ನನ್ನ ವಿರುದ್ಧ ಆರೋಪ ಮಾಡಿದ್ರೆ ನಿವೃತ್ತಿ- ಇಟ್ಟು ರಾಜಕೀಯ ಸವಾಲು ಹಾಕಿದ ಮಾಜಿ ಶಾಸಕ ಸತೀಶ್ ಸೈಲ್!
'ಕಾರವಾರ :-ಈಗಲ್ ಇನ್ಫಾಂ ಇಂಡಿಯಾ ಲಿ. ನನ್ನ ಹೂಡಿಕೆಯಲ್ಲಿ ಕಂಪನಿಯಿಂದ ಇರುವುದನ್ನು ಮಾಡಿದರೆ, ಶಾಶ್ವತವಾಗಿ ರಾಜಕೀಯ ದೂರವಾಗುತ್ತೇನೆ. ಇಲ್ಲದಿದ್ದರೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು' ಎಂದು ಮಾಜಿ ಶಾಸಕ ಸತೀಸ ಸೈಲ್ ಸವಾಲು ಹಾಕಿದ್ದಾರೆ.
ಕಾರವಾರ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟು ಮಾತನಾಡಿದ ಅವರು ನಗರದ 6.5 ಕೋಟಿ ರೂ. ವೆಚ್ಚದ ಕಾಮಗಾರಿ ಪಡೆದಿರುವ ಈಗಲ್ ಇನ್ಫಾ ಇಂಡಿಯಾ ಲಿ. ಕಂಪನಿಯಲ್ಲಿ ನನ್ನ ಹೂಡಿಕೆ ಇದೆ ಎಂದು ಶಾಸಕಿ ಆರೋಪಿಸಿದ್ದಾರೆ.
ಅವರು ಅಪ್ಪಟ ಸುಳ್ಳು ಹೇಳಿದ್ದಾರೆ. ಕಂಪನಿಯಲ್ಲಿ ನಯಾ ಪೈಸೆ ಹೂಡಿಕೆ ಆಗಿದ್ದರೆ, ರಾಜಕೀಯದಿಂದ ದೂರವಾಗಿ ಕಾರವಾರ ಕೂಡ ಬಿಡುತ್ತೇನೆ ಎಂದರು.
ಶಾಸಕಿ ರೂಪಾಲಿ ನಾಯ್ಕ ಚುನಾವಣೆಯಲ್ಲಿ ಗೆದ್ದ ಎರಡನೇ ದಿನದಲ್ಲಿ ಫೋನ್ ಮಾಡಿದ್ದರು. ಬೈತಖೋಲ್ ಬಳಿ ಕೆಲವರು ಕಾರು ಅಡ್ಡ ಹಾಕಿದ್ದಾರೆ ಏನು ಮಾಡಬೇಕು ಎಂದು ಕೇಳಿದರು. ಆಗ ಅವರಿಗೆ ಸಹಾಯ ಮಾಡಿದ್ದೆ. ಅದು ಸುಳ್ಳು ಎಂದಾದರೆ ಶಾಸಕಿ ರೂಪಾಲಿ ನಾಯ್ಕ ಆರ್ಯದುರ್ಗ ದೇವರ ಎದುರು ಆಣೆ ಮಾಡಲಿ, ತಾನೂ ಮಾಡುತ್ತೇನೆ. ಜೀವ ಬೆದರಿಕೆಯಂಥ ಕ್ಷುಲ್ಲಕ ರಾಜಕಾರಣ ಎಂದೂ' ಎಂದು ಶಾಸಕಿಯ ಆರೋಪಗಳಿಗೆ ಚಾಲೆಂಜ್ ಮಾಡಿದರು.
ಶಾಸಕಿ ಅವರು ನನ್ನ ಲಿವರ್ ಹಾಳಾಗಿದೆ ಎಂದು ಹೇಳುತ್ತಿದ್ದಾರೆ. ನಮಗೂ ಕುಟುಂಬ, ಹೆಂಡತಿ, ಮಕ್ಕಳು ಇದ್ದಾರೆ. ಅವರ ಮೇಲೆ ಇಂಥ ಮಾತು ಯಾವ ರೀತಿ ಪ್ರಭಾವ ಬೀರುತ್ತದೆ. ಲಿವರ್ ಹಾಳಾಗಿದೆ ಎಂದು ಹೇಳಲು ರೂಪಾಲಿ ನಾಯ್ಕ ಏನು ತಜ್ಞರೇ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವರೇ ಹೋಗಿ ತಪಾಸಣೆ ಮಾಡುತ್ತಾರಾ?, ಇಷ್ಟೊಂದು ಕೆಳ ಮಟ್ಟದ ಸುಳ್ಳು ಆರೋಪ ಮಾಡಬಾರದು ಎಂದು ಖಾರವಾಗಿ ತಾಕೀತು ಮಾಡಿದ ಅವರು ಲಿವರ್ ತಪಾಸಣೆ ಮಾಡುವುದಾದರೆ, ಅವರದ್ದೂ ಮಾಡಲಿ ಎಂದರು.
ಮಾತು ಮಾತಿಗೂ ಜೈಲಿಗೆ ಹೋಗಿ ಬಂದವರು ಎಂದು ನನ್ನನ್ನು ಹಂಗಿಸುತ್ತಾರೆ. ಬಾಕಿಯವರ ಲಿಸ್ಟ್ ತೆಗೆದರೆ ದೊಡ್ಡದಾಗುತ್ತದೆ. ಅದೆಲ್ಲ ಈಗ ಬೇಡ. ಎಲ್ಲವನ್ನು ಇಲ್ಲಿಗೇ ಮುಗಿಸಬೇಕು ಎಂದುಕೊಂಡಿದ್ದೇನೆ. ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಡೆದ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಪೊಲೀಸರು ಪಡೆದಿದ್ದಾರೆ ಎಂದು ಗೊತ್ತಾಗಿದೆ. ಅದು ಇನ್ನೂ ಕೊಟ್ಟಿಲ್ಲ. ನಾವು ಕೊಟ್ಟ ಕೇಸು ಏನಾಯಿತು ಎನ್ನುವುದು ಇನ್ನೂ ಹೇಳಿಲ್ಲ ಶಾಸಕರು ಆರೋಪ ಮಾಡುವಾಗ ಸಾಕ್ಷಿ ಇಟ್ಟು ಮಾತನಾಡಲಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಈಗಲ್ ಇನ್ಫಾಂ ಇಂಡಿಯಾ ಲಿ. ಕಂಪನಿಯಲ್ಲಿ ತಾನೊಬ್ಬ ಉದ್ಯೋಗಿ. ಈ ಭಾಗದಲ್ಲಿ ಕಂಪನಿಯ ಕೆಲಸಗಳನ್ನು ನೋಡಕೊಳ್ಳುತ್ತೇನೆ. ಇದು ಬಿಟ್ಟರೆ ಕಂಪನಿಯೊಂದಿಗೆ ಬೇರೆ ಯಾವುದೇ ಹೆಚ್ಚುವರಿ ಸಂಧ ಇಲ್ಲ ಎಂದರು.
ದಾಖಲೆಗಳನ್ನು ನೋಡುವ ಮೂಲಕ ಶಾಸಕಿ ರೂಪಾಲಿ ನಾಯ್ಕ ಹೇಳಿರುವ ಮಾತುಗಳು ಸುಳ್ಳು ಎಂಬುದನ್ನು ನಿರೂಪಿಸಿದರು.