For the best experience, open
https://m.kannadavani.news
on your mobile browser.
Advertisement

Ankola:ಕೇಣಿ ಪಬ್ಲಿಕ್ ಹಿಯರಿಂಗ್|ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು?

ಅಂಕೋಲ:- ಅಂಕೋಲಾದ (ankola)ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ವಿಚಾರವಾಗಿ ಇಂದು ಅಂಕೋಲದ ಸತ್ಯಗ್ರಹ ಸ್ಮಾರಕ ಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಲಾಗುತಿದ್ದು ಜನರ ವಿರೋಧದ ನಡುವೆಯೂ ಹೊರಗಿನ ಜನರಿಗೆ ಹಣದ ಆಮಿಷ ನೀಡಿ ಜನರ ಬೆಂಬಲ ಪಡೆಯಲು ಜೆಎಸ್‌ಡಬ್ಲ್ಯು ಕಂಪೆನಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
11:31 AM Aug 22, 2025 IST | ಶುಭಸಾಗರ್
ಅಂಕೋಲ:- ಅಂಕೋಲಾದ (ankola)ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ವಿಚಾರವಾಗಿ ಇಂದು ಅಂಕೋಲದ ಸತ್ಯಗ್ರಹ ಸ್ಮಾರಕ ಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಲಾಗುತಿದ್ದು ಜನರ ವಿರೋಧದ ನಡುವೆಯೂ ಹೊರಗಿನ ಜನರಿಗೆ ಹಣದ ಆಮಿಷ ನೀಡಿ ಜನರ ಬೆಂಬಲ ಪಡೆಯಲು ಜೆಎಸ್‌ಡಬ್ಲ್ಯು ಕಂಪೆನಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ankola ಕೇಣಿ ಪಬ್ಲಿಕ್ ಹಿಯರಿಂಗ್ ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು

ಕೇಣಿ ಪಬ್ಲಿಕ್ ಹಿಯರಿಂಗ್|ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು?

Advertisement

ಅಂಕೋಲ:- ಅಂಕೋಲಾದ (ankola)ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ವಿಚಾರವಾಗಿ ಇಂದು ಅಂಕೋಲದ ಸತ್ಯಗ್ರಹ ಸ್ಮಾರಕ ಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಲಾಗುತಿದ್ದು ಜನರ ವಿರೋಧದ ನಡುವೆಯೂ ಹೊರಗಿನ ಜನರಿಗೆ ಹಣದ ಆಮಿಷ ನೀಡಿ ಜನರ ಬೆಂಬಲ ಪಡೆಯಲು ಜೆಎಸ್‌ಡಬ್ಲ್ಯು ಕಂಪೆನಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಂಕೋಲದ ಕೇಣಿ ಪಬ್ಲಿಕ್ ಹಿಯರಿಂಗ್ ನಲ್ಲಿ ಬಿಗಿ ಪೊಲೀಸ್ ಬಂದವಸ್ತ್

4,119ಕೋಟಿ ರೂ. ವೆಚ್ಚದಲ್ಲಿ ಅಂಕೋಲಾ ಕೇಣಿಯಲ್ಲಿ ಜೆಎಸ್ ಡಬ್ಲೂ ಕಂಪನಿಯಿಂದ ಖಾಸಗಿ ಬಂದರು ನಿರ್ಮಾಣಕ್ಕೆ ಈಗಾಗಲೇ ಸರ್ವೆ ಕಾರ್ಯ ಪೂರ್ಣ ಗೊಂಡಿದೆ. ಈ ನಡುವೆ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಣೆಗೆ ಆಡಳಿತ ಮುಂದಾಗಿದೆ.ಅಂಕೋಲಾದ ವಿವಿಧೆಡೆಯಿಂದ ಹಣದ ಆಮಿಷ ನೀಡಿ ಬಂದರು ನಿರ್ಮಾಣಕ್ಕೆ ಪರವಾಗಿರಲು ಜೆ‌.ಎಸ್.ಡಬ್ಲು ಕಂಪನಿಯು ಹಣ ನೀಡಿ ಜನರನ್ನು ಕರೆಸಿದ್ದು ಕುಮಟಾ ಸೇರಿದಂತೆ ಹೊರಗಿನ ತಾಲೂಕಿನ ಜನರನ್ನು ನಕಲಿ ಸಹಿಗಳ ಜತೆ ಬಂದರು ಪರವಾಗಿರಲು ಆಹ್ವಾನಿಸಿದೆ.
ಸಾಕ್ಷಿ ಸಮೇತ ಮಾಧ್ಯಮದ ಮುಂದೆ ಜೆಎಸ್‌ಡಬ್ಲ್ಯೂ ಕಂಪೆನಿಯ ಕುತಂತ್ರವನ್ನು ಅಂಕೋಲಾ ಕೇಣಿ ಜನರು ಬಯಲಿಗೆಳೆದಿದ್ದಾರೆ. ಅಂಕೋಲಾ ಬೊಗ್ರಿಬೈಲ್‌ನಿಂದ ಪ್ರೇಮಾ ಎಂಬಾ ಮಹಿಳೆ,ಹಿರೆಗುತ್ತಿಯ ಯುವಕರು ಸಿಕ್ಕಿಬಿದ್ದಿದ್ದು ಕೇಣಿಯ ಜನ ತರಾಟೆ ತೆಗೆದುಕೊಂಡರು.

ಹಣ ಪಡೆದು ಬೆಂಬಲಿಸಲು ಬಂದ ಮಹಿಳೆಯರು ಹಾಗೂ ಇತರರು

ಅಲ್ಲದೇ, ಹಲವರಿಗೆ ತಲಾ 500ರೂ‌. ಹಣದ ಆಮಿಷ ನೀಡಿ ನೂರಾರು ಜನರನ್ನು ಜೆ.ಎಸ್.ಡಬ್ಲು ಕಂಪನಿ ಕರೆಯಿಸಿರುವ ಆರೋಪ ಕೇಳಿಬಂದಿದೆ.ಜನರ ವಿರೋಧದ ನಡುವೆಯೂ ಸ್ಥಳೀಯ ತಾಲೂಕಿನ ಜನರನ್ನು ಕರೆಯಿಸಿ ಬಂದರು ಬೇಕೆಂದು ಸಹಿ ಪತ್ರ ನೀಡಲಾಗ್ತಿದೆ,ನಮ್ಮ ಮಕ್ಕಳನ್ನು ಕರೆದುಕೊಂಡು ಬೀದಿಗಿಳಿದು ಹೋರಾಟ ಮಾಡುತ್ತೇವೆ ,ಜನರ ವಿರೋಧದ ನಡುವೆಯೂ ಬಂದರು ನಿರ್ಮಾಣಕ್ಕೆ ಮುಂದಾದ್ರೆ ಮುಖಂಡರು, ಕಂಪೆನಿ ಸಿಬ್ಬಂದಿ ಮೇಲೂ ಕೈ ಎತ್ತುವ ಎಚ್ಚರಿಕೆ ಯನ್ನು ಕೇಣಿ ಜನರು ನೀಡಿದ್ದಾರೆ.
ಬಂದರು ಬೇಕೆಂದು ನಕಲಿ ಸಹಿ ಹಾಕಿ ಬಂದವರ ವಿರುದ್ಧ ಕಾನೂನು ಕ್ರಮಕ್ಕೆ ಕೇಣಿ ಜನರು ಒತ್ತಾಯಿಸಿದ್ದು ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ