ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi:ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಪ್ರಕರಣ-ನಗರಸಭೆಕಮಿಷಿನರ್ ,ಮಾಜಿ ಅಧ್ಯಕ್ಷ ,ಸದಸ್ಯರು ಸೇರೆ ಏಳು ಜನ ಆರೋಪಿಗಳು!

ಕಾರವಾರ :- ಹಣದ ಆಸೆಗೆ ಬಿದ್ದ ನಗರಸಭೆ ಕಮಿಷಿನರ್ ,ಮಾಜಿ ಅಧ್ಯಕ್ಷ ಹಾಗೂ ಸದಸ್ಯರೇ ಸೇರಿ ಲಕ್ಷಾಂತರ ಮೌಲ್ಯದ ಕಬ್ಬಿಣದ ಪೈಪುಗಳನ್ನು ಕಳ್ಳತನ ಮಾಡಿ ಕೊನೆಗೆ ಪೊಲೀಸರ ಅಥಿತಿಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
10:23 PM Jul 07, 2025 IST | ಶುಭಸಾಗರ್
ಕಾರವಾರ :- ಹಣದ ಆಸೆಗೆ ಬಿದ್ದ ನಗರಸಭೆ ಕಮಿಷಿನರ್ ,ಮಾಜಿ ಅಧ್ಯಕ್ಷ ಹಾಗೂ ಸದಸ್ಯರೇ ಸೇರಿ ಲಕ್ಷಾಂತರ ಮೌಲ್ಯದ ಕಬ್ಬಿಣದ ಪೈಪುಗಳನ್ನು ಕಳ್ಳತನ ಮಾಡಿ ಕೊನೆಗೆ ಪೊಲೀಸರ ಅಥಿತಿಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

Sirsi:ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಪ್ರಕರಣ-ನಗರಸಭೆಕಮಿಷಿನರ್ ,ಮಾಜಿ ಅಧ್ಯಕ್ಷ ,ಸದಸ್ಯರು ಸೇರೆ ಏಳು ಜನ ಆರೋಪಿಗಳು!

Advertisement

ಕಾರವಾರ :- ಹಣದ ಆಸೆಗೆ ಬಿದ್ದ ನಗರಸಭೆ ಕಮಿಷಿನರ್ ,ಮಾಜಿ ಅಧ್ಯಕ್ಷ ಹಾಗೂ ಸದಸ್ಯರೇ ಸೇರಿ ಲಕ್ಷಾಂತರ ಮೌಲ್ಯದ ಕಬ್ಬಿಣದ ಪೈಪುಗಳನ್ನು ಕಳ್ಳತನ ಮಾಡಿ ಕೊನೆಗೆ ಪೊಲೀಸರ ಅಥಿತಿಗಳಾದ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಹೌದು ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ.

ಶಿರಸಿ ತಾಲೂಕಿನ ಕೆಂಗ್ರೆ ನೀರು ಸರಬರಾಜು ಘಟಕದಿಂದ ಶಿರಸಿ(sirsi) ನಗರಕ್ಕೆ ಪೂರೈಕೆಯ ಹಳೆಯ ಕಾಸ್ಟ್ ಐರನ್ ಪೈಪ್ ಗಳು ಪೆಬ್ರವರಿ 27 ರಂದು ಕಳ್ಳತನವಾಗಿದೆ. ಈ ಕುರಿತು ಮಾರ್ಚ 4 ರಂದು ನಗರಸಭೆಯ ಕಿರಿಯ ಅಭಿಯಂತರ ಸೂಫಿಯಾನ್ ಅಹಮ್ಮದ ಬ್ಯಾರಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement

ಎಂಟು ಕಿಲೋಮೀಟರ್ ಉದ್ದದ ಈ ಪೈಪ್ ಲೈನ್ ನಲ್ಲಿ 900 ಮೀಟರ್ ಉದ್ದದ 116 ಪೈಪ್ ಗಳು ಕಳ್ಳತನವಾಗಿದ್ದು  ಒಟ್ಟು 2118,624 ಲಕ್ಷ ಮೊತ್ತದ್ದಾಗಿದೆ. ಈ ಪೈಪ್ ಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಝಕ್ರಿಯಾ ಸಯ್ಯದ್ ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ:- Sirsi: ಅಬ್ಬ ನೋಡು ನೋಡುತಿದ್ದಂತೆ ಕುಸಿದ ಮನೆ ವಿಡಿಯೋ ನೋಡಿ.

ಇನ್ನು ಈ ಲಕ್ಷಾಂತರ ಮೌಲ್ಯದ ಐರನ್ ಪೈಪ್ ಗಳನ್ನು ಹಾಡು ಹಗಲೇ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಅಧಿಕಾರಿಗಳು ಶಾಮೀಲಾಗಿರಿವ ಕುರಿತು ನಗರಸಭಾ ಸದಸ್ಯರು ಸಹ ಆರೋಪ ಮಾಡಿದ್ದರು.

ಎಸ್.ಪಿ ಪತ್ರಿಕಾ ಗೋಷ್ಠಿ

ಇದಲ್ಲದೇ ಸಮರ್ಪಕ ತನಿಖೆ ಕೈಗೊಳ್ಳದಿದ್ದರೇ ಸಾಮೂಹಿಕ ರಾಜೀನಾಮ ಕೊಡುವುದಾಗಿ ನಗರಸಭಾ ಸದಸ್ಯರು ಪಟ್ಟು ಹಿಡಿದಿದ್ದರು. ಇನ್ನು ಈ ಪ್ರಕರಣ ಕುರಿತು ಲೋಕಾಯುಕ್ತಕ್ಕೆ ಸಹ ದೂರು ನೀಡಲಾಗಿತ್ತು.

ಆದ್ರೆ ತನಿಖೆ ಕೈಗೊಂಡ ಗ್ರಾಮೀಣಾ ಠಾಣೆ ಪೊಲೀಸರು ನಗರಸಭೆ ಕಮಿಷಿನರ್, ಸಹಾಯಕ ಇಂಜಿನಿಯರ್ ,ಎ.ಇ.ಇ ,ನಗರಸಭೆ ಮಾಜಿ ಅಧ್ಯಕ್ಷ ,ಸದಸ್ಯರೇ ಕಳ್ಳತನ ಮಾಡಿರುವುದನ್ನು ದಾಖಲೆ ಸಮೇತ ಪತ್ತೆ ಮಾಡಿ ದೂರು ನೀಡಿದ ಅಧಿಕಾರಿ ಸೇರಿ ಏಳು ಆರೋಪಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

 ಇನ್ನು ಪ್ರಕರಣ ಬೆನ್ನುಬಿದ್ದ ಗ್ರಾಮೀಣ ಠಾಣೆ ಪೊಲೀಸರು ಝಕ್ರಿಯಾ ಸಯ್ಯದ್ ರನ್ನು ಬಂಧಿಸಿ ತನಿಖೆ ಕೈಗೊಂಡಾಗ ಈ ಹಿಂದೆ ನಗರದ ಹಳೆಯ ಪೈಪ್ ಗಳನ್ನು ತೆಗೆಯಲು ಟೆಂಟರ್ ಪಡೆದಿದ್ದು, ಅದು ನಷ್ಟವಾಗಿದ್ದರಿಂದ ಇದನ್ನು ಸರಿದೂಗಿಸಲು ನಗರಸಭೆ ಕಮಿಷಿನರ್ ,ಅಧ್ಯಕ್ಷ ಹಾಗೂ ಸಹಾಯಕ ಇಂಚಿನಿಯರ್ ಗಮನಕ್ಕೆ ತಂದು ಪೈಪ್ ಗಳನ್ನು ಕಿತ್ತು ತೆಗೆದುಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿದ್ದರು.

ಇದಕ್ಕಾಗಿ ನಗರಸಭಾ ಸದಸ್ಯ ಯಶವಂತ್ ಮರಾಠೆ ರವರ ಖಾತೆಗೆ ಹಣ ಹಾಕಿರುವುದು ತಿಳಿದಿದೆ. ಈತನನ್ನು ವಿಚಾರಿಸಿದಾಗ ನಗರಸಭೆ ಕಮೀಷಿನರ್ ,ಮಾಜಿ ಅಧ್ಯಕ್ಷ ,ಸದಸ್ಯರು ಸಹ ಭಾಗಿಯಾಗಿರುವುದು ಬಯಲಿಗೆ ಬಂದಿದೆ.

 ಈ ಪ್ರಕರಣ ಸಂಬಂಧ ಸರ್ಕಾರಿ ಅಧಿಕಾರಿಗಳಾದ ನಗರಸಭೆ ಕಮಿಷಿನರ್ ಕಾಂತರಾಜು, ಕಳ್ಳತನವಾಗಿರುವ ದೂರು ನೀಡಿದ್ದ ಜೂನಿಯರ್ ಇಂಜಿನಿಯರ್ ಸುಫಿಯಾನ್ ಅಹಮ್ಮದ ಬ್ಯಾರಿ, ಎ.ಇ.ಇ -ಪ್ರಶಾಂತ ವರ್ಣೇಕರ್ , ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ,ನಗರಸಭೆ ಸದಸ್ಯ ಕುಮಾರ್ ಬೋರ್ಕರ್,ಯಶವಂತ್ ಮರಾಠೆ ಯನ್ನು ತನಿಖೆ ನಡೆಸಿದ್ದು ಕೃತ್ಯಕ್ಕೆ ಬಳಸಿದ ಎರಡು ಲಾರಿ ಹಾಗೂ ಪ್ರಮುಖ ಆರೋಪಿ ಗುಜರಿ ವ್ಯಾಪಾರಿ ಝಕ್ರಿಯಾ ಸಯ್ಯದ್ ರಿಂದ ಕಬ್ಬಿಣ ಮಾರಿದ ಏಳು ಲಕ್ಷ ರುಪಾಯಿಗಳನ್ನು ವಶಕ್ಕೆ ಪಡೆದಿರುವುದಾಗಿ ಶಿರಸಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

 ತಾವು ಮಾಡಿದ ತಪ್ಪಿಗೆ ಏಳು ಜನ ಆರೋಪಿಗಳು ದೂರು ದಾಖಲಾದಾಗಲೇ ಕೋರ್ಟ ನಲ್ಲಿ ಬೇಲ್ ಪಡೆದಿದ್ದು ಬೀಸುವ ದೊಣ್ಣೆಯಿಂದ ಸದ್ಯ ಬಚಾವ್ ಆಗಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಮೂರು ಜನ ಸರ್ಕಾರಿ ಅಧಿಕಾರಿ ಹಾಗೂ ಮೂರು ಜನ ಜನಪ್ರತಿನಿಧಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅಧಿಕಾರಿಗಳನ್ನು ಅಮಾನತ್ತು ಮಾಡಲು ಹಾಗೂ ನಗರಸಭೆ ಸದಸ್ಯರ ಅನರ್ಹತೆಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ ,ನಂತರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ. ಸದ್ಯ ಕಳೆದ ಆರು ತಿಂಗಳಿಂದ ನಗರಸಭೆ ಪೈಪ್ ಕದ್ದವರ್ಯಾರು ಎಂಬ ಪ್ರಶ್ನೆಗೆ ಪೊಲೀಸರು(police) ಉತ್ತರ ನೀಡಿದ್ದು ,ಬೇಲಿಯೆ ಎದ್ದು ಹೊಲ ಮೈದಂತಾಗುದ್ದು ಮಾತ್ರ ದುರಂತ.

 

Advertisement
Tags :
Iron pipe theftKannada newsKarwarmunsipal officer accusedPoliceSirsiSirsi newsUttara Kannada
Advertisement
Next Article
Advertisement