local-story
Karwar|ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕ ಸಾವು
ಕಾರವಾರ:-ಊಟ ಮಾಡುತ್ತಿದ್ದ ವೇಳೆ ಅನ್ನದ ಅಗಳು ಗಂಟಲಿಗೆ ಸಿಲುಕಿ ಯುವಕ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ. ಬಿಣಗಾ ಮಾಳಸವಾಡ ನಿವಾಸಿ ಅಮಿತ್ ಮಾಳಸೇರ್ (38) ಮೃತ ದುರ್ದೈವಿ. ವೃತ್ತಿಯಲ್ಲಿ ಕಾರು ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದ ಅಮಿತ್ ,ಕೆಲವು ದಿನಗಳಿಂದ ಅನಾರೋಗ್ಯವಿದ್ದ ಹಿನ್ನೆಲೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು .ಇಂದು ಮನೆಯಲ್ಲಿ ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ತೊಂದರೆ ಅನುಭವಿಸಿದ್ದ ಅಮಿತ್ ಗೆ ಮನೆಯವರು ತಕ್ಷಣ ನೀರು ಕುಡಿಸಿದರೂ ತಕ್ಷಣ ಕುಸಿದು ಬಿದ್ದ ಅಮಿತ್ ನನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ವೈದ್ಯರು ಪರೀಕ್ಷಿಸಿದಾಗ ಅದಾಗಲೇ ಗಂಟಲಲ್ಲಿ ಅನ್ನದ ಅಗಳು ಸಿಲುಕಿ ಮೃತಪಟ್ಟಿದ್ದನು.ಘಟನೆ ಸಂಬಂಧಿಸಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.09:25 AM Sep 01, 2025 IST