Karwar | ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಕಾರವಾರ :- ಮೀನು (fish) ತುಂಬಿಕೊಂಡಿದ್ದ ಬೊಲೆರೋ ವಾಹನ ಕಾರ್ಮಿಕನ (labore )ಮೇಲೆ ಹತ್ತಿ ಸ್ಥಳದಲ್ಲೇ ಕಾರ್ಮಿಕ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttra kannda) ಕಾರವಾರದ ಬೈತಕೋಲ್ ನಲ್ಲಿ ನಡೆದಿದೆ.
ಮೃತ ಕಾರ್ಮಿಕ ಹಾವೇರಿ ಮೂಲದ ಹನುಮಂತ್ ವಡ್ಡರ್ (27) ಎಂದು ಗುರುತಿಸಲಾಗಿದ್ದು ಕಾರವಾರದ ಬೈತಕೋಲ್ ನಲ್ಲಿ ಮೀನಗಾರಿಕಾ ಕಾರ್ಮಿಕನಾಗಿ ದುಡಿಯುತಿದ್ದು ನಿನ್ನೆ ದಿನ ಕೊಪ್ಪಳದ ಐದುಜನ ಸ್ನೇಹಿತರೊಂದಿಗೆ ಕೆಲಸ ಮುಗಿಸಿ ಬಂದರಿನಲ್ಲಿ ಮಲಗಿದ್ದನು.
ಇದನ್ನೂ ಓದಿ:-Daily Astrology| ದಿನಭವಿಷ್ಯ 03 actober 2024
ಮುಂಜಾನೆ ಮೀನುತುಂಬಿಕೊಂಡಿದ್ದ ಬೊಲೆರೋ ವಾಹನ ಹೊರಡುವ ಸಮಯದಲ್ಲಿ ಚಾಲಕ ಈ ಕಾರ್ಮಿಕರು ಮಲಗಿರುವುದನ್ನು ನೋಡದೇ ವಾಹನ ಚಲಾಯಿಸಿದ್ದು ಈ ತನ ಮೇಲೆ ಹರಿದು ಸ್ಥಳದಲ್ಲೇ ಮೃತಟ್ಟಿದ್ದಾನೆ.
ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದಿನ ತಿಂಗಳು ಮದುವೆಗೆ ಸಿದ್ದನಾಗಿದ್ದ ಕಾರ್ಮಿಕ.
ಘಟನೆಯಲ್ಲಿ ಮೃತನಾದ ಹನುಮಂತ್ ವಡ್ಡರ್ ಗೆ ವಿವಾಹ ಸಹ ನಿಶ್ಚಯವಾಗಿದ್ದು ಮುಂದಿನ ತಿಂಗಳು ವಿವಾಹವಾಗುವವನಿದ್ದ ಆದರೇ ವಿಧಿ ಹಸಮಣೆ ಏರುವ ಮುಂಚೆ ಚಟ್ಟ ಏರುವಂತೆ ಮಾಡಿದ್ದು ಮಾತ್ರ ದುರಂತ.