Sirsi :ಶಿರಸಿ ಸ್ಥಳೀಯ ಪತ್ರಿಕೆಯ ವರದಿಗಾರನ ಬೂಟು ಬಿಚ್ಚಿಸಿದ ಎಸ್.ಪಿ ಎಂ ನಾರಾಯಣ್ ! ನೀತಿ ಪಾಠ? ಏನದು?
Sirsi :ಶಿರಸಿ ಸ್ಥಳೀಯ ಪತ್ರಿಕೆಯ ವರದಿಗಾರನ ಬೂಟು ಬಿಚ್ಚಿಸಿದ ಎಸ್.ಪಿ ಎಂ ನಾರಾಯಣ್ ! ನೀತಿ ಪಾಠ? ಏನದು?

ಕಾರವಾರ :- ಪತ್ರಕರ್ತರು ಎಂದಕೂಡಲೇ ತಮಗೊಂದು ಕೋಡು ಎಂದು ಹಲವು ಪತ್ರಕರ್ತರು ಮಾಡುವುದುಂಟು. ತಾವು ಹೇಳಿದ್ದೇ ವೇದ ,ತಾವು ಮಾಡಿದ್ದೇ ನಿಯನ ಎಂದುಕೊಂಡು ಪೊಲೀಸ್ ಇಲಾಖೆಯಲ್ಲಿ ಸುದ್ದಿ ನೆಪದಲ್ಲಿ ಮಾಡಬಾರದ್ದನ್ನು ಮಾಡುತ್ತಾ , ಇಲಾಖೆ ಸ್ನೇಹ ದುರ್ಬಳಕೆ ಮಾಡಿಕೊಳ್ಳುವ ಅನೇಕ ಪತ್ರಕರ್ತರು ಎಂದು ಹೇಳಿಕೊಳ್ಳುವವರಿದ್ದಾರೆ. ಇವರಿಗೆ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದಿದ್ರೆ ಪೊಲೀಸರು ದಂಡ ಹಾಕುವಂತಿಲ್ಲ. ವಾಹನದ ಇನ್ಸುರೆನ್ಸ್ ಇಲ್ಲದಿದ್ದರೇ ಕೇಳುವಂತಿಲ್ಲ. ತಮ್ಮ ವಾಹನಕ್ಕೆ ಪಲ್ಯುಷನ್ ಸರ್ಟಿಫಿಕೇಟ್ ಇಲ್ಲದಿದ್ರೆ ಯಾರು ಹೇಳುವಂತಿಲ್ಲ. ಹೀಗೆ ಅಕ್ಕಚ್ಚು ತಿಂದು ಕೊಬ್ಬಿದ ಪತ್ರಕರ್ತ ಎಂದು ಹೇಳಿಕೊಳ್ಳುವ "ಕಾಡಿನ ರಾಜ" ಎಂದು ಬೀಗುತಿದ್ದ ಶಿರಸಿಯ ಸ್ಥಳೀಯ ಪತ್ರಕರ್ತನಿಗೆ ಇಂದು ಶಿರಸಿಯ ಸಂಚಾರಿ ಠಾಣೆಗೆ ಭೇಟಿ ನೀಡಿದ ಎಸ್.ಪಿ ಎಂ ನಾರಾಯಣ್ ಆತ ಧರಿಸಿದ್ದ ಬೂಟು ಬಿಚ್ಚಿಸಿ ನೀತಿ ಪಾಠ ಹೇಳಿದ್ದಾರೆ.
ಇದನ್ನೂ ಓದಿ:-Sirsi : ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ನ್ಯೂ ಮಾರ್ಕೇಟ್ ಠಾಣೆ ಹೆಡ್ ಕಾನಸ್ಟೇಬಲ್ ! ವಿಡಿಯೋ ವೈರಲ್
" ಇನ್ನು ಈ ಪತ್ರಕರ್ತ ತನ್ನ ಕಾರಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಲಾಟಿ (ಅಶೋಕ ಚಕ್ರ ಚಿಹ್ನೆ ಇರುವುದು) ಹಾಗೂ ಬೆಲ್ಟ್ ಸಹ ಸದಾ ಇಟ್ಟು ಕೊಂಡು ಓಡಾಡುತ್ತಿರುವ ಬಗ್ಗೆ ಕೆಲವರು ಫೋಟೋ ಸಹಿತ ದೂರಿದ್ದಾರೆ. ಪತ್ರಕರ್ತನ ಬಳಿ ಪೆನ್ನಿರಬೇಕು,ಲಾಠಿ ,ಪೊಲೀಸ್ ಬೆಲ್ಟ್ ಏಕೆ ಇಟ್ಟುಕೊಳ್ಳುತ್ತಾರೆ? ಎಂಬ ಪ್ರಶ್ನೆ ಸಾರ್ವಜನಿಜರದ್ದು."
ಈತನ ವಿರುದ್ಧ ಶಿರಸಿ ಠಾಣೆಯಲ್ಲಿ ಹಲವು ಪ್ರಕರಣವಿತ್ತು. ಜೊತೆಗೆ ಈ ಹಿಂದೆ ಈತನಿಗೆ ಪೊಲೀಸ್ ಇಲಾಖೆ MOB ಕಾರ್ಡ ಜಾರಿ ಮಾಡಿತ್ತು. ಹೆಬ್ಯುಚಲ್ ಅಪರಾಧಿ ಎಂಬ ಹಣೆಪಟ್ಟಿ ಇದೆ . ಇನ್ನು ಈತನನ್ನು ಪೊಲೀಸರೇ ಹತ್ತಿರ ಬಿಟ್ಟುಕೊಂಡು ಮೆರೆಸುತಿದ್ದರು. ಕೆಲವರ ಬಳಿ ಹಫ್ತ ವಸೂಲಿ ಮಾಡುತ್ತಾನೆ ,ಪೊಲೀಸರಿಗೆ ಸಹ ನೀಡುತ್ತಾನೆ ಎಂಬ ಆರೋಪ ಈತನ ಮೇಲಿದೆ. ಕೆಲವು ಪತ್ರಕರ್ತರ ಬೆಂಬಲದಲ್ಲಿ ಈತ ದೊಡ್ಡ ವರದಿಗಾರನಂತೆ ಶಿರಸಿಯಲ್ಲಿ ಮೆರೆಯುತ್ತಿರುವುದು ಮಾತ್ರ ಪತ್ರಕರ್ತರಿಗೆ ಅವಮಾನ ಎನಿಸುವಂತಾಗಿದೆ ಎಂದು ಜನ ಹೇಳುತ್ತಾರೆ.
ಹೌದು ಶಿರಸಿಯ ಸಂಚಾರಿ ಠಾಣೆಗೆ ಭೇಟಿ ನೀಡಿದ್ದ ಎಸ್.ಪಿ ರವರನ್ನು ಭೇಟಿಯಾಗಲು ಪತ್ರಕರ್ತರು ತೆರಳಿದ್ದರು . ಈವೇಳೆ ಪತ್ರಕರ್ತರ ಸಂದಿಯಲ್ಲಿ ಇದ್ದ ಸ್ಥಳೀಯ ಪತ್ರಿಕೆ ವರದಿಗಾರನ ಕಾಲಿನ ಮೇಲೆ ದೃಷ್ಟಿ ಹೋಗಿದೆ. ಪೊಲೀಸ್ ಇಲಾಖೆಯ ಅಧಿಕಾರಿ ಧರಿಸುವ ಬೂಟ್ ನನ್ನು ಆತ ಹಾಕಿದ್ದನು. ಈ ಬೂಟ್ ಎಲ್ಲಿ ಕೊಂಡಿರಿ ಎಂದು ಕೇಳಿದ್ದಾರೆ. ಆಗ ತೇಪೆ ಉತ್ತರ ನೀಡಿದ್ದಾನೆ .ಆದ್ರೆ ಇದು ಇಲಾಖೆಗೆ ಸರಬರಾಜಾಗುವ ಬೂಟ್ ಆಗಿದ್ದು ಗಮನಕ್ಕೆ ಬಂದಿದ್ದು ತಕ್ಷಣ ಆತನಿಗೆ ಬೂಟ್ ಬಿಚ್ಚುವಂತೆ ಹೇಳಿದ್ದಾರೆ.
ತಪ್ಪಿನ ಅರಿವಾಗಿ ಬೂಟ್ ಬಿಚ್ಚಿ ಜೊಪ್ಪು ಮೋರೆಯಲ್ಲಿ ಬಾಯಲ್ಲಿದ್ದ ಗುಟುಕ ನುಂಗಿ ಅಪರಾಧಿಯಂತೆ ನಿಂತಿದ್ದಾನೆ. ಆಗ ಯಾಕೆ ಆ ಬೂಟ್ ಹಾಕಬಾರದು , ಅದರ ಬಗ್ಗೆ ತಿಳಿಸಿ ಹೇಳಿ ತಮ್ಮ ಕರ್ಚಿನಿಂದ ಹೊಸದೊಂದು ಬೂಟ್ ಕೊಡಿಸಿದ್ದಾರೆ.
ತಪ್ಪು ಮಾಡುವವರ ವಿರುದ್ಧ ಬರೆಯುವ ಪತ್ರಕರ್ತರು ತಪ್ಪು ಮಾಡದಂತೆ ಇರಬೇಕು . ಆದರೇ ತಾವು ಮಾಡುವ ತಪ್ಪನ್ನು ಮುಚ್ಚಿಹಾಕಿ ಬೇರೆಯವರ ಮೇಲೆ ಬೊಟ್ಟು ಮಾಡುವವ ಪತ್ರಕರ್ತನಾಗಲು ಸಾಧ್ಯವಿಲ್ಲ.
ಇಂದು ಎಸ್.ಪಿ ರವರ ನೀತಿ ಪಾಠ ತಪ್ಪು ದಾರಿಗೆ ಹೋಗುವ ಪತ್ರಕರ್ತರಿಗೆ ಎಚ್ಚರಿಕೆ ಗಂಟೆ ಇದ್ದಂತೆ ಅಲ್ಲವೇ. ಕಸ ಗುಡಿಸುವ ಪೊರಕೆ ಸರಿಯಾಗಿದ್ದರೇ ನೆಲ ಸ್ವಚ್ಛವಾಗಿರುತ್ತದೆ ಎಂಬುದು ಸತ್ಯ ಅಲ್ಲವೇ?