Karwar: ಮಾಜಾಳಿ ತನಿಖಾ ಠಾಣೆಯಲ್ಲಿ ಮಂಡ್ಯದ ಲಾರಿ ಚಾಲಕನಿಗೆ ಥಳಿತ |ಅಬಕಾರಿ ಅಧಿಕಾರಿಗಳ ತಲೆದಂಡ
Karwar: ಮಾಜಾಳಿ ತನಿಖಾ ಠಾಣೆಯಲ್ಲಿ ಮಂಡ್ಯದ ಲಾರಿ ಚಾಲಕನಿಗೆ ಥಳಿತ |ಅಬಕಾರಿ ಅಧಿಕಾರಿಗಳ ತಲೆದಂಡ
ಕಾರವಾರ :- ಉತ್ತರ ಕನ್ನಡ ಕನ್ನಡ ಜಿಲ್ಲೆಯ ಕಾರವಾರ (karwar) ತಾಲೂಕಿನ ಗೋವಾ ಗಡಿಯ ಮಾಜಾಳಿ ಚೆಕಪೊಸ್ಟ ನಲ್ಲಿ ಅಬಕಾರಿ ಅಧಿಕಾರಿಗಳಿಂದ ಲಾರಿ ಚಾಲಕನ ಮೇಲೆ ಹಲ್ಲೆ ಪ್ರಕರಣಕ್ಕೆ ಇದೀಗ ಟ್ವಿಷ್ಟ್ ಸಿಕ್ಕಿದೆ.
ಅಧಿಕಾರಿ ಹಲ್ಲೆ ವಿಡಿಯೋ ನೋಡಿ:-
ಮಾಧ್ಯಮಗಳ ವರದಿ ಬೆನ್ನಲ್ಲೇ ಇಬ್ಬರು ಅಬಕಾರಿ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಅಬಕಾರಿ ಆಯುಕ್ತರಿಂದ ಆದೇಶ ಮಾಡಿದ್ದಾರೆ.
ಆದೇಶ ಪ್ರತಿ:-
ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಮಾಜಾಳಿ ತನಿಖಾ ಠಾಣೆ ಅಬಕಾರಿ ನೀರಿಕ್ಷಕರಾಗಿದ್ದ ಸದಾಶಿವ ಕೊರ್ತಿ ಯನ್ನ ವುಡ್ ಪಕ್ಕರ್ ಡಿಸ್ಟಲರೀಸ್ ಪ್ಲಾಂಟ್ ಉಪನೀರಿಕ್ಷಕರಾಗಿ ವರ್ಗಾವಣೆ ಮಾಡಿದರೇ ಕೆ.ಎಸ್.ಬಿ.ಸಿ ಎಲ್ ಸಿಂಧನೂರು ಡಿಪೋ ಅಬಕಾರಿ ಪೇದೆ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಅಕ್ಟೋಬರ್ 15 ರಂದು ಗೋವಾ (goa)ದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ಲೋಡ್ ಲಾರಿಯಲ್ಲಿ ಒಯ್ಯುತ್ತಿದ್ದ
ಮಂಡ್ಯದ ಚಾಲಕ ಕುಮಾರ ಗೆ ಲೋಡ್ ನಲ್ಲಿ ಎನ್ ಒಯ್ಯುತ್ತಿದ್ದಿಯಾ ಓಪನ್ ಮಾಡುವಂತೆ ಅಬಕಾರಿ ಸಿಬ್ಬಂಧಿ ಕೇಳಿದ್ರು,ಲೋಡ್ ಬಿಚ್ಚಿ ತೊರಿಸೊಕೆ ಆಗಲ್ಲ, ಬೇಕಾದ್ರೆ ನಿವೇ ನೊಡ್ಕೊಳ್ಳಿ ಎಂದು ಚಾಲಕ ಹೇಳಿದ್ದಕ್ಕೆ ಕೊಪಗೊಂಡು ಅಬಕಾರಿ ಅಧಿಕಾರಿಗಳು ಹಲ್ಲೆ ಮಾಡಿದ್ದರು.
ಈ ಕುರಿತು ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿದ ಸಿಸಿ ಕ್ಯಾಮರಾ ದೃಶ್ಯ ಸಹ ಮಾಧ್ಯಮದಲ್ಲಿ ಬಿತ್ತರಿಸಲಾಗುತ್ತು.
ಇದನ್ನೂ ಓದಿ:-Karwar| ಫೇಮಸ್ ತಂಪು ತಂಪು ಮಸಾಲಾ ಪಾನಿಯ ಹೇಗಿರುತ್ತೆ ನೋಡಿ.
ಇದೀಗ ಇಬ್ಬರು ಸಿಬ್ಬಂಧಿಗಳನ್ನ ವರ್ಗಾವಣೆ ಮಾಡಿ ಆದೇಶ ಮಾಡಿದ್ದು ಈ ಬಗ್ಗೆ ಚಿತ್ತಾಕುಲ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.
ಇದಲ್ಲದೇ ಅಧಿಕಾರಿಗಳ ವರ್ತನೆ ವಿರೋಧಿಸಿ october 21 ರಂದು ಲಾರಿ ಚಾಲಕ ಮತ್ತು ಮಾಲೀಕರ ಸಂಘ ಗಡಿಯಲ್ಲಿ ರಸ್ತೆ ತಡೆ ನಡೆಸುವುದಾಗಿ ಸಹ ಹೇಳಿತ್ತು.