರು ಮಾತನಾಡಿದ ಹೇಳಿಕೆಗೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಕಾಂಗ್ರೆಸ್ ಬಿಜೆಪಿ ಉಪಾಧ್ಯಕ್ಷೆ ಮಾತನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ನಾಯ್ಕ ಚುನಾವಣೆಯಲ್ಲಿ ರೂಪಾಲಿ ನಾಯ್ಕ 25- 30 ಲಕ್ಷ ದಲ್ಲಿ ಸದಸ್ಯರ ಕರೀದಿಗೆ ಮುಂದಾಗಿದ್ದರು.
ನಮ್ಮ ಕಾರ್ಯಕರ್ತ ರಾಜು ತಾಂಡೇಲ್ ಜೀವ ತೆಗೆದಿದ್ದೇವೆ ಎಂದು ಆರೋಪಿಸಿದ್ದಾರೆ ಇವರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದರು. ಇನ್ನು ಕಾಂಗ್ರೆಸ್ ವಕ್ತಾರ ಶಂಭು ಶಟ್ಟಿ ರವರು ಮಾತನಾಡಿ ಶಾಸಕರ ವಿರುದ್ಧ ಷಢ್ಯಂತ್ರ ನಡೆದಿದೆ. ಅವರ ಜೀವಕ್ಕೆ ಕುತ್ತಿದೆ ಹೀಗಾಗಿ ದೂರು ದಾಖಲಿಸಿದ್ದೇವೆ ಎಂದರು. ಇನ್ನು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಮಾತನಾಡಿ ಹಿಂದೆಯೂ ಶಾಸಕಿಯಾಗಿದ್ದಾಗ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು ರೂಪಾಲಿ ನಾಯ್ಕ ವರ್ತನೆ ಬಗ್ಗೆ ಅಸಮದಾನ ವಿದೆ .ಬಿಜೆಪಿ ಪಕ್ಷದ ಉಪಾಧ್ಯಕ್ಷೆಯಾಗಿರುವ ಅವರು ಜವಬ್ದಾರಿಯುತ ಹೇಳಿಕೆ ನೀಡಬೇಕು ಪಕ್ಷ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತೆಕ್ಕೆಗೆ ಕಾರವಾರ ನಗರಸಭೆ.

ಕಾರವಾರ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ,ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಳಿಗೆ ಜಯ ದೊರೆತಿದೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಪಡೆದಿದೆ.
ಬಿಜೆಪಿಯ ರವಿರಾಜ್ ಅಂಕೋಲೇಕರ್ ಅಧ್ಯಕ್ಷರಾಗಿ ಆಯ್ಕೆ ಯಾದರೇ ಮೈತ್ರಿ ಪಕ್ಷದ ಜೆಡಿಎಸ್ ನ ಪ್ರೀತಿ ಮಧುಕರ್ ಜೋಶಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಒಟ್ಟು 31ಸದಸ್ಯ ಬಲ ಹೊಂದಿರುವ ಕಾರವಾರ ನಗರಸಭೆಯಲ್ಲಿ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ
ಬಿಜೆಪಿ -11, ಜೆಡಿಎಸ್ -3, ಪಕ್ಷೇತರ -3 ಸಂಸದ-1, MLC -1ಮತ ಚಲಾವಣೆಯಾಗಿ ಒಟ್ಟು 19 ಮತ ಪಡೆದರೇ
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕಾಂಗ್ರೆಸ್-10 , ಜೆಡಿಎಸ್-1,ಪಕ್ಷೇತರ -1ಎಂ.ಎಲ್.ಎ-1 ಒಟ್ಟು 14 ಮತ ಪಡೆದು ಸೋಲು ಕಂಡರು.
.