Kumta|ಟೋಲ್ ಹಣದ ಆಸೆಗೆ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿದ ಐ.ಆರ್.ಬಿ ಕಂಪನಿ
Kumta|ಟೋಲ್ ಹಣದ ಆಸೆಗೆ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿದ ಐ.ಆರ್.ಬಿ ಕಂಪನಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಐ.ಆರ್.ಬಿ (IRB) ಕಂಪನಿ ದಶಕದಿಂದ ಮಾಡುತ್ತಲೇ ಇದೆ.
70% ಕಾಮಗಾರಿ ಮುಗಿಯದಿದ್ರು ಜಿಲ್ಲೆಯ ಅಂಕೋಲ ತಾಲೂಕಿನ ಬೇಲಿಕೇರಿ ,ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ಟೋಲ್ ನಿರ್ಮಾಣ ಮಾಡಿ ವಾಹನ ಸವಾರರ ಬಳಿ ಹಣ ವಸೂಲಿ ಮಾಡುತ್ತಿದೆ.
ಇನ್ನು ಈಗಾಗಲೇ ನಿಗದಿ ಸಮಯ ಮುಗಿದಿದ್ದರೂ ಕಾಮಗಾರಿ ಮುಗಿದಿಲ್ಲ.ಹಲವು ಕಡೆ ರಸ್ತೆಗಳೇ ಸರಿಯಾಗಿ ಇಲ್ಲ .ಹೀಗಾಗಿ 18 ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
Ankola:ಬ್ರಿಟೀಷರ ಕಾಲದಿಂದ ಪೂಜೆ ಗೈಯುತ್ತಿರುವ ಗೋಡೆ ಗಣಪನ ಶಕ್ತಿ ಏನು ಗೊತ್ತಾ ?
ಆದ್ರೆ ಟೋಲ್ ಗಳು ಇರುವ ಅಕ್ಕಪಕ್ಕದ ಹಳ್ಳಿಗಳ ರಸ್ತೆಯನ್ನೇ ಬಂದ್ ಮಾಡಲು ಐ.ಆರ್.ಬಿ ಕಂಪನಿ ಮುಂದಾಗಿದ್ದು ಕುಮಟಾ ತಾಲೂಕಿನ ಹೊಳೆಗದ್ದೆ ಬಳಿಯ ರಾಮನಗಿಂಡಿ,ಬೆಟ್ಟಗೇರಿ ಗ್ರಾಮಗಳಿಗೆ ತೆರಳುವ ದೇವಗಿರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಪಂಚಾಯ್ತಿಯ ರಸ್ತೆಯನ್ನೇ ಬಂದ್ ಮಾಡಿದ್ದು ದ್ವಿಚಕ್ರ ವಾಹನಗಳು ಮಾತ್ರ ತೆರಳುವಂತೆ ಅವಕಾಶ ಮಾಡಿಕೊಡಲಾಗಿದೆ.

ರಸ್ತೆಯ ಎರಡೂಕಡೆ ಕಬ್ಬಿಣದ ಬಾಕ್ಸ್ ಗಳನ್ನು ಇಡಲಾಗಿದ್ದು ಪಕ್ಕದಲ್ಲೇ ನಾಲ್ಕು ಚಕ್ರದ ವಾಹನ ತೆರಳದಂತೆ ಜಲ್ಲಿಕಲ್ಲಿನ ದಿಬ್ಬವನ್ನು ಮಾಡಲಾಗಿದೆ. ಇನ್ನು ಈ ಗ್ರಾಮದಲ್ಲಿ 50 ಕ್ಕೂ ಹೆಚ್ಚು ಮನೆಗಳಿವೆ. ಪ್ರಸಿದ್ಧ ಉಮಾ ಮಹೇಶ್ವರಿ ದೇವಸ್ಥಾನ ಸಹ ಇದೇ ರಸ್ತೆಯಲ್ಲಿ ಬರುತ್ತದೆ. ಆದರೇ ಇಲ್ಲಿನ ರಸ್ತೆಯಲ್ಲಿ ತೆರಳಬೇಕು ಎಂದರೇ ಬೈಕ್ ನಲ್ಲಿ ತೆರಳಬೇಕು.
Kumta: ಒಂದು ಅಡಿ ಉದ್ದ ,ಎರಡು ಇಂಚು ಅಗಲ ಚಾಕು ನುಂಗಿದ ನಾಗರಹಾವು! ವಿಡಿಯೋ ನೋಡಿ
ಇನ್ನು ಈ ರಸ್ತೆಯನ್ನು ಬಂದ್ ಮಾಡುವಂತೆ ಗ್ರಾಮಪಂಚಾಯ್ತಿಯವರೇ ಹೇಳಿದ್ದಾರೆ ಎಂದು ಪ್ರಶ್ನೆ ಮಾಡುವ ಜನರಿಗೆ ಐ.ಆರ್.ಬಿ ಸಿಬ್ಬಂದಿ ಉತ್ತರ ನೀಡುತ್ತಾರೆ.

ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡುವ ಅಧಿಕಾರ ಇವರಿಗೆ ಯಾರು ಕೊಟ್ಟರು ಎಂಬ ಪ್ರಶ್ನೆ ಏಳುವಂತಾಗಿದೆ. ಇನ್ನು ಇಲ್ಲಿಯವರು ಹೇಳುವ ಪ್ರಕಾರ ಹೆದ್ದಾರಿಯಲ್ಲಿ ಬರುವ ವಾಹನಗಳು ಟೋಲ್ ತಪ್ಪಿಸಿ ಈ ರಸ್ತೆ ಮೂಲಕ ಹೋಗುತ್ತಾರೆ ,ಹೀಗಾಗಿ ಹೀಗೆ ಮಾಡಲಾಗಿದೆಯಂತೆ.
Kumta: ಶಾಸಕ ದಿನಕರ್ ಶಟ್ಟಿ ಲೈಂಗಿಕ ಶೋಷಣೆ ಆರೋಪ ಆಡಿಯೋ ಪ್ರಕರಣ – ಕನ್ನಡವಾಣಿ ವಿರುದ್ಧ ತನಿಖೆಗೆ ಹೈಕೋರ್ಟ ತಡೆ
ಈ ಬಗ್ಗೆ ಸ್ಥಳೀಯರು ಸಹ ದ್ವನಿ ಎತ್ತದ ಕಾರಣ ತಾವು ಮಾಡಿದ್ದೇ ಕಾನೂನು ಎಂಬುವಂತೆ ಐ.ಆರ್.ಬಿ ಕಂಪನಿ ಗ್ರಾಮಕ್ಕೆ ಹೋಗುವ ರಸ್ತೆಯನ್ನೇ ಬಂದ್ ಮಾಡಿದೆ.
ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆಯೇ ಅಥವಾ ಹಿಂದಿನಂತೆ ಜಾಣ ಮೌನ ವಹಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.