For the best experience, open
https://m.kannadavani.news
on your mobile browser.
Advertisement

ಚುನಾವಣೆಗಾಗಿ ಪರೇಶ್ ಮೇಸ್ತಾ ಪ್ರಕರಣ ಬಳಸಬೇಡಿ- ನೋವು ತೋಡಿಕೊಂಡ ಹಿಂದೂ ಕಾರ್ಯಕರ್ತರು

07:06 PM May 05, 2024 IST | ಶುಭಸಾಗರ್
ಚುನಾವಣೆಗಾಗಿ ಪರೇಶ್ ಮೇಸ್ತಾ ಪ್ರಕರಣ ಬಳಸಬೇಡಿ  ನೋವು ತೋಡಿಕೊಂಡ ಹಿಂದೂ ಕಾರ್ಯಕರ್ತರು
GILANI Enterprises karwar
Gilani Supermarket Karwar

ಕಾರವಾರ: ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನ ಬಳಸಿಕೊಳ್ಳಬೇಡಿ ಎಂದು ಹಿಂದೂ ಕಾರ್ಯಕರ್ತ ಶ್ರೀರಾಮ್ ಜಾದೂಗಾರ್ ಹೇಳಿದರು.

Advertisement

ಇದನ್ನೂ ಓದಿ:-ಪರೇಶ್ ಮೇಸ್ತಾ ಹತ್ಯೆ ಪ್ರಕರಣ-122 ಜನರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ

ಕಾರವಾರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಸುಮಾರು 95 ಯುವಕರ ಮೇಲೆ‌ ಕೇಸ್ ಹಾಕಲಾಗಿತ್ತು. ಇನ್ನೂ ಕೋರ್ಟ್ ಕಚೇರಿ ಎಂದು ತಿರುಗಾಡುತ್ತಿದ್ದೇವೆ. ಆದರೆ ಯಾವ ಬಿಜೆಪಿ ಮುಖಂಡರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಚುನಾವಣೆ ಬಂದಾಗ ಪರೇಶ್ ಮೇಸ್ತಾ ಪ್ರಕರಣ ಇವರಿಗೆ ನೆನಪಿಗೆ ಬರುತ್ತದೆ. ಕಾಗೇರಿಯವರು ಆ ಸಂದರ್ಭದಲ್ಲಿ ನಮಗೆ ಏನು ಸಹಾಯ ಮಾಡಿದ್ದಾರೆ ಎಂದು ತಿಳಿಸಲಿ, ರಾಜಕೀಯ ಬಳಕೆಗೆ ನಮ್ಮನ್ನ ಬಳಕೆ ಮಾಡಿಕೊಳ್ಳಲು ಹೊರಟಿರುವುದು ನಮಗ ಅತೀವ ಬೇಸರ ತರಿಸಿದೆ ಎಂದರು.

ಪರೇಶ್ ಮೇಸ್ತಾ ಪ್ರಕರಣದ ಸಂದರ್ಭ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಕಾಗೇರಿಯವರು ಹೇಳುತ್ತಾರೆ. ಹಾಗಿದ್ದರೆ ಕಾಗೇರಿಯವರು ಅಂದು ತನಿಖೆ ಸರಿಯಾಗಿ ಮಾಡುವಂತೆ ಎಷ್ಟು ಪತ್ರ ಬರೆದಿದ್ದಾರೆ? ಯಾರೊಂದಿಗೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ? ಪರೇಶ್ ಮೇಸ್ತಾ ಪ್ರಕರಣದಲ್ಲಿ ಕೇಸು ಹಾಕಿಸಿಕೊಂಡ ನಂತರ ನಮ್ಮ ಸಹಾಯಕ್ಕೆ ಯಾವ ಬಿಜೆಪಿಗರು ಬರದೇ ಪರದಾಡಿದ್ದೇವೆ. ಚುನಾವಣೆಯ ಸಂದರ್ಭದಲ್ಲಿ ಕಂಡವರ ಮನೆಯ ಮಕ್ಕಳನ್ನ ಬಾವಿಗೆ ತಳ್ಳುವ ಕೆಲಸ ಕಾಗೇರಿಯವರು ಮಾಡಬಾರದು ಎಂದರು.

ಕಳೆದ ಬಾರಿ ಸ್ಪೀಕರ್ ಆಗಿದ್ದಾಗ ನಮ್ಮ ಪರ ಕಾಗೇರಿಯವರು ಏನು ಮಾಡಿದ್ದಾರೆ? ಏಳು ವರ್ಷದಿಂದ ನಾವು ಕೋರ್ಟ್ ಗೆ ಓಡಾಡುತ್ತಿದ್ದೇವೆ. ಹಿಂದೂ ಕಾರ್ಯಕರ್ತರಾದ ನಾವು ಸದ್ಯ ನೆಮ್ಮದಿಯಾಗಿ ಇದ್ದೇವೆ. ಚುನಾವಣೆಗಾಗಿ ಮತ್ತೆ ನಮ್ಮನ್ನ ಎಳೆದು ತಂದು ಕಂಡವರ ಮನೆಯ ಬಾವಿಗೆ ದಬ್ಬಬೇಡಿ. ಪರೇಶ್ ಮೇಸ್ತಾ ಹತ್ಯೆಯಾದಾಗ ನಾವು ಗಲಭೆಯಲ್ಲಿ ಪಾಲ್ಗೊಂಡಿದ್ದೆವು ಎಂದು ಕೇಸು ಹಾಕಿದ್ದರು. ನಂತರ ಸಿಬಿಐಗೆ ವಹಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ‌ಸರ್ಕಾರ ಇದ್ದರೂ ನ್ಯಾಯ ಕೊಡಿಸಲಾಗಿಲ್ಲ. ಈಗ ಚುನಾವಣೆಗಾಗಿ, ತಮ್ಮ ತೆವಲಿಗಾಗಿ ನಮ್ಮನ್ನ ಬಳಸಿಕೊಳ್ಳಲು ಹೊರಟಿದ್ದಾರೆ ಎಂದರು.

ದೊಡ್ಡ ನಾಯಕರು ಗಲಾಟೆ ಆದಾಗ ಕಾರಿನಲ್ಲಿ ಕುಳಿತು ನಾಪತ್ತೆಯಾದರು. ಲಾಠಿ ಚಾರ್ಜ್ ಎಂದಾಗ ಹೊಡೆತ ತಿಂದವರು ಹಿಂದುಳಿದ ವರ್ಗದ ನಾವುಗಳು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ 2020ರಲ್ಲಿ ಕಲಂ 107 ಅಡಿ ನಮ್ಮ‌ ಮೇಲೆ ದೂರು ದಾಖಲಿಸಲಾಗಿದೆ. ಶಾಸಕ ದಿನಕರ ಶೆಟ್ಟಿ ಈವರೆಗೆ ನಮಗೆ ಸ್ಪಂದಿಸಿಲ್ಲ ಎಂದರು.

ಇನ್ನೋರ್ವ ನಿತ್ಯಾನಂದ ಪಾಲೇಕರ್ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗುವ ಅಭಿವೃದ್ಧಿ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಿ. ದ್ವೇಷ ಮೂಡಿಸುವಂತಹ, ಪರಸ್ಪರ ಜಗಳ ಮಾಡುವಂತಹ ರಾಜಕೀಯ ಮಾಡಬೇಡಿ. ಕೋಮು ಗಲಭೆ ಕಿಚ್ಚು ಹಚ್ಚಿಸುವ ಬದಲು ಅಭಿವೃದ್ಧಿ ಕೆಲಸ ಮಾಡಿ ಎಂದು ಮನವಿ ಮಾಡಿದರು.

ಈ ಹಿಂದೆ ಪರೇಶ್ ಮೇಸ್ತಾ ಹತ್ಯೆ ಪ್ರಕರಣ ಬಿಜೆಪಿ ಗೆ ವರವಾಗಿ ರಾಜ್ಯದಲ್ಲಿ ಬಿಜೆಪಿ ಶಾಸಕರು ಅತೀ ಹೆಚ್ಚು ಆಯ್ಕೆ ಆಗಲು ಕಾರಣವಾಗಿತ್ತು. ಆದರೇ ಸಿಬಿಐ ತನಿಖೆ ನಂತರ ಸಹಜ ಸಾವು ಎಂದು ಕೋರ್ಟ ತೀರ್ಪು ನೀಡಿತ್ತು. ಇನ್ನು ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಲವು ಯುವಕರು ಈವರೆಗೂ ಕೋರ್ಟ ಅಲೆಯುತಿದ್ದು ಬಿಜೆಪಿಗರು ಮಾತ್ರ ಈ ಸಾವನ್ನು ಸಹಜ ಸಾವಲ್ಲ ಹತ್ಯೆ ಎಂದು ವಾದಿಸುತ್ತಲೇ ಬಂದಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ